`ರೈತನ ಅನ್ನ ತಿನ್ನುತ್ತಿರುವ ನಾನು ರೈತನಿಗೆ ಯಾವುದೇ ಅನ್ಯಾಯ ಮಾಡಲ್ಲ'

By Suvarna NewsFirst Published Sep 28, 2020, 2:31 PM IST
Highlights

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ವಿರೋಧಿ ರೈತರ ಮಾಡುತ್ತಿರುವ ಪ್ರತಿಭಟನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಬೆಂಗಳೂರು, (ಸೆ.28) : ಎಪಿಎಂಸಿ ಕಾಯಿದೆ ತಾನು ಬೆಳೆದ ಬೆಳೆಯನ್ನು ರೈತರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತನ ನ್ಯಾಯಕ್ಕಾಗಿ ನಾನು ಹೋರಾಟ ಮಾಡಿ ಬಂದವನು. ಇದೊಂದು ಐತಿಹಾಸಿಕ ನಿರ್ಣಯ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

"

ಇಂದು (ಸೋಮವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ನಾನು ರೈತನ ಮಗನಾಗಿ 4ನೇ ಬಾರಿಗೆ ಸಿಎಂ ಆಗಿದ್ದೇನೆ. ರೈತನ ಅನ್ನ ತಿನ್ನುತ್ತಿರುವ ನಾನು ರೈತನಿಗೆ ಯಾವುದೇ ಅನ್ಯಾಯ ಮಾಡಲ್ಲ. ನಾನು ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತವನಲ್ಲ ಎಂದು ಹೇಳಿದರು.

' ಎಪಿಎಂಸಿಯಲ್ಲೂ ಲೋಪಗಳಿವೆ, ರೈತರ ಉತ್ಪನ್ನ ಮರು ಹರಾಜಾಗಿರುವ ಇತಿಹಾಸವೇ ಇಲ್ಲ'

ಎಪಿಎಂಸಿ ಕಾಯಿದೆ ಭೂಸುಧಾರಣೆ ಬಗ್ಗೆ ರೈತರು ಕಾಂಗ್ರೆಸ್ ನ ಕೆಲವರ ಪಿತೂರಿಯಿಂದ ಧರಣಿ ನಡೆಸುತ್ತಿದ್ದಾರೆ. ರೈತರನ್ನು ಕರೆದು ನಾನು ಕಾಯಿದೆ ಅನುಕೂಲದ ಬಗ್ಗೆ ಮನವರಿಕೆ ಮಾಡಿದೆ. ಆದರೆ ಅವರು ಸತ್ಯಾಗ್ರಹ ಮಾಡಬೇಕೆಂದು ನಿಶ್ಚಿಯ ಮಾಡಿ ಬಂದಿದ್ದರು ಎಂದರು.

ಈ ಕಾಯಿದೆಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ. ದಯಮಾಡಿ ನಾನು ರೈತರಿಗೆ ಮನವಿ ಮಾಡುತ್ತೇನೆ. ಇಂದು ಬೇಕಿದ್ರೆ ಚಳುವಳಿ ಮಾಡಿ ಆದರೆ ನಾಳೆ ಬನ್ನಿ ಕುಳಿತು ಮಾತಾಡೋಣ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿಯೇ ಈ ಕಾಯಿದೆ ತಂದಿದ್ದೇವೆ ಸ್ಪಷ್ಟಪಡಿಸಿದರು.

click me!