* ಕರ್ನಾಟಕದ ಇತಿಹಾಸದಲ್ಲೇ ಇಷ್ಟೊಂದು ಭ್ರಷ್ಟಾಚಾರ ನೋಡಿಲ್ಲ
* ಪ್ರಧಾನಿ ಮೋದಿ ನಡೆ ಪ್ರಶ್ನಿಸಿದ ಪಾಟೀಲ್
* ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ವಿಷಯವಾಗಿ ಮೋದಿ ಜನರಿಗೆ ಉತ್ತರಿಸಬೇಕು
ಗದಗ(ಮೇ.03): ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವ ಬಿಜೆಪಿ ಚಾಣಕ್ಯ ಅಮಿತ್ ಶಾ(Amit Shah) ವಿರುದ್ಧ ಕಾಂಗ್ರೆಸ್ ಶಾಸಕ ಹೆಚ್.ಕೆ. ಪಾಟೀಲ್(HKL Patil) ಹರಿಹಾಯ್ದಿದ್ದಾರೆ. ಕರ್ನಾಟಕದಲ್ಲಿ 40% ಚಾಲ್ತಿಯಲ್ಲಿದೆ ಅನ್ನೋದು ನಿಮಗೆ ಗೊತ್ತಿಲ್ಲವೇ, ಅಮಿತ್ ಶಾ ಅವರೆ ಯಾವ ಕಾರಣಕ್ಕೆ ಕರ್ನಾಟಕಕ್ಕೆ ಬರುತ್ತೀರಿ?, 40 % ಇನ್ಕ್ರೀಜ್ ಮಾಡಲು ಬಂದ್ರಾ ಅಂತಾ ಚಾಟಿ ಬೀಸಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವ ಕಾರಣಕ್ಕೆ ಶಾ ಬಂದಿದ್ದಾರೆ. ರಾಜ್ಯದಲ್ಲಿ ಆಡಳಿತ ಎಲ್ಲಿದೆ. ಕರ್ನಾಟಕದ ಇತಿಹಾಸದಲ್ಲೇ(Karnataka) ಇಷ್ಟು ಮಟ್ಟದ ಭ್ರಷ್ಟಾಚಾರ(Corruption) ನೋಡಿಲ್ಲ ಅಂತಾ ಕಿಡಿ ಕಾರಿದ್ದಾರೆ. ಭ್ರಷ್ಟಾಚಾರದ ವಿಷಯವಾಗಿ ಪ್ರಧಾನಿ ಮೋದಿಯವರಿಗೂ ಪತ್ರ ಹೋಗಿದೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ(Santosh Patil) ಸಾವು ವಿಷಯ ಪ್ರಸ್ತಾಪಿಸಿ, ಯಾವ ಕಾರಣಕ್ಕೆ ನೀವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತಾ ಪ್ರಧಾನಿ ಮೋದಿಯವರ(Narendra Modi) ನಡೆಯನ್ನ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ವಿಷಯವಾಗಿ ನೀವು ಜನರ ಬಳಿ ಉತ್ತರಿಸಬೇಕು ಅಂತಾ ಹೆಚ್.ಕೆ. ಪಾಟೀಲ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
undefined
Gadaga ಅಪ್ರಾಪ್ತೆಯ ಕಿಡ್ನಾಪ್ ಮಾಡಿ ಅತ್ಯಾಚಾರ, ಬಿಜೆಪಿ ಮುಖಂಡನ ವಿರುದ್ಧ ಆರೋಪ!
ನೀವು ಬಂದ್ರಿ.. ಕೂತ್ರಿ.. ಮೂರು ಗಂಟೆ ಚರ್ಚೆ ಮಾಡಿದ್ರಿ..
ರಾಜ್ಯ ಸಚಿವ ಸಂಪುಟ ಪುನರಚನೆ(Cabinet Expansion), ವಿಸ್ತಾರವಾಗಿ ನಡೀತಿರುವ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಮಂತ್ರಿಯನ್ನ ಬಿಟ್ಟು. ಅವನ್ನ ಹಾಕೋದು. ನೀವು ಯಾವ ಮಂತ್ರಿಯನ್ನ ಹಾಕ್ತೀರಿ ಅನ್ನೋ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ಆಡಳಿತ ಹೇಗೆ ಕೊಡ್ತೀರಿ, ಭ್ರಷ್ಟಾಚಾರ ಹೇಗೆ ನಿಲ್ಲಿಸುತ್ತೀರಿ ಎಂಬುದು ನಿಮ್ಮ ಆದ್ಯತೆಯಾಗಿರಬೇಕು. ರಾಜಕಾರಣ ಮಾಡೋದಕ್ಕೆ ಮೇಲಿಂದ ಮೇಲೆ ಬಂದ್ರೆ ಏನೂ ಒಳ್ಳದಾಗೋದಿಲ್ಲ ಎಂದು ಅಮಿತ್ ಶಾ ರಾಜ್ಯ ಪ್ರವಾಸ ಹಾಗೂ ಸಂಪುಟ ವಿಸ್ತರಣೆ ವಿಚಾರವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಆರೋಪ ಬಂದೊಡನೆ ಸಚಿವ ಅಶ್ವತ್ಥ್ ನಾರಾಯಣ ರಾಜೀನಾಮೆ ಕೊಡಬೇಕಿತ್ತು
ಸಚಿವ ಅಶ್ವತ್ಥ್ ನಾರಾಯಣ ಅವರ ಜೊತೆ ನಿಕಟ ಸಂಬಂಧ ಹೊಂದಿವರ ಮೇಲೆ ಆರೋಪ ಬಂದಿದೆ. ಹೀಗಾಗಿ ಸಚಿವರು ಕೂಡಲೇ ರಾಜೀನಾಮೆ ನೀಡ್ಬೇಕು ಅಂತಾ ಒತ್ತಾಯಿಸಿದ ಪಾಟೀಲರು, ಪ್ರಧಾನಿ ಮೋದಿಯವರು ಏನು ಮಾಡುತ್ತಿದ್ದಾರೆ. ಅಮಿಶ್ ಶಾ ಅವರೆ ನಿಮ್ಮ ರಾಷ್ಟ್ರದ ಕಲ್ಪನೆ ಇದೇನಾ ಅಂತಾ ಪ್ರಶ್ನಿಸಿದ್ದಾರೆ. ರಾಜ್ಯದ ಬಗ್ಗೆ ಚರ್ಚೆ ಮಾಡುತ್ತೀರಿ, ಅಲ್ಲಿಂದ(ದೆಹಲಿಯಿಂದ) ಬರೋದು ಇಲ್ಲಿ ಕೂರೋದು. ಯಾರನ್ನ ಮಂತ್ರಿ ಮಾಡ್ಬೇಕು. ಯಾರನ್ನ ಮಾಡ್ಬಾರ್ದು ಅನ್ನೋದಷ್ಟೆ ಚರ್ಚೆಯಾಗ್ತಿದೆ ಎಂದ್ರು. ಮಂತ್ರಿಗಳಾದವರು ಏನು ಮಾಡುತ್ತಿದ್ದೀರಿ. ನೀವು ಮಾಡಿದ ಪ್ರಮಾದಕ್ಕೆ ತಕ್ಷಣ ರಾಜೀನಾಮೆ ಕೊಡಬೇಕು. ಸಚಿವರ ರಾಜೀನಾಮೆ ಕೊಡೋದಕ್ಕೆ, ಸರ್ಕಾರ ಡಿಸ್ಮಿಸ್ ಮಾಡೋದಕ್ಕೆ ಶಾ ಬಂದ್ರೆ ಅರ್ಥ ಇರುತ್ತೆ ಅಂತಾ ಶಾ ಪ್ರವಾಸವನ್ನ ಟೀಕಿಸಿದ್ದಾರೆ.
ನರಗುಂದದಲ್ಲಿ ಹೈಡ್ರಾಮಾ : ಸಚಿವರ ಮನೆ ಮುಂದೆ ಧರಣಿ ನಡೆಸಲು ಬಂದ ದಿಂಗಾಲೇಶ್ವರ ಶ್ರೀಗೆ ತಡೆ
ಪ್ರಮಾಣಿಕವಾಗಿ ಪರೀಕ್ಷೆ ಬರೆದವರ ಬಗ್ಗೆ ಸಹಾನುಭೂತಿ ಇದೆ
545 ಪಿಎಎಸ್‌ಐ ಹುದ್ದೆ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆಗೆ ನಿರ್ಧರಿಸಿರುವ ಸರ್ಕಾರ ನಿರ್ಧಾರ ಬಗ್ಗೆ ಮಾತನಾಡಿದ ಹೆಚ್.ಕೆ. ಪಾಟೀಲ್, ಯಾರು ಪ್ರಮಾಣಿಕವಾಗಿ ಪರೀಕ್ಷೆ ಬರೆದಿದ್ದಾರೋ ಅವರ ಬಗ್ಗೆ ಸಹಾನುಭೂತಿ ಇದೆ. 545 ಸೀಟ್ ಗಳಲ್ಲಿ 250 ಕ್ಕೂ ಹೆಚ್ಚು ಪ್ರಕರಣದಲ್ಲಿ ಅಕ್ರಮ ಆದ ಬಗ್ಗೆ ಪುರಾವೆ ಸಿಕ್ಕಿವೆ. ನನಗೆ ಬಂದ ವರದಿಯಲ್ಲಿ ಇನ್ನೂ ಹೆಚ್ಚಿಗೆ ಸಿಗುತ್ತವೆ. ಕೆಲವರಿಗೆ ತೊಂದ್ರೆ ಆಗಬಹುದು. ಅವರ ಕಡೆ ಲಕ್ಷ ಕೊಟ್ಟಲ್ಲಿ ಅಕ್ರಮ ಮಾಡಿದವರು ಕೈ ಮೀರಿ ಹೋಗುತ್ತಾರೆ. ಹಾಗಾಗ ಬಾರದು, ನ್ಯಾಯ ಎಲ್ಲ ಯುವಕರಿಗೆ ಸಿಗುವಂತಾಗಬೇಕು ಅಂತ ಆಗ್ರಹಿಸಿದ್ದಾರೆ.