ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು, ಅನ್ನೋ ಭ್ರಮೆಯಲ್ಲಿ ಬಿಜೆಪಿ ತೇಲ್ತಾ ಇದೆ; ಮಾಜಿ ಶಾಸಕಿ ತೇಜಸ್ವಿನಿ ಗೌಡ

By Sathish Kumar KHFirst Published Mar 30, 2024, 1:56 PM IST
Highlights

ಬಿಜೆಪಿಯಲ್ಲಿ ಸ್ಥಳೀಯ ನಾಯಕತ್ವವಿಲ್ಲ. ದೇಶಕ್ಕಿಂತ ಪ್ರಧಾನಿ ಮೋದಿ ಮಾಂತ್ರಿಕ ಶಕ್ತಿಯೇ ದೊಡ್ಡದು ಎಂಬ ಭ್ರಮೆಯಲ್ಲಿ ಬಿಜೆಪಿ ತೇಲಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕಿ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದರು.

ನವದೆಹಲಿ (ಮಾ.30): ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ನರಕಾಸುರ, ರಾವಣನೆಂದು ಬೈದು ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯೆಯಾಗಿದ್ದ ತೇಜಸ್ವಿನಿ ಗೌಡ ಅವರು, ಈಗ ಬಿಜೆಪಿ ತೊರೆದು ನವದೆಹಲಿಯಲ್ಲಿ ಜೈರಾಮ್ ರಮೇಶ್ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ನಂತರ, ಬಿಜೆಪಿಯಲ್ಲಿ ಸ್ಥಳೀಯ ಮತ್ತು ಪ್ರಾದೇಶಿಕ ನಾಯಕತ್ವವಿಲ್ಲ. ಕೇವಲ ಮೋದಿಜೀ ಮಾಂತ್ರಿಕ ಶಕ್ತಿಯ ಮೇಲೆ ಮಾತ್ರ ನಂಬಿಕೆ ಇಟ್ಟಿದೆ. ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು ಅನ್ನೋ ಭ್ರಮೆಯಲ್ಲಿ ಬಿಜೆಪಿ ತೇಲ್ತಾ ಇದೆ ಎಂದು ತೇಜಸ್ವಿನಿ ಗೌಡ ಟೀಕೆ ಮಾಡಿದ್ದಾರೆ.

ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ತೇಜಸ್ವಿನಿ ಗೌಡ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲಾಗಿತ್ತು. ಆದರೆ, ಅವಧಿಕಾರ ಜೂನ್‌ ತಿಂಗಳಿಗೆ ಮುಕ್ತಾಯವಾಗುವ ಮುನ್ನವೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ, ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದ ಅವರು, ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಅವರ ನೇತೃತ್ವದಲ್ಲಿ ಪುನಃ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಂತರ, ನಾನು ನನ್ನ ತವರು ಮನೆಗೆ ವಾಪಸ್ ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಲೋಕಸಭಾ ಚುನಾವಣೆ ಸನಿಹದಲ್ಲಿ ಬಿಜೆಪಿಗೆ ಆಘಾತ; ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ತೇಜಸ್ವಿನಿ ಗೌಡ ಅವರು, ಮೋದಿ ಅವರದ್ದು ಅಷ್ಟೊಂದು ಹವಾ ಇದೆ ಅಂದ್ರೆ ಏಕೆ ಹಾಲಿ ಕೇಂದ್ರ ಮಂತ್ರಿಗಳನ್ನು ಬದಲಾಯಿಸಿದ್ದು ಏಕೆ? ನಾರಾಯಣ ಸ್ವಾಮಿ, ಶೋಭಾ ಅವರನ್ನು ಬದಲಿಸಿದ್ದು ಯಾಕೆ? ನನ್ನ ಮನೆಗೆ ನಾನು ಬಂದಿದ್ದೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಜೀ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೆಲ್ಲರೂ ನನಗೆ ಪ್ರೇರಣೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷ, ಬಿಜೆಪಿಗಿಂತ 95 ವರ್ಷಗಳ ಹಳೇ ಪಕ್ಷವಾಗಿದೆ ಎಂದು ಹೇಳಿದರು.

ಮುಂದುರೆದು, ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ತೇಜಸ್ವಿನಿ ಗೌಡ ಅವರು, ಬಿಜೆಪಿಗೆ ಪ್ರಜಾಸತ್ತಾತ್ಮಕ, ಸ್ಥಳೀಯ ನಾಯಕತ್ವ, ಪ್ರಾದೇಶಿಕ ನಾಯಕತ್ವ, ಮಾಸ್ ಲೀಡರ್ ಶಿಫ್ ನಲ್ಲಿ ನಂಬಿಕೆ ಇಲ್ಲ. ಕೇವಲ ಮೋದಿಜೀ ಮಾಂತ್ರಿಕ ಶಕ್ತಿಯ ಮೇಲೆ ಮಾತ್ರ ನಂಬಿಕೆ ಇಟ್ಟಿದೆ. ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು ಅನ್ನೋ ಭ್ರಮೆಯಲ್ಲಿ ಬಿಜೆಪಿ ತೇಲ್ತಾ ಇದೆ. ಮೈಸೂರು, ಬೆಂಗಳೂರು ಉತ್ತರ ಟಿಕೆಟ್ ಕೇಳಿದ್ದೆನು. ಅದು ಕೂಡ ಪ್ರತಾಪ್ ಸಿಂಹ ಅವರಿಗೆ ಟಿಕೆಟ್‌ ಕೊಡಲಿಲ್ಲವೆಂದರೆ ನನಗೆ ಮೈಸೂರು ಟಿಕೆಟ್‌ ಕೊಡಿ ಎಂದು ಕೇಳಿದ್ದೆನು. ಆದರೂ ಕೊಡಲಿಲ್ಲ ಎಂದು ಟೀಕೆ ಮಾಡಿದರು. 

ವಿಪಕ್ಷ ನಾಯಕ ಆರ್. ಅಶೋಕ್‌ಗೆ ಟಾಂಗ್: 
ನನಗೆ ಬರಗಾಲ ಎನ್ನುವವರು ಅವರ ಬ್ಯಾಗ್ರೌಂಡ್ ನೋಡಿಕೊಳ್ಳಲಿ. ನನಗೆ ಹೇಳುವವರು ಎಲ್ಲೆಲ್ಲಿ ಸ್ಪರ್ಧೆ ಮಾಡಿದ್ದಾರೆ? ಎಲ್ಲೆಲ್ಲಿ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ರು ಅವರ ಪೊಲಿಟಿಕಲ್ ಹಿಸ್ಟರಿ ನೋಡಿಕೊಳ್ಳಿ. ನನ್ನ ಕೊಡುಗೆ ಏನು ಎನ್ನುವವರ ಕೊಡುಗೆ ಬಿಜೆಪಿ ಗೆ ಇದ್ದಿದ್ರೇ ಜೆಡಿಎಸ್ ಗೆ ಹೋಗಿ ಗುಲಾಮಗಿರಿ ಮಾಡ್ತಿದ್ರು? ಅವರ ಕೊಡುಗೆ ಬಿಜೆಪಿ ಗೆ ಇದ್ದಿದ್ರೆ ಹಳೇ ಮೈಸೂರು ಭಾಗದಲ್ಲಿ ಡಿಕೆಶಿ ಗೆ ಸಮನಾಗಿ ಹೊರಹೊಮ್ಮ ಬೇಕಿತ್ತು. ರಾಜ್ಯದಲ್ಲಿ ಒಕ್ಕಲಿಗರ ಹಿತ ಕಾಪಾಡುವಲ್ಲಿ ಡಿ.ಕೆ.ಶಿವಕುಮಾರ್ ಸಮರ್ಥವಾಗಿದ್ದಾರೆ.  ಬಿಜೆಪಿಯಲ್ಲಿ ಒಕ್ಕಲಿಗರ ನಾಯಕರಿಗೆ ತಾಕತ್ತು ಇದ್ದಿದ್ರೇ ಜೆಡಿಎಸ್- ಕಡೆ ಯಾಕೆ ನೋಡ್ತಾ ಇತ್ತು ಬಿಜೆಪಿ ಹೈಕಮಾಂಡ್. ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕತ್ವಕ್ಕೆ ಬಿಜೆಪಿ ಒಕ್ಕಲಿಗರ ಮೇಲೆ ನಂಬಿಕೆ ಇದ್ದಿದ್ದರೆ ಅವರು ಯಾಕೆ ಜೆಡಿಎಸ್- ಹೆಗಲು ಮೇಲೆ ಕೂರುತ್ತಿದ್ದರು? ಸಿ.ಟಿ. ರವಿಗೆ ಅಸ್ಥಿತ್ವ ಏನು? ಆರ್. ಅಶೋಕ್ ಡಿಸಿಎಂ ಮೊದಲೇ ಆಗಿದ್ದರೂ ನಂತರ ಅವರ ಬೆಳವಣಿಗೆ ಏನು? ಶೋಭಾಗೆ ಯಾಕೆ ಗೋ ಬ್ಯಾಕ್ ಹೇಳ್ತಿರಾ? ಎಂದು ಪ್ರಶ್ನೆ ಮಾಡಿದರು. 

ಬಿಜೆಪಿಯಿಂದ ಐಟಿ, ಇಡಿ, ಸಿಬಿಐ ಸಂಸ್ಥೆಗಳ ದುರುಪಯೋಗ: ಮಲ್ಲಿಕಾರ್ಜುನ ಖರ್ಗೆ

ನಾನು ಕಾಂಗ್ರೆಸ್ ಕಾಯಕರ್ತೆ. ನಾನು ಪಕ್ಷಕ್ಕಾಗಿ ಏನಾದರೂ ಕೊಡಲು ಬಂದಿದ್ದೇನೆ. ನನ್ನುದು ಲೇನಾ ಬ್ಯಾಂಕ್ ವಿನಃ, ದೇನಾ ಬ್ಯಾಂಕ್ ಅಲ್ಲ. ಪಕ್ಷದ ನಾಯಕರು ಏನು ಕೆಲಸ ಕೊಟ್ರೂ ಮಾಡ್ತಿನಿ. ಈ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ನನಗೆ ಇದ್ದಿದ್ದು‌ ಕೇವಲ ವಿಷಯಾಧಾರಿತ ಬಿನ್ನಾಭ್ರಿಯ ಮಾತ್ರ. ಆದರೆ, ಈಗ ಬೆಂಗಳೂರು ಗ್ರಾಮಂತರದಲ್ಲಿ ಡಿ.ಕೆ. ಸುರೇಶ್ ಅವರನ್ನು ನಾವು ಗೆಲ್ಲಿಸಲೇ ಬೇಕು. ಅವರ ಪರ ಪ್ರಚಾರ ಮಾಡ್ತಿನಿ. ಅಲ್ಲಿ ನಮ್ಮ ಎದುರಾಳಿ ಜೆಡಿಎಸ್ ಆಗಿದೆ. ನಾವು ಡಿ.ಕೆ. ಸುರೇಶ್ ಗೆಲುವಿಗೆ ಕೆಲಸ ಮಾಡುತ್ತೇವೆ ಎಂದು ಮಾಜಿ ಎಂಎಲ್‌ಸಿ ತೇಜಸ್ವಿನಿ ಗೌಡ ಹೇಳಿದರು.

click me!