ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಾ ಹೋದರೆ ಬಡಕುಟುಂಗಳ ಪರಿಸ್ಥಿತಿ ಏನು?: ಪ್ರಧಾನಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯ
ಶ್ರೀನಿವಾಸಪುರ(ಆ.11): ಪ್ರಧಾನಿ ಮೋದಿಯವರು ಸಂಸಾರದ ಹೊಣೆ ಹೊತ್ತಿಲ್ಲ, ಸಂಸಾರ ನಿರ್ವಹಣೆ ಮಾಡುವವರಿಗೆ ಅದರ ಕಷ್ಟಗೊತ್ತು, ಸಿಲೆಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಾ ಹೋದರೆ ಬಡಕುಟುಂಗಳ ಪರಿಸ್ಥಿತಿ ಏನು? ಇದರಿಂದಾಗಿ ಬಡಕುಟುಂಬಗಳ ಬೆನ್ನಿನ್ನ ಮೇಲೆ ಬರೇ ಎಳೆಯುತ್ತಿದೆ. ಈ ಸರ್ಕಾರದಲ್ಲಿ ಬಡವರ ಏಳಿಗೆಗಿಂತ ಶ್ರೀಮಂತರ ಏಳಿಗೆ ಆಗುತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟೀಕಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಡಿಸಿಸಿ ಬ್ಯಾಂಕ್ ವತಿಯಿಂದ 376 ಸ್ತ್ರೀ ಶಕ್ತಿ ಸಂಘಗಳಿಗೆ ಒಟ್ಟು 18 ಕೋಟಿ 54 ಲಕ್ಷ ರು. ಸಾಲ ವಿತರಣೆ ಮಾಡಿ ಮಾತನಾಡಿದ ಅವರು, ನಮ್ಮ ದೇಶದ ಭವಿಷ್ಯ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ಅರ್ಥಿಕವಾಗಿ ಸಬಲರಾಗಲು ಡಿಸಿಸಿ ಬ್ಯಾಂಕ್ ನೆರವಾಗುತ್ತಿದೆ. ಡಿಸಿಸಿ ಬ್ಯಾಂಕ್ ಪುನಶ್ಚೇತನಗೊಂಡ ದಿನದಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲವನ್ನು ನೀಡಿ ಬಡಕುಟುಂಬಗಳ ಮಹಿಳೆಯರಿಗೆ ಬೆನ್ನೆಲುಬಾಗಿ ನಿಂತಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕನಸು ಕಂಡಿರುವ ಡಿಸಿಸಿ ಬ್ಯಾಂಕ್ ಮಹಿಳೆಯರ ಅಭಿಮಾನದಿಂದ, ಆರ್ಶೀವಾದಿಂದ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದರು.
ಕೋಲಾರದಲ್ಲಿ ಕೈ-ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು: ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ
ಡಿಸಿಸಿ ಬ್ಯಾಂಕ್ ಯಾರು ಮಧ್ಯವರ್ತಿಗಳನ್ನು ಬಳಸಿಕೊಳ್ಳದೇ ನೇರವಾಗಿ ನಿಮಗೆ ಗೌರವಯುತವಾಗಿ ಸಾಲ ನೀಡುತ್ತಿದೆ. ಅದೇ ಗೌರವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಬ್ಯಾಂಕ್‌ಗೆ ಹಣವನ್ನು ಹಿಂದುರುಗಿಸಿ, ಬ್ಯಾಂಕ್ ಏಳಿಗೆಗಾಗಿ ದುಡಿಯುತ್ತಿರುವುದು ಸಂತೋಷದ ಸಂಗತಿ ಎಂದರು.
ಒಬ್ಬ ಮಹಿಳೆಗೆ 1 ಲಕ್ಷ ಸಾಲ:
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಸಂಘದಲ್ಲಿ ಒಬ್ಬ ಮಹಿಳೆಗೆ 1ಲಕ್ಷ ನೀಡಲಾಗುವುದು. ರೈತ ಸಂಘದ ಒಬ್ಬ ರೈತನಿಗೆ 5 ಲಕ್ಷ ರು.ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರದಲ್ಲಿ ಇಂದಿರಾಗಾಂಧಿ ಆಡಳಿತದ ದಿನಗಳಲ್ಲಿ ಬಡವರ ಏಳಿಗೆಗಾಗಿ ಮನ್ನಣೆ ನೀಡುತ್ತಾ, ಸದಾ ಬಡಕುಟುಂಗಳನ್ನು ಕಾಪಾಡಿಕೊಂಡು ಬರುತ್ತಿದ್ದರು. ಆದರೆ ಈಗಿನ ಮೋದಿ ಸರ್ಕಾರವು ಕೇಂದ್ರದಲ್ಲಿನ ಆಡಳಿತ ರೂಢ ಬಿಜೆಪಿಯು ಚುನಾವಣಾ ಪೂರ್ವ ಹೇಳೋದು ಒಂದು, ನಂತರ ಮಾಡೋದೆ ಇನ್ನೊಂದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಿದ್ದು ಮುಗಿಸಲು ಉತ್ತರ ಕುಮಾರನ ತಂಡದ ಖೆಡ್ಡ ಸೃಷ್ಟಿ: ಸುಧಾಕರ್
ಎಂಎಲ್‌ಸಿ ಅನಿಕುಮಾರ್ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ನಿಮಗಾಗಿ ಹಗಲಿರುಲು ಸೇವಕನಾಗಿ ದುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಲ್ಲಿ ನಿಮ್ಮಲ್ಲೆರ ಸೇವಕನಿಗೆ ದುಡಿಯುತ್ತಿರುವ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಭೆಯಲ್ಲಿ ಶ್ರೀನಿವಾಸಪುರ ಶಾಖೆಯ ಯಲ್ದೂರು 182 ಸಂಘಗಳಿಗೆ, ದಳಸನೂರು 107 ಸಂಘಗಳಿಗೆ, ಅಡ್ಡಗಲ್ 33 ಸಂಘಗಳಿಗೆ, ಮಣಿಗಾನಹಳ್ಳಿ 54 ಸಂಘಗಳಿಗೆ ಒಟ್ಟು 18 ಕೋಟಿ 57 ಲಕ್ಷ ರು. ಸಾಲ ವಿತರಣೆ ಮಾಡಲಾಯಿತು.
ಪಿಕರ್ಡ್ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್‌ಶರೀಪ್, ಮುಖಂಡರಾದ ಸುಧಾಕರ್, ಬಿ.ಜಿ.ಖಾದರ್, ಅಯ್ಯಪ್ಪ , ಹೂಹಳ್ಳಿ ಸುರೇಶ್‌ಬಾಬು ಇದ್ದರು.