ಆ ಗಿರಾಕಿ ಹೋಟೆಲ್‌ನಲ್ಲಿ ಇದ್ರು : ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

By Kannadaprabha News  |  First Published Dec 19, 2020, 9:37 AM IST

ಆ ಗಿರಾಕಿ ಹೋಟೆಲ್‌ನಲ್ಲಿ ಇದ್ರು ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. 


ಮೈಸೂರು(ಡಿ.19):  ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಮತ್ತೆ ತಿರುಗೇಟು ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಿಸಿದೆ ಎಂದು ಆರೋಪ ಮಾಡುತ್ತಾರೆ. ಆದರೆ, ನಾನು ವಿರೋಧ ಮಾಡಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

"

Tap to resize

Latest Videos

ನಗರದಲ್ಲಿ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮ ಜನಾಧಿಕಾರಿ ಸಭೆ ಉದ್ಘಾಟಿಸಿ ಮಾತನಾಡಿ, ಸಮ್ಮಿಶ್ರ ಸರ್ಕಾರ ಬೀಳಿಸುವ ಉದ್ದೇಶವಿದ್ದರೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇ ಬಿಡುತ್ತಿರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಬೇಡ ಎಂದು ಹಠ ಹಿಡಿದು ಕೂತಿದ್ದರೆ ಅವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಶಾಸಕರಿಗೆ ಸೂಕ್ತವಾಗಿ ಸ್ಪಂದಿಸಿದ್ದರೆ ನಮ್ಮವರಾರ‍ಯರೂ ಬಿಜೆಪಿಗೆ ಹೋಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಆ ‘ಗಿರಾಕಿ’ ಹೋಟೆಲ್‌ನಲ್ಲಿ ಕೂತು ರಾಜಕಾರಣ ಮಾಡಿದ್ದೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

"

ಚಾಮುಂಡೇಶ್ವರಿಯಲ್ಲಿ ಬಿಜೆಪಿ-ಜೆಡಿಎಸ್ ಒಪ್ಪಂದ: ಸಿದ್ದು ಹೇಳಿಕೆಗೆ ಸಿಟಿ ರವಿ ಖಡಕ್ ಸ್ಪಷ್ಟನೆ ..p-leader-ct-ravi-hits-back-at-siddaramaiah-over-chamundeshwari-poll-rbj-qljj3q

ಕುಮಾರಸ್ವಾಮಿ ಮನೆಯಲ್ಲೂ ಇರುತ್ತಿರಲಿಲ್ಲ, ಕಚೇರಿಗೂ ಬರುತ್ತಿರಲಿಲ್ಲ, ಹೊಟೇಲ್‌ನಲ್ಲಿ ಕುಳಿತು ಆಡಳಿತ ಮಾಡುತ್ತಿದ್ದರು. ಸರ್ಕಾರ ಬಿದ್ದು ಹೋಗುತ್ತದೆ ಎಂದು ಅಮೆರಿಕಗೆ ಹೋಗಿದ್ದೆ ಎನ್ನುತ್ತಾರೆ ಆ ಗಿರಾಕಿ. ಅವರಿಗೆ ರಾಜಕೀಯ ಪ್ರಬುದ್ಧತೆ ಇದೆಯಾ? 5 ವರ್ಷಗಳ ಕಾಲ ನನ್ನ ವಿರುದ್ಧ ಯಾರಾದರೂ ಮಾತನಾಡಿದ್ದಾರಾ? ಕುಣಿಯಲಾರದವರು ನೆಲ ಡೊಂಕೆಂದರಂತೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು ಸಿದ್ದರಾಮಯ್ಯ

click me!