ಕರ್ನಾಟಕ 40 ಪರ್ಸೆಂಟ್‌ ಕಮಿಷನ್‌ಗೆ ಹೆಸರುವಾಸಿ: ಬಿಜೆಪಿ ವಿರುದ್ದ ಸುರ್ಜೆವಾಲಾ ವಾಗ್ದಾಳಿ

By Kannadaprabha News  |  First Published Mar 5, 2023, 2:40 AM IST

ರಾಜ್ಯದಲ್ಲಿರುವ ಪ್ರಸ್ತುತ ಬಿಜೆಪಿ ಸರ್ಕಾರ ಎಲ್ಲದಕ್ಕೂ ಕಮಿಷನ್‌ ಪಡೆಯುವ ಸರ್ಕಾರವಾಗಿದ್ದು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಪ್ರವಾಸದ ಸಮಯದಲ್ಲಿ ಜನರು ಅವರನ್ನು 40 ಪರ್ಸೆಂಟ್‌ ಸರ್ಕಾರ ಎಂದು ಸ್ವಾಗತ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ವಾಗ್ದಾಳಿ ನಡೆಸಿದರು. 


ಹಾಸನ (ಮಾ.05): ರಾಜ್ಯದಲ್ಲಿರುವ ಪ್ರಸ್ತುತ ಬಿಜೆಪಿ ಸರ್ಕಾರ ಎಲ್ಲದಕ್ಕೂ ಕಮಿಷನ್‌ ಪಡೆಯುವ ಸರ್ಕಾರವಾಗಿದ್ದು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಪ್ರವಾಸದ ಸಮಯದಲ್ಲಿ ಜನರು ಅವರನ್ನು 40 ಪರ್ಸೆಂಟ್‌ ಸರ್ಕಾರ ಎಂದು ಸ್ವಾಗತ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ವಾಗ್ದಾಳಿ ನಡೆಸಿದರು. ನಗರದ ಹೊರವಲಯದ ರೆಸಾರ್ಚ್‌ನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ ಮುಖಂಡರ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಹಾಗೂ ಗ್ಯಾರಂಟಿ ಕಾರ್ಡ್‌ ವಿತರಿಸಿ ಮಾತನಾಡಿದ ಅವರು, ನಾವು ಕೊಟ್ಟಿರುವ ಗ್ಯಾರಂಟಿ ಕಾರ್ಡ್‌ ಕೊಟ್ಟಿರುವುದನ್ನು ದೇಶದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷಗಳ ಸರ್ಕಾರ ಅನುಷ್ಟಾನಕ್ಕೆ ತರಲು ಪ್ರಯತ್ನ ಮಾಡುತ್ತದೆ ಎಂದರು.

ಮೋದಿ ಮೌನವಾಗಿದ್ದಾರೆ: ಎಲ್ಲೆ ಹೋದರು ಕರ್ನಾಟಕ 40 ಪರ್ಸೆಂಟ್‌ ಕಮಿಷನ್‌ಗೆ ಹೆಸರುವಾಸಿಯಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಬಸವರಾಜ್‌ ಬೊಮ್ಮಾಯಿ ಬಗ್ಗೆ 40 ಪರ್ಸೆಂಟ್‌ ಸಿಎಂ ಎಂದು ಕರೆಯುತ್ತಾರೆ. ಇದು ಕಾಂಗ್ರೆಸ್‌ ಪಕ್ಷ ಆರೋಪ ಮಾಡುತ್ತಿಲ್ಲ. ಗುತ್ತಿಗೆದಾರ ಸಂಘ ಈ ಬಗ್ಗೆ ಪತ್ರ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ 8 ಬಾರಿ ಬಂದರು ಈ ಭ್ರಷ್ಟಾಚಾರದ ಆರೋಪದ ಬಗ್ಗೆ ಉತ್ತರ ನೀಡಿರುವುದಿಲ್ಲ ಎಂದು ಆರೋಪಿಸಿದರು. ಬಿಜೆಪಿ ಶಾಸಕರು ಲಂಚ ತೆಗೆದುಕೊಳ್ಳುವಾಗ ರೆಂಡ್‌ ಹ್ಯಾಂಡ್‌ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಮೈಸೂರು ಸ್ಯಾಂಡಲ್‌ ಸೋಪ್‌ ಕಂಪನಿಯನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದ್ದಾರೆ. 

Tap to resize

Latest Videos

ಬಹುಮತದೊಡನೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ಕೆ.ಎಸ್‌.ಈಶ್ವರಪ್ಪ

ನಾವು ಟಿವಿಯಲ್ಲಿ ನೋಡಿದ್ದೆವೆ ಬಿಜೆಪಿ ಶಾಸಕನ ಮನೆಯಲ್ಲಿ 6 ಕೋಟಿ ನಗದು ಹಣ ಸಿಕ್ಕಿದೆ. ಇವರ ಭೃಷ್ಟಾಚಾರದಿಂದಾಗಿ ಕೆ.ಆರ್‌.ಪುರಂ ಸರ್ಕಲ್‌ ಇನ್ಸ್‌ಪೆಕ್ಟರ್‌ ಆತ್ಮಹತ್ಯೆ ಮಾಡಿಕೊಂಡರು. ರೂಪ್ಸ ಸಂಘಟನೆ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರು, ಲಿಂಗೇಶ್ವರ ಸ್ವಾಮೀಜಿ ಆರೋಪ ಮಾಡಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಈವೆರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದರು. ಹಾಸನ ಕಾಂಗ್ರೆಸ್‌ ಉಸ್ತುವಾರಿ, ಸಂಸದ ಡಿ.ಕೆ ಸುರೇಶ್‌ ಮಾತನಾಡಿ, ಹಾಸನ ಜಿಲ್ಲೆಯ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿದ್ದು, ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಬಾಕಿ ಇದೆ. 

ಅತಿ ಶೀಘ್ರದಲ್ಲಿ ಅರಕಲಗೂಡು ಮತ್ತು ಅರಸೀಕೆರೆ ತಾಲೂಕಿನಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಸುತ್ತೆವೆ. ಕಾಂಗ್ರೆಸ್‌ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಅ​ಧಿಕಾರದಲ್ಲಿ ಇಲ್ಲದಿದ್ದರೂ ಜನಪರ ಕೆಲಸ ಮತ್ತು ಹೋರಾಟಗಳನ್ನು ನಿರಂತರವಾಗಿ ಹಿರಿಯ ಮುಖಂಡರ ಮಾರ್ಗದರ್ಶನಲ್ಲಿ ಮಾಡಿದ್ದೇವೆ. ಕೋವಿಡ್‌ ಸಮಯದಲ್ಲಿ ಜನತಾದಳ ಕಾರ್ಯಕರ್ತರು ಮನೆಯಲ್ಲಿ ಕುಳಿತಿದ್ದರು. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಬೀದಿಯಲ್ಲಿ ನಿಂತು ಜನರಿಗೆ ಸಹಾಯ ಮಾಡಿದ್ದೇವೆ ಮತ್ತು ಬಡವರಿಗೆ ಆಹಾರದ ಕಿಟ್‌ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದ್ದೇವೆ ಎಂದರು. ರಾಜ್ಯ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಬಿಜೆಪಿಯ ಮಾಜಿ ಕೇಂದ್ರ ಮಂತ್ರಿ ಹಾಗೂ ಹಾಲಿ ಶಾಸಕರು ಹೇಳಿದ್ದಾರೆ. ಇದರ ಬಗ್ಗೆ ಹೋರಾಟ ಮಾಡಿದ್ದೆವೆ. ಯುಪಿಎ ಸರ್ಕಾರದ ಅವಧಿ​ಯಲ್ಲಿ ಪೆಟ್ರೋಲ್‌ ಮತ್ತು ಡಿಸೇಲ್‌ ಗ್ಯಾಸ್‌ ಬೆಲೆ ನಿಯಂತ್ರಣ ಇಟ್ಟುಕೊಂಡು ಸಬ್ಸಿಡಿ ಕೊಟ್ಟು ಬೆಲೆ ನಿಯಂತ್ರಣ ಮಾಡಲಾಗಿತ್ತು. 

ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆಯಾದರೆ ಜನರು ಬಳಸುವ ದಿನನಿತ್ಯದ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗುತ್ತದೆ. ಯುಪಿಎ ಸರ್ಕಾರದ ಅವ​ಧಿಯಲ್ಲಿ ಗ್ಯಾಸ್‌ ಬೆಲೆ ಜಾಸ್ತಿಯಿದ್ದಾಗ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ತಲೆ ಮೇಲೆ ಸಿಲಿಂಡರ್‌ ಹೊತ್ತು ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಜನತಾದಳ ಮುಖಂಡರು ಸಿಮೆ ಎಣ್ಣೆ ಡಬ್ಬಿ ಇಟ್ಟುಕೊಂಡು ಓಡಾಡುತ್ತಿದ್ದರು. ಕಾಂಗ್ರೆಸ್‌ ಆಡಳಿದಲ್ಲಿ ಸಾಮಾನ್ಯ ಜನರು ಉಪಯೋಗ ಮಾಡುವ ಬೆಲೆಗಳ ಏರಿಕೆ ಮಾಡದಂತೆ ತಡೆಯುವಂತಹ ಪ್ರಯತ್ನ ಮಾಡುತ್ತಿದ್ದರು. ಬೆಲೆ ಏರಿಕೆ ನಿಯಂತ್ರಣ ಮಾಡುವುದಾಗಿ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅ​ಧಿಕಾರಕ್ಕೆ ಬಂದರು. ಬೆಲೆ ಏರಿಕೆ ಬಗ್ಗೆ ಜಿಲ್ಲೆ, ತಾಲೂಕು, ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ ಹೋರಾಟ ಮಾಡಿದರು ಬಿಜೆಪಿ ಕೇಂದ್ರ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿದರು.

ಜೆಡಿಎಸ್‌-ಬಿಜೆಪಿ ಹೊಂದಾಣಿಕೆ: ಜೆಡಿಎಸ್‌ ಪಕ್ಷದ ಕುಮಾರಸ್ವಾಮಿ ಮತ್ತು ಇನ್ನಿತರ ನಾಯಕರು ಬೆಲೆ ಏರಿಕೆ ವಿರುದ್ಧ ಮಾತನಾಡದೇ, ಹೊಂದಾಣಿಕೆ ರಾಜಕೀಯಕ್ಕೆ ಅನುಕೂಲ ಮಾಡಿಕೊಳ್ಳಲು ಆಗೊಂದು ಈಗೊಂದು ಆರೋಪ ಮಾಡುತ್ತಾರೆ. ಜನತಾದಳದ ನಾಯಕರು ಯಾರ ಜೊತೆ ಸೇರಿಕೊಳ್ಳಬೇಕು ಅದರ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಜಿಎಸ್ಟಿಮುಖಾಂತರ ದೇಶದಲ್ಲಿ ವಾಸ ಮಾಡುವ ಕೂಲಿ ಮಾಡುವ ಮಹಿಳೆ ರೈತರು ಎಲ್ಲಾ ಸೇರಿ ಕಟ್ಟುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕೆವಲ 8 ಲಕ್ಷ ಜನ ತೆರಿಗೆ ಕಟ್ಟುತ್ತಾರೆ ಎಂದು ಹೇಳಿಕೆ ನೀಡುತ್ತಾರೆ. ಕರ್ನಾಟಕದಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಶಾಸಕರು ಸಚಿವರು ಹಣ ವಸೂಲಿ ಮಾಡುವುದು ಅಮಿತ್‌ ಶಾ ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಾಗುವುದಿಲ್ಲ. 

ಅವರಿಗೆ ಕೇಳಿಸುವುದು ಇಲ್ಲ. ನಮ್ಮ 3 ಗ್ಯಾರಂಟಿ ಕಾರ್ಡಗಳನ್ನು ಬೂತ್‌ ಮಟ್ಟದಲ್ಲಿ ಮಾ. 15 ರೊಳಗೆ ತಲುಪಿಸುವ ಕೆಲಸ ಮಾಡಬೇಕು. ಮನೆ ಮನೆಗೆ ಫ್ರೀ ಕರೆಂಟ್‌ ಕೊಡುವ ಬಗ್ಗೆ ಮನೆ ಮನಗೆ ಪ್ರಚಾರ ಮಾಡಬೇಕು ಎಂದು ಕಿವಿಮಾತು ಹೇಳಿದರು. ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ನಾನು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಕಾಂಗ್ರೆಸ್‌ ಸೇರ್ಪಡೆಗೆ ಕಾರಣವಾಯಿತು. ಕಾರಣ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಕಾಂಗ್ರೆಸ್‌ ಪಕ್ಷದ ಡಿ.ಕೆ. ಶಿವಕುಮಾರ್‌, ಡಿ.ಕೆ. ಸುರೇಶ್‌, ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ಶಿವಮೊಗ್ಗದಲ್ಲಿ ಪ್ರಚಾರ ಮಾಡಿದ ಕಾರಣ ಬಿಜೆಪಿಗೆ ಲೀಡ್‌ ಕಡಿಮೆಯಾಯಿತು. 

ರಾಜಕಾರಣ ಮಾಡುವುದು ಮೋಜಿಗಾಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಇನ್ನೂ ಎರಡು ದಿನ ಪ್ರಚಾರ ಮಾಡಿದ್ರೆ ನಾನು ಆ ಚುನಾವಣೆಯಲ್ಲಿ ಜಯಗಳಿಸುತ್ತಿದ್ದೆನು. ಹಾಸನ ಜಿಲ್ಲೆ ಮತ್ತು ಇಡಿ ರಾಜ್ಯದಲ್ಲಿ ಬದಲಾವಣೆ ತರಬೇಕು. ಯಾರೇ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧೆ ಮಾಡಿದರೂ ಅವರಿಗೆ ಬೆಂಬಲಕೊಡಬೇಕು ಎಂದು ಕಿವಿಮಾತು ಹೇಳಿದರು. ಬಿಜೆಪಿ ಪಕ್ಷ ಎಂದ್ರೆ ಸಾವಿನಲ್ಲಿ ರಾಜಕಾರಣ ಮಾಡುತ್ತಾರೆ. ಜಾತಿ ಧರ್ಮದ ಮೇಲೆ ಬಾವನಾತ್ಮಕ ಚುನಾವಣೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಇ.ಎಚ್‌. ಲಕ್ಷತ್ರ್ಮಣ್‌, ಮಾಜಿ ಶಾಸಕ ಸಿ.ಎಸ್‌. ಪುಟ್ಟೇಗೌಡ, ಕಾಂಗ್ರೆಸ್‌ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ. ಯೂತ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗೊರೂರು ರಂಜಿತ್‌, ಅಶೋಕ್‌ ಹಾಗೂ ಹಾಸನ ಕ್ಷೇತ್ರದ ಆಕಾಂಕ್ಷಿಗಳು ಉಪಸ್ಥಿತರಿದ್ದರು.

ವಿವಿಧ ಹುದ್ದೆಗಳ ಮಾರಾಟವಾಗಿದೆ: ಪೊಲೀಸ್‌ ಸಬ್‌ ಇನ್ಸ್‌ಪಕ್ಟರ್‌ ನೇಮಕಾತಿ 80 ಲಕ್ಷ ಕ್ಕೆ ಮಾರಾಟವಾಗಿದ್ದು, ಒಬ್ಬ ಎಡಿಜಿಪಿ ಜೈಲಿನಲ್ಲಿ ಇದ್ದಾರೆ. ಇದರಲ್ಲಿ ಬರಿ ಎಡಿಜಿಪಿಗೆ ಹಣ ಹೋಗಿಲ್ಲ ಅವರ ಮೇಲೆ ಇದ್ದಂತ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮತ್ತು ಅರಂಗ ಜ್ಞಾನೇಂದ್ರ ಅವರಿಗೆ ಹಣ ಹೊಗಿದೆ. ಇವರನ್ನು ಯಾರು ತನಿಖೆ ಮಾಡುತ್ತಾರೆ. ಸಹಾಯಕ ಪ್ರಾಧ್ಯಾಪಕರು, ಎ.ಇ.ಜೆ.ಇ. ಅಸಿಸ್ಟೆಂಟ್‌ ರಿಜಿಸ್ಟರ್‌ ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಕೆ.ಎಂ.ಎಫ್‌ ನೇಮಕಾತಿಯಲ್ಲಿಯೂ ಬೃಹತ್‌ ಭ್ರಷ್ಟಾಚಾರ ನಡೆದಿದೆ ಎಂದು ಸುರ್ಜೇವಾಲ ಆರೋಪಿಸಿದರು.

click me!