'ಮತಾಂತರ ಚರ್ಚೆ ಬಿಡಿ: GST ಪರಿಹಾರ, ರೈತರಿಗೆ ಅನ್ಯಾಯ ಆಗ್ತಿರುವ ಬಗ್ಗೆ ಮಾತಾಡಿ'

By Suvarna NewsFirst Published Sep 22, 2021, 3:42 PM IST
Highlights

* ಅಧಿವೇಶನದಲ್ಲಿ ಮತಾಂತರ ಬಗ್ಗೆ ಚರ್ಚೆ
* ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ
* ಜಿಎಸ್‌ಟಿ ಪರಿಹಾರ ಸಿಕ್ಕಿಲ್ಲ, ರೈತರಿಗೆ ಅನ್ಯಾಯ ಆಗ್ತಿದೆ ಆ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ಕಿಡಿ

ಬೆಂಗಳೂರು, (ಸೆ.22): ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ಬಗ್ಗೆ ತೀವ್ರ  ಚರ್ಚೆ ನಡೆಯುತ್ತಿದ್ದು, ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ ಎಂದು  ಬಿಜೆಪಿ (BJP) ಶಾಸಕ ಗೂಳಿಹಟ್ಟಿ ಶೇಖರ್ ನೋವು ತೋಡಿಕೊಂಡರು.

ಇನ್ನು ಈ ಮತಾಂತರ ವಿರುದ್ಧ ಕಾಂಗ್ರೆಸ್ (Congress) ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಮತಾಂತರ ಮಾಡೋದು ಸಂವಿಧಾನವಾಗಿ ಅದು ತಪ್ಪು. ಯಾರು ತಪ್ಪು ಮಾಡ್ತಾರೆ, ಅವರನ್ನ ಶಿಕ್ಷಿಸಲಿ. ಚರ್ಚೆ ಮಾಡಲು ಅನೇಕ ವಿಚಾರಗಳಿವೆ. ಆದ್ರೆ ಬಿಜೆಪಿಯವರು ಯಾವ್ಯಾವುದೋ ಬಿಲ್ ತಂದು ಚರ್ಚೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ: ಗೂಳಿಹಟ್ಟಿ ಗೋಳು!

ಜಿಎಸ್‌ಟಿ ಪರಿಹಾರ ಸಿಕ್ಕಿಲ್ಲ, ರೈತರಿಗೆ ಅನ್ಯಾಯ ಆಗ್ತಿದೆ ಆ ಬಗ್ಗೆ ಚರ್ಚೆ ಆಗುತ್ತಿಲ್ಲ. ಸಂವಿಧಾನದಲ್ಲಿ ಯಾವ ಧರ್ಮ ಪಾಲನೆ ಬೇಕಾದ್ರೂ ಪಾಲನೆಗೆ ಅವಕಾಶವಿದೆ. ಫೋರ್ಸ್ಡ್ ಕನ್ವರ್ಟ್ ಮಾಡೋದು ತಪ್ಪು. ನಾನು ಒಂದು ಧರ್ಮವನ್ನ ಒಪ್ಪುತ್ತೇನೆ ಅಂದ್ರೆ ಅದನ್ನ ಫಾಲೋ ಮಾಡೋದು ತಪ್ಪಲ್ಲ. ಸಂವಿಧಾನದಲ್ಲೇ ಯಾವ ಧರ್ಮವನ್ನ ಬೇಕಾದ್ರೂ ಪಾಲನೆ ಮಾಡಲು ಅವಕಾಶವಿದೆ ಎಂದರು.

click me!