'ಎಚ್‌ಡಿಕೆಗೆ ಚುನಾವಣೆಯೇ ಉತ್ತರ : ಈಶ್ವರಪ್ಪಗೆ ಬ್ರೈನ್-ನಾಲಿಗೆ ಕನೆಕ್ಷನ್ ಇಲ್ಲ'

By Kannadaprabha NewsFirst Published Aug 31, 2021, 12:11 PM IST
Highlights
  • ಹತ್ತು ದಿನಗಳ ಕಾಲ ಜಿಂದಾಲ್ ಪ್ರಕೃತಿ ಚಿಕಿತ್ಸೆ ಪಡೆದು ಮಾಜಿ ಸಿಎಂ ಸಿದ್ದರಾಮಯ್ಯ  ವಾಪಸ್ 
  • ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಎಚ್‌ಡಿಕೆ ಚುನಾವಣೆಯೇ ಉತ್ತರ ಎಂದರು
  • ಈಶ್ವರಪ್ಪ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ

ಬೆಂಗಳೂರು (ಆ.31):  ಹತ್ತು ದಿನಗಳ ಕಾಲ ಜಿಂದಾಲ್ ಪ್ರಕೃತಿ ಚಿಕಿತ್ಸೆ ಪಡೆದು ಮಾಜಿ ಸಿಎಂ ಸಿದ್ದರಾಮಯ್ಯ  ವಾಪಸ್ ಆಗಿದ್ದಾರೆ. 
 
ಚಿಕಿತ್ಸೆ ಪಡೆದು ಮರಳಿದ ಮಾಜಿ ಸಿಎಂ ತಮ್ಮ ಆರೋಗ್ಯದ ಬಗ್ಗೆ ಬೆಂಗಳೂರಿನಲ್ಲಿಂದು ಮಾತನಾಡಿದ್ದು ಕೊರೋನ ಬಂದ ಬಳಿಕ ತೂಕ ಜಾಸ್ತಿ ಆಗಿತ್ತು. ಹೀಗಾಗಿ ದೇಹ ಸರಿಪಡಿಸಿಕೊಳ್ಳಲು ನಾನು ಹೋಗಿದ್ದೆ. ಪ್ರತಿ ಬಾರಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಡೆಯುತ್ತಿದ್ದೆ. ಜಿಂದಾಲ್ ಪ್ರಕೃತಿ ಚಿಕಿತ್ಸೆ ಸಹ ಚೆನ್ನಾಗಿದೆ ಎಂದರು.

'ಸಿದ್ದು-ಡಿಕೆಶಿ ಕೇವಲ ಫೋಟೋ ಫ್ರೆಂಡ್ಸ್: ಇಬ್ಬರ ಮಧ್ಯೆ ಸಿಎಂ ಸ್ಥಾನಕ್ಕೆ ಪೈಪೋಟಿ'

ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಮೊದಲು ನಾನು ಸ್ಥಳಕ್ಕೆ ಭೇಟಿ ಕೊಡುತ್ತೇನೆ. ಅಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು. 

 ಇದೇ ವೇಳೆ ಅನೇಕ ರಾಜಕೀಯ ವಿಚಾರಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.  ಕಾಂಗ್ರೆಸ್ ಫೀಸ್ ಕಿತ್ತು ಹಾಕಿದ್ದೇವೆ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಯಿಸಿ ಚುನಾವಣೆಗೆ ಬರಲಿ ಗೊತ್ತಾಗುತ್ತದೆ. ಜನ ಯಾರ ಫೀಸ್ ಕಿತ್ತು ಹಾಕುತ್ತಾರೋ ನೋಡೋಣ ಎಂದರು.  

10 ದಿನ ಚಿಕಿತ್ಸೆಗೆ ದಾಖಲಾದ ಮಾಜಿ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಸತ್ತಿದೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆಯೂ ಮಾತನಾಡಿ ಈಶ್ವರಪ್ಪನ ಬಗ್ಗೆ ನಾನು ಮಾತನಾಡಲ್ಲ. ಅವರ ನಾಲಿಗೆ ಮತ್ತು ಬ್ರೈನ್ ಗೆ ಕನೆಕ್ಷನ್‌ ಕಟ್ ಆಗಿದೆ ಕೆಂಡಾಮಂಡಲವಾದರು. 

ಶಾಲೆ ಓಪನ್ ವಿಚಾರ : ಕೊರೋನಾ ದಿಂದ ಬಹಳ ದಿನ ಶಾಲೆ ನಡೆಯದಿದ್ದರೂ ಕಷ್ಟ. ಕೊರೋನ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭ ಮಾಡುವುದು ಒಳ್ಳೆಯದು. ಸ್ಕೂಲ್ ಓಪನ್ ಮಾಡದಿದ್ದರೆ ಮಕ್ಕಳು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಬಾಲ ಕಾರ್ಮಿಕರು ಆಗುವ ಸಾಧ್ಯತೆ ಇರುತ್ತದೆ. ಆದರೆ ಪರಿಸ್ಥಿತಿ ನೋಡಿಕೊಂಡು ಮಾಡಲಿ ಎಂದು ಸಲಹೆ ನೀಡಿದರು.  

ಜಾತಿ ಗಣತಿ ವಿಚಾರ :  ನೂತನ ಅಜೆಂಡಾಗಳೊಂದಿಗೆ ಜಾತಿಗಣತಿ ಜಾರಿಗೆ  ಹೋರಾಟ ನಡೆಯುತ್ತಿರುವ ವಿಚಾರದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಜಾತಿಗಣತಿ ಅನುಷ್ಠಾನಕ್ಕೆ ಒತ್ತಾಯಿಸಿ ಅಧಿವೇಶನದಲ್ಲಿ ಹೋರಾಟ ಮಾಡುವೆ.  

2A ಪ್ರವರ್ಗದ ಅಡಿಯಲ್ಲಿ ಪ್ರಬಲ ಜಾತಿಗಳ ಸೇರಿಸುವ ಬಗ್ಗೆ ತೀರ್ಮಾನ ಮಾಡಬೇಕಾದ್ದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಾತ್ರ. ಹೀಗಿರುವಾಗ ಈ ಬಗ್ಗೆ ಬೇರೆ ಯಾರೂ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸುಭಾಷ್ ಆಡಿ ನೇತೃತ್ವದ ಸಮಿತಿ ರದ್ದು ಮಾಡಬೇಕೆಂಬ ವಿಚಾರವಿದ್ದು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರುವಾಗ ಸುಭಾಷ್ ಆಡಿ ನೇತೃತ್ವದ ಸಮಿತಿಗೆ ಯಾವುದೇ ಮಹತ್ವ ಇಲ್ಲ. 

 90 ವರ್ಷಗಳ ಹಿಂದಿನ ಜಾತಿಜನಗಣತಿ ಆಧರಿಸಿ ಮೀಸಲಾತಿ ಮತ್ತು ಸರ್ಕಾರಿ ಸವಲತ್ತು ಕೊಡಲಾಗುತ್ತಿದೆ. 1931 ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಜಾತಿಜನಗಣತಿ ನಡೆದಿತ್ತು. ಹೀಗಾಗಿ ಈಗ ಜಾತಿಜನಗಣತಿ ಮಾಡಬೇಕು ಎಂದು ಒತ್ತಾಯ ಮಾಡಿರುವುದು. ನಾವು ಮಾಡಿರುವ ರಿಪೋರ್ಟ್ ಸರಿಯಿದೆ ಸರ್ಕಾರ ಅದನ್ನ ಅಂಗೀಕರಿಸಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. 

click me!