'ರಾಜ್ಯಕ್ಕೆ ಬಂದಿರೋ ಅಮಿತ್ ಶಾ ಗೃಹ ಇಲಾಖೆಯ ಅವಾಂತರ ನೋಡಲಿ'

Published : May 03, 2022, 06:53 PM ISTUpdated : May 03, 2022, 06:54 PM IST
'ರಾಜ್ಯಕ್ಕೆ ಬಂದಿರೋ ಅಮಿತ್ ಶಾ ಗೃಹ ಇಲಾಖೆಯ ಅವಾಂತರ ನೋಡಲಿ'

ಸಾರಾಂಶ

* ಬಿಜೆಪಿ ವಿರುದ್ಧ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ‌.ಪಾಟೀಲ್ ವಾಗ್ದಾಳಿ * ರಾಜ್ಯಕ್ಕೆ ಬಂದಿರೋ ಅಮಿತ್ ಶಾ ಅವರು ಗೃಹ ಇಲಾಖೆ ಅವಾಂತರ ನೋಡಲಿ * ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹೇಳಿಕೆ

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾ ನೆಟ್ ಸುವಣ೯ನ್ಯೂಸ್, ಬಾಗಲಕೋಟೆ.

ಬಾಗಲಕೋಟೆ, (ಮೇ.03):- ನಾಡಿನಾದ್ಯಂತ ಇಂದು(ಮಂಗಳವಾರ) ಬಸವ ಜಯಂತಿ ಆಚರಣೆ ಅದ್ದೂರಿಯಾಗಿ ನಡೆಯುತ್ತಿರುವ ಬೆನ್ನಲ್ಲೇ  ಬಾಗಲಕೋಟೆ ಜಿಲ್ಲೆಯ ತ್ರಿವೇಣಿ ಸಂಗಮದ ನಾಡು ಕೂಡಲಸಂಗಮಕ್ಕೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್ ಭೇಟಿ ನೀಡಿದರು. ಬೆಳಿಗ್ಗೆ ಕೂಡಲಸಂಗಮಕ್ಕೆ ಭೇಟಿ ನೀಡಿದೆ ಎಂ ಬಿ ಪಾಟೀಲರು ನೇರವಾಗಿ ಸಂಗಮೇಶ್ವರ ದೇವಸ್ಥಾನಕ್ಕೆ ತೆರಳಿದ್ದರು ಗರ್ಭಗುಡಿಯಲ್ಲಿ ಸಂಗಮೇಶ್ವರ ಮೂರ್ತಿಗೆ ಪ್ರದಕ್ಷಿಣೆ ಹಾಕಿ ಮಾಲಾರ್ಪಣೆ ಸಲ್ಲಿಸಿ ನಮಸ್ಕರಿಸಿ ದೇವರ ದರ್ಶನ ಪಡೆದರು.

 ನಂತರ ಐಕ್ಯ ಮಂಟಪಕ್ಕೆ ತೆರಳಿದ ಎಂ.ಬಿ.ಪಾಟೀಲರು ಐಕ್ಯ ಮಂಟಪದ ಲಿಂಗಕ್ಕೆ ಹೂಮಾಲೆ ಹಾಕಿ ನಮಸ್ಕರಿಸಿದರು. ಇದೇ ವೇಳೆ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳ ಆಶೀರ್ವಾದ ಪಡೆದು ಅವರೊಂದಿಗೆ ಐಕ್ಯ ಮಂಟಪದಲ್ಲಿ ಕುಳಿತು ಧ್ಯಾನ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದರು.‌

ರಾಜ್ಯಕ್ಕೆ ಬಂದ  ಶಾ 40% ಅಕ್ರಮ ನೋಡಲಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಇಲ್ಲಿ ನಿಮ್ಮದೇ ಸರ್ಕಾರ ಇದೆ, ಇಲ್ಲಿಯ ಗೃಹ ಇಲಾಖೆಯಲ್ಲಿ ಇಂತವೆಲ್ಲ ಆಗ್ತಿದ್ದಾವೆ ಎಂದ ಅವರು, ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ನಲ್ಲಿ ೪೦% ಅಕ್ರಮಗಳು ನಡೆದಿದೆ. ಇನ್ನೂ ಅನೇಕ ಸಚಿವರ ಬಗ್ಗೆ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ನವರು ಹೇಳಿದ್ದಾರೆ. ಆದರೆ ಅಮಿತ್ ಶಾ ಹಾಗೂ ಮೋದಿ ಅವರು, ನಾ ಖಾವುಂಗಾ... ನಾ ಖಾನೆದೂಂಗಾ...ಅಂತ  ಹೇಳ್ತಾರೆ. ಪ್ರಾಮಾಣಿಕತೆ ಬಗ್ಗೆ ಬಹಳ ಮಾತು ಹೇಳ್ತಿದ್ದೀರಿ, ಇವುಗಳ ಮಧ್ಯೆ  ಕರ್ನಾಟಕದಲ್ಲಿ 40%, ಭ್ರಷ್ಟಾಚಾರ ನಡೆದಿದೆ. ಸ್ವಲ್ಪ ತಿನ್ನುತ್ತಿಲ್ಲ, ಜೀರ್ಣ ಆಗದಷ್ಟು ತಿನ್ನುತ್ತಿದ್ದಾರೆ ಎಂದ ಎಂ ಬಿ ಪಾಟೀಲರು,  ಇದಕ್ಕೆ ಕಡಿವಾಣ ಹಾಕಬೇಕು, ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ, ಅದರ ಬಗ್ಗೆ ಪ್ರಧಾನಿಗಳು ಸುಮ್ಮನಿದ್ದಾರೆ. ಇದರ ಅರ್ಥ ಮೌನಂ ಸಮ್ಮತಿ ಲಕ್ಷಣಂ ಎಂದು ವ್ಯಂಗ್ಯವಾಡಿದರು. 

PSI Scam: ಹದಿನೆಂಟು ದಿನಗಳಲ್ಲಿ ಸುತ್ತಾಡಿದ್ದು ಎಲ್ಲೆಲ್ಲಿ ? ಆ 18 ದಿವ್ಯ ದಿನಗಳು!

ಬೇರೆ ಕಡೆಗೆ ಅಕ್ರಮ ಆದ್ರೆ, ಸಿಬಿಐ, ಇಡಿ, ಐಟಿ ತನಿಖೆ ಮಾಡಿಸ್ತಾರೆ. ಆದರೆ ಇವರ ಮೇಲೆ ಏಕೆ ಸಿಬಿಐ, ಇಡಿ, ಐಟಿ ದಾಲಿ ಯಾಕಾಗಿಲ್ಲ ಎಂದು ಅಮಿತ್ ಶಾ ಗೆ ಪ್ರಶ್ನೆ ಮಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಇದೆಯಲ್ಲ,  ಈ ಪಿಎಸ್.ಐ ಅಕ್ರಮವನ್ನೂ ಸಿಬಿಐಗೆ ವಹಿಸಿ ಎಂದರು.  ಇನ್ನು ತನಿಖೆ ಆಗಲಿ, ಯಾರೇ ತಪ್ಪಿತಸ್ಥರಿರಲಿ, ಯಾವದೇ ಪಕ್ಷದವರಾಗಿರಲಿ, ಅಧಿಕಾರಿಗಳಿರಬಹುದು, ಯಾರೇ ಇದ್ದರೂ ಸಹ ಅವರ  ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದರು. 

ನಾವು ನಮ್ಮ ಧರ್ಮ ಪ್ರೀತಿಸಬೇಕು, ಬೇರೆ ಧಮ೯ವನ್ನು ಗೌರವಿಸಬೇಕು
ರಾಜ್ಯಲ್ಲಿ ಕೋಮುಗಲಭೆ ವಿಚಾರವಾಗಿ  ಕೆಲ ನಿವೃತ್ತ ಐಎಎಸ್ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲರು, ನಾವು ನಮ್ಮ ಧರ್ಮವನ್ನ ಪ್ರೀತಿಸಬೇಕು, ಇತರ ಧರ್ಮವನ್ನ ಗೌರವಿಸಬೇಕು, ಭಾರತ ಪ್ರಜಾಪ್ರಭುತ್ವ ದೇಶ, ಬಸವಾದಿ ಶರಣರ ಚಿಂತನೆ ಮೇಲೆ, ಅಂಬೇಡ್ಕರ್ ಅವರು ಬರೆದ ಸಂವಿಧಾನ ಹುಟ್ಟಿರುವಂತದ್ದು, ಹೀಗಾಗಿ ಧರ್ಮದ ಹೆಸರಲ್ಲಿ ಒಂದು ಗುಂಪಿನ ಮೇಲೆ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ ಎಂದರು.

ಲಿಂಗಾಯತ ಸ್ವತಂತ್ರ ಧರ್ಮದ ನಮ್ಮ ಅಸ್ಮಿತೆ
ಇನ್ನು ಇದೇ ವೇಳೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ವಿಚಾರವಾಗಿ ಮಾತನಾಡಿದ ಎಂ.ಬಿ.ಪಾಟೀಲರು,  ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ, ಇದು ನಮ್ಮ ಅಸ್ಮಿತೆ. ನಾವು ಇದನ್ನ ರಾಜಕೀಯವಾಗಿ ಚರ್ಚೆ ಮಾಡಲು ಹೋಗಲ್ಲ, ಎರಡೂ ಕಡೆಯ ಸ್ವಾಮೀಜಿಗಳು, ಎರಡು ಕಡೆ ಇರುವ ಎಲ್ಲ ನಾಯಕರು ಕುಳಿತು ಚರ್ಚಿಸ್ತಾರೆ. ಚುನಾವಣೆ ಇರೋವರೆಗೂ ಇದು ಬೇಡ. ಕಳೆದಬಾರಿ ಚುನಾವಣೆ ನಡೆದಾಗ ಅನೇಕ‌ ಗೊಂದಲಗಳನ್ನ ಸೃಷ್ಟಿ ಮಾಡಿದ್ರು. ಸಧ್ಯ ನಾವು ಯಾವ ಗೊಂದಲಕ್ಕೂ ಬೀಳೋಕೆ ಹೋಗಲ್ಲ, ಈ ಬಗ್ಗೆ ನಾನು ಹೇಳಿಕೆ ಕೊಡಲ್ಲ.
ಚುನಾವಣೆಯ ನಂತರ  ಎಲ್ಲರೂ ಕೂತ್ಕೊಂಡು ಚರ್ಚೆ ಸಮಾಜಕ್ಕೆ ಏನು ಒಳ್ಳೆಯದಾಗುತ್ತೆ ಆ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಚುನಾವಣೆ ನಂತ್ರ ಐದು ವರ್ಷ ಇರುತ್ತೆ, ಆಗ ಚರ್ಚೆ ಮಾಡ್ತಾ ಹೋಗಲಿ ಎಂದು ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಗುತ್ತಾ ಎಂಬ ವಿಚಾರವಾಗಿ ಮಾತನಾಡಿ,  ಈ ಬಗ್ಗೆ ನನೇಗೆನು ಗೊತ್ತಿಲ್ಲ, ಮತ್ತು ಮೂರು ಸಿಎಂಗಳ ಪರಂಪರೆ ಮುಂದುವರೆಯುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ  ನನಗೆ ಗೊತ್ತಿಲ್ಲ. ಎಲ್ಲವೂ ತತ್ತರಿಸಿ ಹೋಗಿದೆ. ಮೂರು ಆದ್ರೂ ಅಷ್ಟೇ ಇದೆ, ಹತ್ತು ಮಾಡಿದ್ರು ಅಷ್ಟೆ ಇದೆ ಎಂದು ಎಂ.ಬಿ ಪಾಟೀಲ್ ವ್ಯಂಗ್ಯವಾಡಿದರು.

ಪಿಎಸ್ಐ ನೇಮಕಾತಿ ಅಕ್ರಮ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಲಿ
ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಹಗರಣದಲ್ಲಿ ಅಧಿಕಾರಿಗಳ ಹೆಸರು ಇರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು, ನಿಷ್ಪಕ್ಷಪಾತ ತನಿಖೆ ಆಗಬೇಕಂದ್ರೆ ಹೈಕೋರ್ಟ್ ಸಿಟಿಂಗ್ ಜಡ್ಜ್ ಉಸ್ತುವಾರಿಯಲ್ಲಿ ತನಿಖೆ ಆಗಬೇಕು.
ಯಾವುದೇ ಹಸ್ತಕ್ಷೇಪ ಇಲ್ಲದೇ ತನಿಖೆ ಅಗಬೇಕಂದ್ರೆ ಹೈಕೋರ್ಟ್ ಸಿಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದರು. ಇನ್ನು ಸಧ್ಯದ ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ಇನ್ನಿತರ ಹಗರಣಗಳನ್ನು ಮುಚ್ಚಿ ಹಾಕೋಕೆ ಆಗಲ್ಲ, ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ತನಿಖೆಗೆ ಹಾಕಿದ್ರೆ ಅದಕ್ಕೊಂದು ತೂಕ ಇರುತ್ತೆ,ಅದಕ್ಕೊಂದು ಹೆದರಿಕೆ, ಅರ್ಥ ಇರುತ್ತೆ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ