PSI Scam: ರಾಜ್ಯ ಸರ್ಕಾರಕ್ಕೆ 6 ಪ್ರಶ್ನೆ ಕೇಳಿದ ಪ್ರಿಯಾಂಕ್ ಖರ್ಗೆ

Published : Jul 13, 2022, 06:59 PM IST
PSI Scam: ರಾಜ್ಯ ಸರ್ಕಾರಕ್ಕೆ 6 ಪ್ರಶ್ನೆ ಕೇಳಿದ ಪ್ರಿಯಾಂಕ್ ಖರ್ಗೆ

ಸಾರಾಂಶ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೊಂದ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಸರ್ಕಾರಕ್ಕೆ ಆರು ಪ್ರಶ್ನೆ ಕೇಳಿದ್ದಾರೆ.

ಬೆಂಗಳೂರು, (ಜುಲೈ.13): ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮುಂದುವರೆಸಿದ್ದಾರೆ.

ಇಂದು(ಬುಧವಾರ) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರ ಕೇವಲ ಒಂದೇ ಸೆಂಟರ್ ನಲ್ಲಿ ಮಾತ್ರ ತೆನಿಖೆ ಮಾಡ್ತಿದೆ. ಬೇರೆ ಬೇರೆ ಕೇಂದ್ರಗಳಲ್ಲಿ ತೆನಿಖೆ ಮಾಡಿದ್ರೆ ಇನ್ನಷ್ಟು ಹಗರಣ ಹೊರಬಲಿದೆ. ಕೇವಲ ಕಲಬುರಗಿಯಲ್ಲಿ ಮಾತ್ರ ತೆನಿಖೆಯಾಗ್ತಿದೆ. ಇದು ಬೆಂಗಳೂರಿನತಕ ಬಂದ್ರೆ ಇವರ ಬಂಡವಾಳ ಬಯಲಾಗುತ್ತೆ ಅನ್ನೋ ಭಯ ರಾಜ್ಯ ಸರ್ಕಾರಕ್ಕಿದೆ ಎಂದು ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದರು. 

PSI Scam: ಬಂಧಿತ ಗಣಪತಿಗೂ ಆರಗಗೂ ಏನು ಸಂಬಂಧ?: ಹರಿಪ್ರಸಾದ್‌

ಪಿಎಸ್ ಐ ಹಗರಣದ ವಿಚಾರದಲ್ಲಿ ಸಲ್ಲಿಕೆಯಾದ ಚಾರ್ಜ್ ಶೀಟ್ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ರು ಅಲ್ದೇ  ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ರಾಜ್ಯ ಸರ್ಕಾರಕ್ಕೆ  ಆರು ಪ್ರಶ್ನೆಗಳನ್ನ ಹಾಕಿದ್ದಾರೆ. ಅವು ಈ ಕೆಳಗಿನಂತಿವೆ.

ಪ್ರಿಯಾಂಕ್ ಖರ್ಗೆಯ ಆರು ಪ್ರಶ್ನೆಗಳು
1) ಈ ತನಿಖೆ ನಡೆಯುತ್ತಿರುವುದು ಒಂದೇ ಸೆಂಟರ್ ನಲ್ಲಿ ಉಳಿದ ಸೆಂಟರ್ ಗಳ ತನಿಖೆ ಯಾವಾಗ ಮಾಡ್ತೀರಾ..?

2)  ಕ್ರೈಂ ಸಂಖ್ಯೆಗಳು ಹೊರ ಬಿಡುತ್ತಿಲ್ಲ. ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲ ಪೊಲೀಸ್ ಠಾಣೆಯಲ್ಲಿ‌ ಕೇಸ್ ದಾಖಲಾಗಿದೆ. ಅವುಗಳ ಸಂಖ್ಯೆ ಏಕೆ ಹೇಳ್ತಿಲ್ಲ

3) ಪಿಎಸ್ ಐ ಪರೀಕ್ಷೆ ಅಕ್ರಮವನ್ನು  ಸರ್ಕಾರಕ್ಕೆ ನ್ಯಾಯಾಂಗ ತನಿಖೆಗೆ ಕೊಡೋದಕ್ಕೆ ಯಾಕೆ ಹೆದರಿಕೆ..?

4) ಅಮ್ರತಾಪೌಲ್ ಗೆ  ಯಾಕೆ‌ ಹೆದರುತ್ತಿದ್ದೀರಾ..? ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡಲು ಯಾಕೆ ನೀವು ಬಿಡುತ್ತಿಲ್ಲ, ಮ್ಯಾಜಿಸ್ಟ್ರೇಟ್ ಮುಂದೆ ಹೋದ್ರೆ ಯಾರ ಯಾರ ಪಾಲು ಎಷ್ಟು ಅಂತ ಬಯಲಾಗುತ್ತೆ ಅನ್ನೋ ಭಯನಾ?

5)  ಚಾರ್ಜ್ ಸೀಟ್ ನಲ್ಲಿ ಉಲ್ಲೇಖ ಆಗಿರುವ ಪರೀಕ್ಷೆ FDA, SDA, PWD, PC, ಅಸಿಸ್ಟೆಂಟ್ ಇಂಜಿನಿಯರ್  ಹಾಗೂ ಜ್ಯೂನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಅದರ ತನಿಖೆ ಯಾವಾಗ? ಈ ಸರ್ಕಾರದ ಅಡಿಯಲ್ಲಿ ಯಾವೆಲ್ಲ  ನೇಮಕಾತಿ ನಡೆದಿದೆಯೋ ಅದೆಲ್ಲ ತನಿಖೆ ಆಗಬೇಕು ಎಂದು ಆಗ್ರಹಿಸಿದರು...

6) ಬಿಜೆಪಿ ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ ಯಾರೋ  ಮಾಜಿ ಸಿಎಂ ಮಗ ಇದರಲ್ಲಿ ಭಾಗಿಯಾಗಿದ್ದಾರಂತೆ ಹೇಳಿದ್ದಾರೆ.. ಅವರನ್ನೂ ತನಿಖೆಗೆ ಕರೆಸಿ , ಈ ಅಕ್ರಮದಲ್ಲಿ ನಡೆದಿರುವ ಅವ್ಯವಹಾರದ ಸಂಪೂರ್ಣ ದಾಖಲೆ ನನ್ನ ಬಳಿ ಇದೆ ಎಂದಿದ್ದಾರೆ..ಆರ್ ಎಸ್ಎಸ್ ಗೆ ಹತ್ತಿರವಾಗಿರುವ, ರಾಜ್ಯದ ಹಿಂದುತ್ವದ ಹೃದಯ ಸಾಮ್ರಾಟರಾಗಿರುವ ಯತ್ನಾಳ್ ಅವರ ಮಾತನ್ನಾದರೂ ಕೇಳಿ ಎಂದು ಸವಾಲು ಹಾಕಿದ ಖರ್ಗೆ..

ಡಿಕೆಶಿ ಉತ್ಸವಕ್ಕೆ ಪತ್ರ ಬರೆದ ವಿಚಾರ 
ಡಿಕೆಶಿ ಉತ್ಸವ ಮಾಡಿ ಎಂದು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಖರ್ಗೆ ಆ ಪತ್ರ ಬರೆದ್ದು‌ ಸಾಹೇಬರ (ಡಿಕೆಶಿ) ಅಭಿಮಾನಿ ನಾ ? ಅದನ್ನ  ಸಾಹೇಬರ (ಡಿಕೆಶಿ) ಇಲ್ಲೇ ಹಿಂದೆ ಇದ್ದಾರೆ ಅವರನ್ನೇ ಕೇಳಿ. ಆ ವಿಚಾರ ನನಗೆ ಗೊತ್ತಿಲ್ಲ..ನಮ್ಮ ಅಭಿಮಾನಿಗಳು ನಮ್ಗೆ ಮಾಡ್ತಾರೆ ನಿಮ್ಮ ಅಭಿಮಾನಿಗಳು ನಿಮ್ಗೆ ಮಾಡ್ತಾರೆ..ಅಧ್ಯಕ್ಷರ ಅಭಿಮಾನಿಗಳಿದ್ರೆ ಅವರಿಗೆ ಮಾಡ್ತಾರೆ..ಸಿಎಲ್ ಪಿ ಅಭಿಮಾನಿಗಳು ಇದ್ರೆ ಅವರದ್ದು ಮಾಡ್ತಾರೆ...ಮೊದಲು ಇದನ್ನ ನೋಡಿ( ಪಿಎಸ್ ಐ ಹಗರಣ) ಉತ್ಸವ ತಗೊಂಡು ಏನ್ ಮಾಡ್ತೀರಾ..ಇಲ್ಲಿ ಯುವಕರಿಗೆ ದೊಡ್ಡ ಮೋಸ ಆಗ್ತಿದೆ..ಮಲ್ಲಿಕಾರ್ಜುನ ಖರ್ಗೆದು ಉತ್ಸವ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಸಾಹೇಬರ ( ಮಲ್ಲಿಕಾರ್ಜುನ ಖರ್ಗೆ)ಹತ್ತಿರ ಕೇಳಬೇಡಿ ನನ್ನ ಜೊತೆ ನಿಮ್ಗೂ ಬೈತಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ