ರಾಜ್ಯದಲ್ಲಿ ಜೆಡಿಎಸ್ ಮುಗಿದೇ ಹೊಯ್ತು ಅಂದರು. ಅದಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ದೆಹಲಿ ಮಟ್ಟದಲ್ಲಿ ಕುಮಾರಸ್ವಾಮಿಯನ್ನ ಗುರುತಿಸಿದ್ದಾರೆ ಅಂದ್ರೆ ಅದು ನಿಮ್ಮಿಂದ ನನ್ನ ರಾಜಕೀಯ ಇಲ್ಲಿಗೆ ಮುಗಿ ಯೊಲ್ಲ. ರಾಜ್ಯದಲ್ಲಿ ಬಡ ಕುಟುಂಬಗಳ ಅಭಿವೃದ್ಧಿಗೆ ನನ್ನದೇ ಯೋಜನೆ ಇದೆ ಕೆಲವೇ ವರ್ಷಗಳ ಅಧಿಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಚನ್ನಪಟ್ಟಣ(ಅ.11): ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ದಂಡು ನಿತ್ಯ ಕ್ಷೇತ್ರಕ್ಕೆ ಬರುತ್ತಿದ್ದು, ನಿತ್ಯ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಎಲ್ಲರಿಗೂ ನಿವೇಶನ ನೀಡುತ್ತೇವೆ ಎಂದು ಓಡಾಡುತ್ತಿದ್ದಾರೆ. ಆದರೆ, ಯಾರಿಗಾದರೂ ನಿವೇಶನ ನೀಡಿದ್ದಾರಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ನಗರದ ಶ್ರೀ ಕೊಲ್ಲಾಪುರದಮ್ಮನ ದೇವನಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯಾವುದೋ ಗೋಮಾಳದಲ್ಲಿ ಜೆಸಿಬಿ ತಂದು ಮಟ್ಟ ಮಾಡಿ ಸೈಟ್ ಕೊಡುತ್ತೇವೆ ಅಂತಿದ್ದಾರೆ. ಜೆಸಿಬಿ ತೆಗೆದುಕೊಂಡು ಹೋಗಿ ನಾಟಕ ಮಾಡುತ್ತಿದ್ದಾರೆ. ಚುನಾವಣೆ ಒಳಗೆ ಒಂದೇ ಒಂದು ಸೈಟ್ ಕೊಡಲಿ ನೋಡೋಣ ಆಗ ಚರ್ಚಿಸುತ್ತೇನೆ ಎಂದರು.
undefined
ಚನ್ನಪಟ್ಟಣ ಬಿಜೆಪಿಗೆ ಬಿಡಲು ಒಪ್ಪಂದ ಆಗಿಲ್ಲ: ಎಚ್.ಡಿ.ಕುಮಾರಸ್ವಾಮಿ
3 ತಿಂಗಳಲ್ಲಿ ಏನು ಮಾಡಿದ್ದಾರೆ?:
ಚನ್ನಪಟ್ಟಣದಲ್ಲಿ ಎಲೆಕೆರೆ ರೈಲ್ವೆ ಮೇಲ್ಸೇತುವ ಕಾಮಗಾರಿ ಎಷ್ಟು ವರ್ಷ ದಿಂದ ಆಗದೇ ನಿಂತಿದೆ. ಅದನ್ನ ಸರಿಪಡಿಸಲು ಮುಂ ದಾಗಿದ್ದು ನಾನು 3 ತಿಂಗಳಲ್ಲಿ 20 ಬಾರಿ ಚನ್ನಪಟ್ಟಣಕ್ಕೆ ಬಂದಿದ್ದೀನಿ, ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಒಮ್ಮೆ ಯೂ ಬರಲಿಲ್ಲ ಎಂದು ಆರೋಪಿಸುತ್ತಾರಲ್ಲ, ತಿಂಗಳಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರರು.
ಯುಜಿಡಿಗೆ 90 ಕೋಟಿ ಅನುದಾನ:
ನಗರದ ಯುಜಿಡಿಗೆ 96 ಕೋಟಿ ಅನುದಾನ ಕೊಟ್ಟಿದ್ದು ನಾನು. ಇಲ್ಲಿ ಕೆಲಸ ಆಗಬೇಕು ಅಂದರೆ ಟೆಂಡರ್ ಪಡೆದವರನ್ನು ಅಧಿಕಾರಿಗಳು ಅಣ್ಣತಮ್ಮಂದಿರನ್ನು ಹೋಗಿ ನೋಡಿ ಬನ್ನಿ ಅಂತಾರಂತೆ, ಯಾಕೆ, ಕಮಿಷನ್ ಗೆ ಅವರನ್ನ ಭೇಟಿ ಮಾಡಬೇಕಾ.? ನಗರ ಪ್ರದೇಶಕ್ಕೆ ನಾನು ಎಷ್ಟು ಹಣ ಕೊಟ್ಟಿದ್ದೇನೆ ಗಮನಿಸಿ, ಬಹಳ ಮೋಸ ಮಾಡಿ, ನಿಮ್ಮ ಮುಂದೆ ನಾಟಕ ಮಾಡುತ್ತಿದ್ದಾರೆ ಎಂದರು.
ರಾಮನಗರದಲ್ಲಿ ಮೂರು ಸಾವಿರ ಐದು ಸಾವಿರ ಸೈಟ್ ಅನ್ನುತ್ತಾರೆ. ಆದರೆ, ಒಂದುವರೆ ವರ್ಷದಿಂದ ಅವರ ಯೋಗ್ಯತೆಗೆ ಇವತ್ತಿನವರೆಗೆ ಒಂದು ಸೈಟ್ ಕೊಡಲು ಆಗಿಲ್ಲ, ನನ್ನ ಅವಧಿಯಲ್ಲಿ ಮನೆ ನಿರ್ಮಾಣಕ್ಕೆ ನೀಡಿದ್ದ 50 ಕೋಟಿ ಹಣ ಏನು ಮಾಡಿದರೋ ಗೊತ್ತಿಲ್ಲ. ನನ್ನನ್ನ ಕೇವಲ 14 ತಿಂಗಳಿನಲ್ಲಿ ಕೆಳಗಡೆ ಇಳಿಸಿ ದರು. ಈಗ ಬಂದು ನನ್ನ ವಿರುದ್ಧ ಮಾತನಾಡ್ತಾರೆ. ಎಲ್ಲಿ ನೋಡಿದರೂ ಅಣ್ಣತಮ್ಮಂದಿರು, ಕಾಂಗ್ರೆಸ್ ನವರ ವಿನೈಲ್ ಬೋರ್ಡ್‌ಗಳು ಕಾಣುತ್ತವೆ ಎಂದು ಡಿ.ಕೆ.ಸಹೋದರರರ ವಿರುದ್ಧ ಕಿಡಿಕಾರಿದರು.
ನಾನು ಬೋರ್ಡ್ ಹಾಕಿಸಲಿಲ್ಲ;
ನಾನು ಚನ್ನಪಟ್ಟಣಕ್ಕೆ 1.5 ಕೋಟಿ ಅನುದಾನ ತಂದರು ಎಲ್ಲಿಯೂ ಬೋರ್ಡ್ ಹಾಕಿಸಿಕೊಳ್ಳಲು ಹೋಗಿಲ್ಲ. ನಿಮ್ಮ ಹೃದ ಯದಲ್ಲಿ ಸ್ಥಾನ ಪಡೆಯಬೇಕು ಎಂದು ಬಯಸಿದವನು ನಾನು ದಯವಿಟ್ಟು ಯಾರು ಇವರ ಮಾತುಗಳನ್ನು ನಂಬಬೇಡಿ. ಬಹಳ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.
ಜನ ಉತ್ತರ ನೀಡಿದರು:
ರಾಜ್ಯದಲ್ಲಿ ಜೆಡಿಎಸ್ ಮುಗಿದೇ ಹೊಯ್ತು ಅಂದರು. ಅದಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ದೆಹಲಿ ಮಟ್ಟದಲ್ಲಿ ಕುಮಾರಸ್ವಾಮಿಯನ್ನ ಗುರುತಿಸಿದ್ದಾರೆ ಅಂದ್ರೆ ಅದು ನಿಮ್ಮಿಂದ ನನ್ನ ರಾಜಕೀಯ ಇಲ್ಲಿಗೆ ಮುಗಿ ಯೊಲ್ಲ. ರಾಜ್ಯದಲ್ಲಿ ಬಡ ಕುಟುಂಬಗಳ ಅಭಿವೃದ್ಧಿಗೆ ನನ್ನದೇ ಯೋಜನೆ ಇದೆ ಕೆಲವೇ ವರ್ಷಗಳ ಅಧಿಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.
ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ವೇಳೆ ಗಲಾಟೆ ನಡೆದ ಸಂದರ್ಭದಲ್ಲಿ ನಾನು ಎರಡು ಸಮು ದಾಯದವರ ಅಂಗಡಿಗಳಿಗೆ ಭೇಟಿ ನೀಡಿದೆ. ಎರಡು ಸಮುದಾಯವರಿಗೂ ನನ್ನ ಕೈಯಿಂದ ಪರಿಹಾರ ನೀಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾರಿಗಾದರೂ ಪರಿಹಾರ ನೀಡಿದ್ದಾರಾ. ಇದನ್ನು ಚನ್ನಪಟ್ಟಣದ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಉಪ ಚುನಾವಣೆಗಾಗಿ ಡಿಸಿಎಂಗೆ ಕ್ಷೇತ್ರದ ಮೇಲೆ ಪ್ರೀತಿ:
ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಾನಾಯಕರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇಷ್ಟು ದಿನ ಚನ್ನಪಟ್ಟಣ ತಾಲೂಕು ರಾಜ್ಯದಲ್ಲಿ ಇದೆ ಯೋ ಇಲ್ಲವೋ ಎಂಬ ಪರಿಜ್ಞಾನ ಇಲ್ಲದ ಡಿಸಿಎಂಗೆ ಈಗ ಕ್ಷೇತ್ರ ಕುರಿತು ಎಲ್ಲಿಲ್ಲದ ಪ್ರೀತಿ, ಮಮಕಾರ ಬಂದಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾ ಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಉಪಚುನಾವಣೆ: ಟಿಕೆಟ್‌ಗಾಗಿ ದೆಹಲಿಯಲ್ಲೇ ಬೀಡುಬಿಟ್ಟ ಸೈನಿಕ!
ಇಡೀ ದೇಶ ನೋಡುವಂತ ಚುನಾವಣೆ ಇದಾಗಿದ್ದು, ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಕಣಕ್ಕೆ ಇಳಿಯ ಲಿದ್ದಾರೆ. ಉಪಚುನಾವಣೆಗೆ ರಾಜ್ಯ ಸರ್ಕಾ ರದ ಸಚಿವರ ದಂಡೇ ಬರಲಿದ್ದು, ದೊಡ್ಡ ಮಟ್ಟದಲ್ಲಿ ಹಣ ಸಹ ಹರಿದುಬರುವ ಸಾಧ್ಯತೆ ಇದೆ. ಕ್ಷೇತ್ರದ ಜನ ದುಡ್ಡಿಗೆ ಮನ್ನಣೆ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ 1.5 ಸಾವಿರ ಕೋಟಿ ಅನುದಾನ ತಂದರು. ಒಂದು ಜಾಹಿರಾತು, ಫ್ಲೆಕ್ಸ್ ಹಾಕಿಸಿ ಪ್ರಚಾರ ಮಾಡಲಿಲ್ಲ. ಈ ಬಾರಿ ಎಲ್ಲರೂ ಒಗ್ಗೂಡಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಶಾಸಕ ಸುರೇಶ್ ಬಾಬು, ಜಯಮುತ್ತು, ಅಜಯ್, ದೇವರಾಜು, ಪ್ರಸನ್ನ ಪಿ.ಗೌಡ ಇತರರು ಹಾಜದ್ದರು.