* ವಿವಾದದ ವಿಚಾರಗಳೆಲ್ಲವನ್ನು ಮಾತನಾಡಲು ಭಜರಂಗದಳ ವಿಎಚ್‌ಪಿ ಯಾರು?
* ಸಿಎಂ ಬಸಣ್ಣ ಮೂಕ ಕುಳಿತದ್ದಕ್ಕೇ ನಡೀತಿದೆ
* ಸಿಎಂ ಸಂಘ ಪರಿವಾರದ ಕೈಗೊಂಬೆ
ಕಲಬುರಗಿ(ಏ.06): ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಸಿಎಂ ಬಸಣ್ಣ (Basavaraj Bommai) ಮೂಕ ಬಸವಣ್ಣ ಆಗಿದ್ದಾರೆ. ಹಾಗಾಗಿ, ಭಜರಂಗದಳ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದೆ. ಇವರನ್ನು ಯಾರಿಂದಲೂ ನಿಯಂತ್ರಿಸಲಾಗುತ್ತಿಲ್ಲವೇಕೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ(Priyank Kharge) ಖಾರವಾಗಿ ಪ್ರಶ್ನಿಸಿದ್ದಾರೆ.
ಕಲಬುರಗಿ(Kalaburagi) ಸಂಚಾರದಲ್ಲಿರುವ ಪ್ರಿಯಾಂಕ್ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್(Hijab), ಹಲಾಲ್(Halal) ಹಾಗೂ ಮಸೀದಿಗಳ ಮೇಲಿನ ಮೈಕ್ ತೆಗೆಸುವ ವಿವಾದಗಳು ಹೀಗೆಲ್ಲಾ ಅಡ್ಡಾದಿಡ್ಡಿ ಬೆಳೆಯೋದು ನೋಡಿದ್ರೆ ಸರ್ಕಾರ ಸತ್ತೋಗಿದೆ, ಬಸಣ್ಣ (ಸಿಎಂ) ಮೂಕ ಬಸವಣ್ಣ ಆಗಿದ್ದಾರೆಂದೇ ಹೇಳುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.
Kalaburagi Politics: ಸಂಸದ ಜಾಧವ್ ವಿರುದ್ಧ ಕ್ರಿಮಿನಲ್ ಖಟ್ಲೆ: ಪ್ರಿಯಾಂಕ್ ಗುಡುಗು
ಹಿಜಾಬ್, ಹಲಾಲ್ ನಂತರ ಈಗ ಮಸೀದಿಗಳ ಮೇಲಿನ ಮೈಕ್‌ಗಳ ತೆರವಿಗೆ ಹಿಂದೂ(Hindu) ಪರ ಸಂಘಗಳು ಒತ್ತಾಯಿಸುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮಸೀದಿಗಳ ಮೇಲಿನ ಮೈಕ್(Mic) ಬಳಕೆಗೆ ವಾಯುವ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸುಪ್ರಿಂಕೋರ್ಟ್(Supreme Court) ಕೆಲವೊಂದು ನಿಯಮಗಳನ್ನು ರೂಪಿಸಿದೆ. ಇದು ಮಂದಿರ ಹಾಗೂ ಚರ್ಚ್‌ಗಳಿಗೂ ಕೂಡಾ ಅನ್ವಯಿಸುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರಲಿ ಎಂದರು.
ಆದರೆ ಇಂತಹ ವಿವಾದಕರ ವಿಚಾರಗಳೆಲ್ಲವನ್ನು ಭಜರಂಗದಳ ಮಾತನಾಡುತ್ತಿದೆ. ಎಲ್ಲವನ್ನೂ ಮಾತನಾಡಲು ಇವರು ಯಾರು? ಯಾರು ಹಲಾಲ್ ಸರ್ಟಿಫಿಕೇಟ್ ತಗೊಂಡಿಲ್ಲ ಹೇಳಿ? ಅಂಬಾನಿ ತಗೊಂಡಿಲ್ವಾ? ಅದು ವ್ಯಾಪಾರ, ಅದರ ಪಾಡಿಗೆ ಬಿಟ್ಟುಬಿಡಲಿ. ಪೆಟ್ರೋಲ್, ಡಿಸೇಲ್ ದರ ಗಗನಕ್ಕೇರಿದೆ. ಅಡುಗೆ ಅನಿಲ ಬೆಲೆ ಒಂದು ಸಾವಿರ ರು. ದಾಟಿದೆ. ಸಿರಸಿಯಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ ರು. 111 ಆಗಿದೆ. ಸಿಎಂ ಎಲ್ಲಿದ್ದಾರೆ? ಸರ್ಕಾರ ಎಲ್ಲಿದೆ? ಅದರ ಬಗ್ಗೆ ಮಾತನಾಡಲಿ ನೋಡೋಣ? ಬಿಜೆಪಿ(BJP) ಹಾಗೂ ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ದೇಶಗಳಿಂದ(Muslim Countries) ಆಮದಾಗುತ್ತಿರುವ ಪೆಟ್ರೋಲ್ ಡಿಸೇಲ್ ಹಾಕಿಸಿಕೊಳ್ಳುವುದನ್ನ ನಿಲ್ಲಿಸುವ ಮೂಲಕ ನೈಜ ಹಿಂದುತ್ವವನ್ನು ಮೆರೆಯಲಿ ಎಂದು ಸವಾಲು ಹಾಕಿದರಲ್ಲದೆ ಸಿಎಂ ಬಸಣ್ಣ ಮೂಕರಾಗಿರುವುದಕ್ಕೆ ಇದೆಲ್ಲಾ ನಡೆಯುತ್ತಿದೆ ಎಂದು ಕುಟುಕಿದರು.
ಸರ್ಕಾರ ವೈಫಲ್ಯ ಎದುರಿಸುತ್ತಿರುವಾಗ ಜನರು ನ್ಯಾಯಾಲಯಗಳ ಮೊರೆ ಹೋಗುತ್ತಾರೆ ಎಂದ ಖರ್ಗೆ ಈಗ ರಾಜ್ಯದಲ್ಲಿ(Karnataka) ಇದೇ ಆಗುತ್ತಿದೆ. ಜನರು ನ್ಯಾಯಾಲಯಕ್ಕೆ ಹೋಗುವಂತ ಸ್ಥಿತಿ ನಿರ್ಮಾಣವಾದರೆ ಸರ್ಕಾರ ಯಾಕೆ ಇರಬೇಕು? ವಿಧಾನಸಭೆ ಯಾಕಿರಬೇಕು? ವಿಧಾನಸಭೆ ವಿಸರ್ಜನೆ ಮಾಡಿ ಎಲ್ಲವನ್ನೂ ಕೇಶವ ಕೃಪಾಕ್ಕೆ ಕೊಟ್ಟುಬಿಡಲಿ. ಆರ್ಥಿಕವಾಗಿ ಸಬಲವಾಗಿದ್ದ ರಾಜ್ಯ ಏನಾಗುತ್ತಿದೆ? ಮೊನ್ನೆ ತೆಲಂಗಾಣ ಸಚಿವರೊಬ್ಬರು ಸಮಾಜಿ ಸಮಾನತೆಯ ವಾರವರಣ ಇದೆ ಎಲ್ಲಾ ಕಂಪನಿಗಳು ಹೈದರಾಬಾದ್ ಗೆ ಬನ್ನಿ ಎಂದು ಕರೆದಿದ್ದಾರೆ. ಬಿಜೆಪಿಗೆ ಹೇಳಿಕೊಳ್ಳುವಂತ ಸಾಧನೆ ಇಲ್ಲ ಹಾಗಾಗಿ ಇದೆಲ್ಲವನ್ನು ಶುರು ಮಾಡಿದ್ದಾರೆ. ಸಿಎಂ ಸಂಘ ಪರಿವಾರದ ಕೈಗೊಂಬೆಯಾಗಿದ್ದಾರೆಂದು ಟೀಕಿಸಿದರು.
Karnataka Politics: ಬಿಜೆಪಿ ಸಂಸದ ಜಾಧವ್‌ಗೆ 2 ನಾಲಿಗೆ: ಪ್ರಿಯಾಂಕ್ ವಾಗ್ದಾಳಿ
ತಾಕತ್ತಿದ್ದರೆ ಮುಸ್ಲಿಂ ರಾಷ್ಟ್ರಗಳ ಜತೆ ವ್ಯಾಪಾರ ನಿಲ್ಲಿಸಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಧರ್ಮದ ಆಧಾರದಲ್ಲಿ ವ್ಯಾಪಾರಕ್ಕೆ ಕಡಿವಾಣ ಹಾಕುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ (Priyank Kharge), ತಾಕತ್ತಿದ್ದರೆ ಮುಸ್ಲಿಂ ರಾಷ್ಟ್ರಗಳ (Islamic Countries) ಜೊತೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಲಿ. ಪೆಟ್ರೋಲ್, ಡೀಸೆಲ್ ಎಲ್ಲಿಂದ ಬರುತ್ತದೆ? ವಿಪ್ರೋ ಯಾರದ್ದು ಎಂದು ಹರಿಹಾಯ್ದಿದ್ದರು. ಮಾ.27 ರಂದು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕೋಮಿನವರ ವ್ಯಾಪಾರಕ್ಕೆ ಕಡಿವಾಣ ಹಾಕಲಾಗುತ್ತಿದೆ. ಜಾತಿ, ಧರ್ಮದ ರಾಜಕಾರಣ ಮಾಡುತ್ತಿದ್ದಾರೆ.
ಹಸಿವಿಗೆ ಯಾವ ಜಾತಿ, ಧರ್ಮವಿದೆ?
ಪೆಟ್ರೋಲಿಯಂ ಉತ್ಪನ್ನಗಳನ್ನು ಇಸ್ಲಾಂ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವಿಪ್ರೋದಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ? ವಿಪ್ರೋ ಯಾರದ್ದು ಎಂದು ಪ್ರಶ್ನಿಸಿದರು. ಹಿಜಾಬ್, ಹಿಂದೂ-ಮುಸ್ಲಿಂ, ಭಗವದ್ಗೀತೆ ಹೆಸರಿನಲ್ಲಿ ರಾಜ್ಯದಲ್ಲಿ ಸೌಹಾರ್ದತೆ ಕದಡಿದ್ದಾರೆ. ಕರ್ನಾಟಕದಂತೆ ಆಗಬೇಕು ಎಂದು ಉತ್ತರ ಪ್ರದೇಶದವರು ಬಯಸುತ್ತಿದ್ದಾರೆ. ಅಲ್ಲಿನವರು ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಆದರೆ ಇವರು ಉತ್ತರ ಪ್ರದೇಶ ಮಾದರಿ ಮಾಡಲು ಹೊರಟಿದ್ದಾರೆ. ರಾಜ್ಯಕ್ಕೆ ಎರಡು ವರ್ಷದಿಂದ ಬಂಡವಾಳ ಹರಿದು ಬರುತ್ತಿಲ್ಲ. ಹೀಗಾದರೆ ಯಾರು ಮುಂದೆ ಬರುತ್ತಾರೆ ಎಂದು ತರಾಟೆ ತೆಗೆದುಕೊಂಡಿದ್ದರು.