ಕಾಂಗ್ರೆಸ್‌ನಲ್ಲಿ‌ ಮತ್ತೊಮ್ಮೆ ಭಿನ್ನಮತ ಸ್ಫೋಟ:'ಕೈ' ಪಾಳಯದಲ್ಲಿ ಎಲ್ಲವೂ ಸರಿ ಇದ್ಯಾ?

By Girish Goudar  |  First Published Apr 6, 2022, 9:48 AM IST

*  ಕಾರ್ಪೋರೇಟರ್ ಮತ್ತವರ ಗಂಡ ಕಾಂಗ್ರೆಸ್ ಸದಸತ್ವ ಸ್ಥಾನಕ್ಕೆ ರಾಜೀನಾಮೆ
*  ಮೇಯರ್ ಚುನಾವಣೆ ನಡೆದು‌‌ ಒಂದು ತಿಂಗಳೊಳಗೆ ಅಸಮಾಧಾನ
*  ಮೇಯರ್ ಚುನಾವಣೆ ಕೊನೆಯ ಘಳಿಗೆವರೆಗೂ ಅಸಮಾಧಾನ ಇತ್ತು
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಏ.06):  ಒಂದು ಕಾಲದಲ್ಲಿ ಕಾಂಗ್ರೆಸ್(Congress) ತವರೂರಾದ ಬಳ್ಳಾರಿಯಲ್ಲಿ(Ballari) ‌ಇದೀಗ ಕಾಂಗ್ರೆಸ್‌‌ನಲ್ಲಿ ಎಲ್ಲವೂ ಸರಿಯಲ್ಲ. ಇದಕ್ಕೆ ತಾಜಾ ಉದಾಹರಣೆ ಮೊನ್ನೆ ನಡೆದ ಮೇಯರ್ ಮತ್ತು ಉಪಮೇಯರ್ ಚುನಾವಣೆ. ಯಾಕೆಂದರೆ ಸಂಪೂರ್ಣ ಬಹುಮತ ಇದ್ರೂ ಮೇಯರ್ ಉಪಮೇಯರ್ ಆಯ್ಕೆ ವೇಳೆ ತಮ್ಮ ಸದಸ್ಯರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗೋ‌‌ ಮೂಲಕ ಎಲ್ಲರನ್ನೂ ಒಟ್ಟುಗೂಡಿಸೋ ಪ್ರಯತ್ನ ಮಾಡಿದ್ರು. ಆದ್ರೇ ಮೇಯರ್ ಉಪಮೇಯರ್ ಆಯ್ಕೆಯಾದ ತಿಂಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾರ್ಪೋರೇಟರ್ ಮತ್ತವರ ಪತಿ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ‌ಮತ್ತೊಮ್ಮೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಲ್ಲ ಅನ್ನೋದು ಸಾಭಿತಾಗಿದೆ. 

Tap to resize

Latest Videos

undefined

ಅಸಮಾಧಾನದಲ್ಲೇ ಚುನಾವಣೆ ‌ಮುಗಿದ ಮೇಲೂ‌‌ ನಿಲ್ಲದ ಮುಸುಕಿನ ಗುದ್ದಾಟ

ಹೌದು, ಕಳೆದ ತಿಂಗಳ 19 ರಂದು ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ(Election) ನಡೆದಿತ್ತು.‌ ಆದ್ರೇ ಇನ್ನೂ ಸರಿಯಾಗಿ ಒಂದು ತಿಂಗಳು ಕೂಡ ಆಡಳಿತ ನಡೆಸಿಲ್ಲ ಅಷ್ಟರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಹುಮತವಿದ್ರೂ ಮೇಯರ್ ಉಪಮೇಯರ್ ಮಾಡಿಲು ಹೆಣಗಾಡಿದ್ದ ಕಾಂಗ್ರೆಸ್ ನಲ್ಲೀಗ ಭಿನ್ನಾಮತ ಹೊಗೆ ಜೋರಾಗಿದೆ.  6 ನೇ ವಾರ್ಡ್ ಕಾಪೋರೇಟರ್ ಎಂ.ಕೆ. ಪದ್ಮರೋಜ ಮತ್ತು ಅವರ ಪತಿ ಮಾಜಿ ಕಾರ್ಪೋರೆಟರ್ ಎಂ.ವಿವೇಕ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡೋ ಮೂಲಕ ‌ನೇರವಾಗಿ‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸಾಭಿತು‌ ಮಾಡಿದ್ದಾರೆ. 

Ballari: ಹಿಜಾಬ್, ಹಲಾಲ್‌ ಆಯ್ತು ಇದೀಗ ಮತ್ತೊಂದು ವಿವಾದ ಶುರು: ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದ

ರಾಜೀನಾಮೆ ಪತ್ರದಲ್ಲಿ ಅಸಮಾಧಾನ ಮೇಯರ್ ಚುನಾವಣೆ ವೇಳೆ

ಪಕ್ಷದಲ್ಲಿ ಹಿರಿತನವನ್ನು ಪರಿಗಣಿಸದೆ ಪಾಲಿಕೆಯಲ್ಲಿ ಹೊಸಬರಿಗೆ ಮಣೆ ಹಾಕಿದ್ದಕ್ಕೆ ಅಸಮಾಧಾನವಿದೆ ಎಂದು ನೇರವಾಗಿ ಆರೋಪಿಸಲಾಗಿದೆ. ಮೇಯರ್ ಚುನಾವಣೆಯಲ್ಲಿ ಕೆಪಿಸಿಸಿ(KPCC) ಅಧ್ಯಕ್ಷರು ಸೀನಿಯಾರಿಟಿಯನ್ನು ಪರಿಗಣಿಸಲಿದೆ ಎಂದಿದ್ದರು.

ವೀಕ್ಷಕರಾದ ಯು.ಟಿ.ಖಾದರ್(UT Khader) ಅವರು ಗೋಲ್ಡ್ ಪಿಂಚ್ ಹೊಟೇಲ್‌ನಲ್ಲಿ ನಡೆಸಿದ ಸಭೆಯಲ್ಲಿ ಸಹ ಇದನ್ನೇ ಹೇಳಿದ್ದರು. ಆದ್ರೇ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿರುವ ನಮ್ಮ‌ಮನೆತನವನ್ನು ಪರಿಗಣಿಸಿಲ್ಲ. ಮೊದಲ ಬಾರಿಗೆ ಕಾರ್ಪೋರೆಟ್ ಆದವರಿಗೆ ಅವಕಾಶ ನೀಡಿದ್ದು ಬೇಸರ ತರಿಸಿದೆ ಹೀಗಾಗಿ ರಾಜೀನಾಮೆ ‌ನೀಡೋದಾಗಿ ದಂಪತಿಗಳು ಹೇಳಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮತ್ತು ಜಿಲ್ಲಾಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 

Karnataka Politics: ಪಕ್ಷ ಬಲವರ್ಧನೆಗೆ ಜೆಡಿಎಸ್‌ ಜನತಾ ಜಲಧಾರೆ ಯಾತ್ರೆ

ಮೇಯರ್ ಚುನಾವಣೆ ಕೊನೆಯ ಘಳಿಗೆವರೆಗೂ ಅಸಮಾಧಾನ ಇತ್ತು

ಪಾಲಿಕೆ ಚುನಾವಣೆ ವೇಳೆ ಶಾಸಕ ನಾಗೇಂದ್ರ, ಸಂಸದ ನಾಸೀರ್ ಹುಸೇನ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು ಭಾರಿ ಪೈಪೋಟಿಯೊಂದಿಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ರು. ನಂತರ ಮೇಯರ್ ಉಪಮೇಯರ್ ಚುನಾವಣೆ ವೇಳೆಯೂ ತಮ್ಮ ಬೆಂಬಲಿಗರಿಗೆ ಅವಕಾಶ ಕೊಡಿಸಲು ಭಾರಿ ಕಸರತ್ತು ನಡೆದಿತ್ತು. ಕೊನೆಗೆ ಶಾಸಕ ನಾಗೇಂದ್ರ(Nagendr) ಬಣದವರಿಗೆ ಅದೃಷ್ಟ ಒಲಿದು ಬಂದಿತ್ತು.

ಮೇಯರ್‌ ಆಗಿ 34ನೇ ವಾರ್ಡ್‌ ಕಾಂಗ್ರೆಸ್ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಆಗಿ 37ನೇ ವಾರ್ಡ್‌ನ ಮಾಲನ್ ಬೀ ಆಯ್ಕೆಯಾಗಿದ್ರು. ಆದರೆ ಮೇಯರ್ ಮತ್ತು ಉಪಮೇಯರ್ ಆಕಾಂಕ್ಷೆಗಳು ಇದೀಗ ಒಬ್ಬೊಬ್ಬರಾಗಿ ರಾಜೀನಾಮೆ ನೀಡೋ ಮೂಲಕ ಕಾಂಗ್ರೆಸ್ ಒಡೆದ ಮನೆ ಎನ್ನುವುದನ್ನು ಸಾಭೀತು ಮಾಡಿದ್ದಾರೆ. ಒಟ್ಟು 39 ಸದಸ್ಯರ ಪೈಕಿ 21 ಕಾಂಗ್ರೆಸ್ 5 ಪಕ್ಷೇತರರು ಮತ್ತು 13 ಬಿಜೆಪಿ(BJP) ಸದಸ್ಯರಿದ್ದಾರೆ. ಇದರಲ್ಲಿ ಬಹುತೇಕ ಪಕ್ಷೇತರರು ಕಾಂಗ್ರೆಸ್ ಜೊತೆಗೆ ಇದ್ದಾರೆ.
 

click me!