* ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿರುವ
* ರಂಜಾನ್ ಹಬ್ಬಕ್ಕೆ ಮನೆ ಮನೆಗೆ ತೆರಳಿ ಹಣ ಹಂಚಿಕೆ
* ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕೆಜಿಎಫ್ ಬಾಬು ಕಾಂಗ್ರೆಸ್ ಪಕ್ಷದ ಪ್ರಮುಖ ಆಕಾಂಕ್ಷಿ
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಕೋಲಾರ.
ಕೋಲಾರ, (ಏ.14): ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿರುವ ಕೆಜಿಎಫ್ ಬಾಬು ಇದೀಗ ವಿಧಾನಸಭೆ ಚುನಾವಣೆ ಅಖಾಡಕ್ಕಿಳಿಯಲು ತಯಾರಿ ನಡೆಸಿದ್ದಾರೆ.
ಹೌದು..ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪ ಇರುವಾಗಲೇ ಟಿಕೇಟ್ ಆಕಾಂಕ್ಷಿಗಳು ಮತದಾರರ ಸೆಳೆಯಲು ಕಸರತ್ತು ಮಾಡ್ತಿದ್ದಾರೆ. ಅದರಲ್ಲೂ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೆಚ್ಚಾಗುತ್ತಿದ್ದು,ಇದೀಗ ಅಚ್ಚರಿಯ ಆಕಾಂಕ್ಷಿ ಕೆಜಿಎಫ್ ಬಾಬು ಕ್ಷೇತ್ರದಲ್ಲಿ ಬಿರುಸಿಲ ಓಡಾಟ ನಡೆಸುತ್ತಿದ್ದಾರೆ.
ನೀನೆಷ್ಟು ,ನಾನೆಷ್ಟು, ಸಂಸದ ಮುನಿಸ್ವಾಮಿ, ನಾರಾಯಣಸ್ವಾಮಿ ಫೈಟ್
ಯೆಸ್...ಜಿಎಫ್ ಬಾಬು ವೃತ್ತಿಯಲ್ಲಿ ಪ್ರತಿಷ್ಠಿತ ಬ್ಯುಸಿನೆಸ್ ಆಗಿದ್ದು,ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡ ಬಳಿಕೆ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ,ಕೋಲಾರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಾಗಿ ಇರೋದ್ರಿಂದ ತಮ್ಮ ಸಮುದಾಯದವರ ಓಲೈಕೆಗೆ ಮುಂದಾಗಿದ್ದಾರೆ.ಈಗಾಗಿ ರಂಜಾನ್ ಹಬ್ಬಕ್ಕೆ 13 ಸಾವಿರ ಮನೆಗಳಿಗೆ 3 ಕೋಟಿ ವರೆಗೂ ಖರ್ಚು ಮಾಡಲು ನಿರ್ಧಾರ ಮಾಡಿದ್ದು,ಈಗಾಗಲೇ ಚೆಕ್ ಹಾಗೂ ಡಿಡಿ ಮೂಲಕ ಮನೆ ಮನೆಗೆ ತೆರಳಿ ಹಣ ಹಂಚುತ್ತಿದ್ದಾರೆ.
ಇನ್ನು ಸಾವಿರಾರು ಕೋಟಿ ಒಡೆಯ ಎಂದು ಕರೆಸಿಕೊಂಡಿರುವ ಕೆಜಿಎಫ್ ಬಾಬು ಈ ಹಿಂದೆಯೂ ಕೋಲಾರದಲ್ಲಿ ಕೆಲ ದಿನಗಳ ಕಾಲ ಕಾಣಿಸಿಕೊಂಡು ಓಡಾಟ ನಡೆಸಿದ್ರು,ಬಳಿಕ ವಿಧಾನ ಪರಿಷತ್ ನಲ್ಲಿ ಬೆಂಗಳೂರು ನಗರದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ರು,ಆದ್ರೆ ಇದೀಗ ಮತ್ತೆ ಕೋಲಾರದಲ್ಲಿ ಕಾಣಿಸಿಕೊಂಡಿದ್ದು ಇನ್ನು 15 ದಿನಗಳ ಕಾಲ ಮುಸ್ಲಿಂ ಏರಿಯಾದಲ್ಲಿ ಓಡಾಟ ನಡೆಸಿ ರಂಜಾನ್ ಹಬ್ಬಕ್ಕೆ ಹಣ ಹಂಚಿಕೆ ಮಾಡ್ತಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಕೆಜಿಎಫ್ ಬಾಬು,ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರಲಿಲ್ಲ ಅಂತ ನಾನು ಬಲವಂತವಾಗಿ ಚುನಾವಣೆಯಲ್ಲಿ ಸ್ಪರ್ದಿಸಿ ಸೋತ್ತಿದ್ದೇನೆ,ರಾಜಕೀಯದ ಬಗ್ಗೆ ನನಗೆ ಇದರಿಂದ ತುಂಬಾ ಅನುಭವವಾಗಿದೆ.ದೇವರು ನನಗೂ ಬುದ್ದಿ ಕೊಟ್ಟಿದ್ದೇನೆ, ಕೋಲಾರದಲ್ಲಿ ನಾನು ಹುಟ್ಟಿ ಬೆಳೆದಿರೋದ್ರಿಂದ ನನಗೆ ಎಲ್ಲವೂ ತಿಳಿದಿದೆ.ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು ಎಲ್ಲಿ ಸ್ಪರ್ಧೆ ಮಾಡು ಅಂತಾರೋ ಅಲ್ಲೇ ಸ್ಪರ್ದಿಸುತ್ತೇನೆ ಅಂತ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಂತ ಪರೋಕ್ಷವಾಗಿ ಕೆಜಿಎಫ್ ಬಾಬು ಒಪ್ಪಿಕೊಂಡಿದ್ದಾರೆ.
ಇನ್ನು ಈಗಾಗಲೇ ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ರಮೇಶ್ ಕುಮಾರ್ ಹಾಗೂ ಕೆ.ಎಚ್ ಮುನಿಯಪ್ಪ ಎರಡು ಬಣಗಳಿಗೆ,5 ಕ್ಕೂ ಹೆಚ್ಚು ಜನರು ನಾನೇ ಅಭ್ಯರ್ಥಿ ಅಂತ ಓಡಾಟ ನಡೆಸುತ್ತಿದ್ದಾರೆ.ಆದ್ರೆ ಐದು ಮಂದಿ ನಮಗ್ಯಾಕೆ ಬೇಕು ದೊಡ್ಡವರ ಸಹವಾಸ ಅಂತ ಯಾರ ಬಣದಲ್ಲೂ ಗುರುತಿಸಿಕೊಳ್ಳದೆ ತಮ್ಮ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಟಿಕೆಟ್ ಕೇಳ್ತಿದ್ದಾರೆ.ಇನ್ನು ಟಿಕೆಟ್ ಕೇಳಿದವರಿಗೆಲ್ಲಾ ಆಯ್ತು ನೋಡೋಣ ಅಂತ ನಾಯಕರು ಹೇಳಿ ಕಳುಹಿಸುತ್ತಿದ್ದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಹಳಷ್ಟು ಗೊಂದಲ ಉಂಟು ಮಾಡಿದೆ. ಇನ್ನು ಆಕಾಂಕ್ಷಿಗಳ ಪಟ್ಟಿಯಲ್ಲಿ ಬಹುತೇಕ ಜಿಲ್ಲೆಯ ಹೊರಗಿನಿಂದ ಬಂದವರೇ ಆಗಿದ್ದು ಜಿಲ್ಲೆಯವರಿಗೆ ಈ ಬಾರಿ ಟಿಕೆಟ್ ನೀಡಿ ಎಂದು ಕೆ.ಎಚ್ ಮುನಿಯಪ್ಪ ಬಣದವರು ಆಗ್ರಹ ಮಾಡ್ತಿದ್ದಾರೆ...