ಪಕ್ಷ ತೊರೆದು BJP ಸೇರುವ ಸುಳಿವು ನೀಡಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಶಾಸಕ

By Web DeskFirst Published Jan 13, 2019, 4:48 PM IST
Highlights

ಜನವರಿ 19ರಂದು ಬಿಜೆಪಿ ಸೇರ್ಪಡೆ ಖಚಿತ ಎಂದು ಸುವರ್ಣ ನ್ಯೂಸ್ ಗೆ ಹೇಳಿದ್ದ ಕಾಂಗ್ರೆಸ್ ಶಾಸಕ ಇದೀಗ ತಮ್ಮ ತಂದೆಯ ಒತ್ತಡಕ್ಕೆ ಮಣಿದು ಮಾತು ಬದಲಿಸಿದ್ದಾರೆ.

ಬೆಂಗಳೂರು,[ಜ.13]: ಕಾಂಗ್ರೆಸ್ ತೊರೆಯುವದಾಗಿ ಸುಳಿವುಕೊಟ್ಟಿದ್ದ ಕಾಂಗ್ರೆಸ್​ ಶಾಸಕ ಗಣೇಶ್ ಹುಕ್ಕೇರಿ ಇದೀಗ ಉಲ್ಟಾ ಹೊಡೆದಿದ್ದಾರೆ.

ಜನವರಿ 19ರಂದು ಬಿಜೆಪಿ ಸೇರ್ಪಡೆ ಖಚಿತ ಎಂದು ಸುವರ್ಣ ನ್ಯೂಸ್ ಗೆ ಗಣೇಶ್ ಹುಕ್ಕೇರಿ ಹೇಳಿದ್ದರು. ಆದ್ರೆ ಇದೀಗ ಗಣೇಶ್ ಹುಕ್ಕೇರಿ ಅವರು ತಮ್ಮ ತಂದೆಯ ಒತ್ತಡಕ್ಕೆ ಮಣಿದು ಮಾತು ಬದಲಿಸಿದ್ದಾರೆ. 

ಬಿಜೆಪಿಗೆ ಶಾಸಕ ಗಣೇಶ್ ಹುಕ್ಕೇರಿ: ದಿನಾಂಕ ಫಿಕ್ಸ್, ಈ ವಿಡಿಯೋ ಸಾಕ್ಷಿ!

ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ. ನಾನು ಹುಟ್ಟಿದಾಗಿಂದ ನನ್ನ ಮನೆ ಕಾಂಗ್ರೆಸ್​. ನಾನೇಕೆ ನನ್ನ ಮನೆಯನ್ನು ತೊರೆಯಲಿ?. ಬಿಜೆಪಿ ಸೇರುವೆ ಎಂದಿದ್ದು ತಮಾಷೆಗಾಗಿ ಎಂದು  ಟ್ವಿಟರ್​​ನಲ್ಲಿ ಕಾಂಗ್ರೆಸ್​ ಶಾಸಕ ಗಣೇಶ್ ಹುಕ್ಕೇರಿ ಸ್ಪಷ್ಟನೆ ನೀಡಿದ್ದಾರೆ.

"

ಗಣೇಶ್ ಹುಕ್ಕೇರಿ ಟ್ವೀಟ್ ಮಾಡುವ ಮುನ್ನ ಅವರು ಬಿಜೆಪಿ ಸೇರುವ ಸುದ್ದಿ ಸುವರ್ಣ ನ್ಯೂಸ್​ನಲ್ಲಿ ಪ್ರಸಾರವಾಗುತ್ತಿದ್ದಂತೆ ಪ್ರಕಾಶ್​ ಹುಕ್ಕೇರಿ ಈ ಕುರಿತು ಪ್ರತಿಕ್ರಿಯಿಸಿದ್ದು, ಗಣೇಶ್​ ಹುಕ್ಕೆರಿ ಬಿಜೆಪಿ ಹೋಗಲ್ಲ. ನಾವು ಅಪ್ಪ ಮಗ ಕಾಂಗ್ರೆಸ್ ನಲ್ಲೆ ಇರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು.

ಬಿಜೆಪಿ ಸೇರ್ಪಡೆ ವಿಚಾರ ವದಂತಿ ಎಂದು ಹೇಳುವಂತೆ ಗಣೇಶ್ ಮೇಲೆ ಪ್ರಕಾಶ್ ಹುಕ್ಕೇರಿ ಒತ್ತಡ ಹೇರಿ ಮನವೊಲಿಸಿದ್ದಾರೆ. ಬಳಿಕ ತಂದೆಯ ಒತ್ತಡಕ್ಕೆ ಮಣಿದು ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿರುವ ಗಣೇಶ್ ಹುಕ್ಕೇರಿ, ಬಿಜೆಪಿಗೆ ಹೋಗಲ್ಲ ಎಂದು ತಮ್ಮ ವರಸೆ ಬದಲಿಸಿದ್ದಾರೆ.

"

click me!