2023ಕ್ಕೆ ಬಿಜೆಪಿ ತಯಾರಿ, ರಾಜ್ಯ, ರಾಷ್ಟ್ರೀಯ ನಾಯಕರ ಸಮಾಗಮ ಚುನಾವಣೆ ರಣಕಹಳೆ

Published : Apr 14, 2022, 07:54 PM IST
2023ಕ್ಕೆ ಬಿಜೆಪಿ ತಯಾರಿ, ರಾಜ್ಯ, ರಾಷ್ಟ್ರೀಯ ನಾಯಕರ ಸಮಾಗಮ ಚುನಾವಣೆ ರಣಕಹಳೆ

ಸಾರಾಂಶ

* 2023ರ ಚುನಾವಣೆಗೆ ಈಗಿನಿಂದಲೇ ತಯಾರಿ * ಬಿಜೆಪಿ ರಾಜ್ಯಕಾರ್ಯಕಾರಣಿಗೆ ಭರ್ಜರಿ ಸಿದ್ಧತೆ * ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಸಮಾಗಮ ಚುನಾವಣೆ ರಣಕಹಳೆ

ವರದಿ ; ನರಸಿಂಹ ಮೂರ್ತಿ ಕುಲಕರ್ಣಿ 

ವಿಜಯನಗರ, (ಏ.14):
2023 ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಲೇ ತಯಾರಿ ಆರಂಭಿಸಿದೆ. ಇದರ ಮೊದಲ ಭಾಗ ಎನ್ನುವಂತೆ ನೂತನ ಜಿಲ್ಲೆ ವಿಜಯನಗರದ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಣಿಗೆ ಭರದ ಸಿದ್ಧತೆ ನಡೆದಿದೆ. ಇದೇ ತಿಂಗಳ 16 ಮತ್ತು 17 ರಂದು ನಡೆಯಲಿರೋ ಬಿಜೆಪಿ ರಾಜ್ಯ  ಕಾರ್ಯಕಾರಿಣಿಗೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದು,  ಹೊಸಪೇಟೆಯಲ್ಲಿ‌ ಎರಡು ದಿನ ಬಿಜೆಪಿ ಹಬ್ಬದ ವಾತವರಣವೇ ಸೃಷ್ಟಿ ಮಾಡಿದೆ..

ಕೇಸರಿಮಯವಾಗಿದೆ ಹೊಸಪೇಟೆ  ಹೊಸಪೇಟೆಯಲ್ಲಿ ರಾರಾಜಿಸುತ್ತಿರೋ ಬಿಜೆಪಿ ಧ್ವಜ, ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ನಡೆದಿದೆ ಭರದ ಸಿದ್ಧತೆ ಜೋರಾಗಿದೆ. ಹೌದು, 2023 ಚುನಾವಣೆಗೆ ಬಿಜೆಪಿಯ ಈ ಕಾರ್ಯಕಾರಣಿ ದಿಕ್ಸೂಚಿ ಎಂದೇ ಬಿಂಬಿಸಲಾಗ್ತಿದೆ. ಏಪ್ರಿಲ್ 16 ಹಾಗೂ 17 ರಂದು ನಡೆಯಲಿರೋ ಕಾರ್ಯಕಾರಿಣಿಗೆ ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಹವಾನಿಯಂತ್ರಿತ ಜರ್ಮನ್ ಟೆಂಟ್ ನಿರ್ಮಿಸಲಾಗುತ್ತಿದ್ದು,  ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40  ಅಡಿ ಅಗಲದ ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಕೊನೆಗೂ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ, ಬಿಜೆಪಿ ಸರ್ಕಾರದ 2ನೇ ವಿಕೆಟ್ ಪತನ

ಇನ್ನೂ ವೇದಿಕೆಯ ಹಿಂಭಾಗದಲ್ಲಿ 30 ಅಡಿ ಎತ್ತರದ ಬ್ಯಾಕ್‌ಡ್ರಾಪ್ ಇರಲಿದೆ. ಇದರಲ್ಲಿ ಹಂಪಿಯ ವಾಸ್ತು ಶಿಲ್ಪದ ಸ್ಮಾರಕಗಳು ಗೋಚರಿಸಲಿವೆ. ಈ ಶಿಲ್ಪಗಳ ಮಧ್ಯೆ ಕಮಲದ ಚಿಹ್ನೆ ಕಂಗೊಳಿಸಲಿದೆ. ಅದ್ದೂರಿ ಸೆಟ್ ನಿರ್ಮಾಣ ಕಾರ್ಯ ಒಂದು ಕಡೆಯಾದ್ರೆ ಹೊಸಪೇಟೆ ನಗರದಲ್ಲಿ ಅದಕ್ಕಾಗಿ ಸಕಲ ತಯಾರಿ ನಡೆದಿದ್ದು, ಎಲ್ಲೆಲ್ಲೋ ಕೇಸರಿ ಧ್ವಜ, ಬಿಜೆಪಿ ಬಾವುಟ ರಾರಾಜಿಸುತ್ತಿವೆ. ಇದನ್ನೆಲ್ಲಾ ನೋಡ್ತಿದ್ರೆ ರಾಜ್ಯ ಬಿಜೆಪಿ ನಾಯಕರು ಮುಂದಿನ ವರ್ಷ ನಡೆಯಲಿರೋ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ರಣಕಹಳೆ ಮೊಳಗಿಸಿದ್ದಾರೆ ಎನ್ನುವದು ಸ್ಪಷ್ಟವಾಗಿದೆ..

ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರೋ ನಾಯಕರು
ಕೊಪ್ಪಳ ಉಸ್ತುವಾರಿ ಸಚಿವರಾದ್ರೂ ಸಚಿವ ಆನಂದ ಸಿಂಗ್ ಅವರಿಗೆ ಕಾರ್ಯಕಾರಣಿ ಸಂಪೂರ್ಣ ಉಸ್ತುವಾರಿ ನೀಡಲಾಗಿದೆ.. 
ಜಿಲ್ಲಾ ಉಸ್ತುವಾರಿ ಮಂತ್ರಿ ಶಶಿಕಲಾ ಜೊಲ್ಲೆ, ಸಚಿವ ಆನಂದ್ ಸಿಂಗ್, ಬಿಜೆಪಿ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ನಿತ್ಯ ಸಿದ್ದತೆಗಳ ಪರಿಶೀಲನೆ ನಡೆಸುತ್ತಿದ್ದಾರೆ.  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ರಾಜ್ಯಧ್ಯಕ್ಷ ಕಟೀಲ್, ಮುಖ್ಯಮಂತ್ರಿ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ 650 ಪ್ರಮುಖ ನಾಯಕರು ಕಾರ್ಯಕಾರಣಿಯಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಯಕಾರಣಿಯಲ್ಲಿ ಹಂಪಿ  ಪ್ರದರ್ಶನ
ಹಂಪಿಯ ಶ್ರೀವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠ್ಠಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರ ನರಸಿಂಹ ಸೇರಿದಂತೆ ವಿವಿಧ ಸ್ಮಾರಕಗಳ ಮಿಶ್ರಣದೊಂದಿಗೆ ವೇದಿಕೆ ಕಂಗೊಳಿಸಲಿದೆ. ಈ ಭವ್ಯ ಸಭಾಂಗಣದಲ್ಲಿ ಎರಡು ದ್ವಾರಗಳನ್ನು ನಿರ್ಮಿಸಲಾಗುತ್ತದೆ. ಪ್ರವೇಶದ್ವಾರದಲ್ಲೂ ಹಂಪಿಯ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಕಲಾ ಸ್ಮಾರಕಗಳು ಅನಾವರಣಗೊಳಿಸಲಾಗುತ್ತದೆ.   ಇನ್ನೂ ವಿಶಾಲ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಹವಾನಿಯಂತ್ರಿತ ಜರ್ಮನ್ ಮಾದರಿಯ ಟೆಂಟ್‌ನಲ್ಲಿ 750  ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ಗಣಾತಿಗಣ್ಯರ ಕೊಠಡಿ, ಗ್ರೀನ್ ರೂಂ, ಭೋಜನಾಲಯ ಕೂಡ ನಿರ್ಮಾಣ ಮಾಡಲಾಗಿದೆ.  

ಸಚಿವ ಸಂಪುಟ ವಿಸ್ತರಣೆ ಚರ್ಚೆ
ಇತ್ತೀಚೆಗೆ ಸಂಪುಟ ವಿಸ್ತರಣೆ ಕುರಿತು ಎದ್ದಿರೋ ಮಾತುಗಳಿಗೂ ಇಲ್ಲಿ ಉತ್ತರ ದೊರಕಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಕೆ.ಎಸ್ .ಈಶ್ವರಪ್ಪ ಅವರ ಮೇಲೆ ಕೇಳಿಬಂದಿರೋ ಕಮಿಷನ್ ಆರೋಪದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿರುವ ಹೈಕಮಾಂಡ್ ಕಾರ್ಯಕಾರಿಣಿಯಲ್ಲಿ ಯಾವುದಾದರೂ ನಿರ್ಧಾರ ಕೈಗೊಳ್ಳಲಿದೆಯಾ ಎನ್ನುವ ಪ್ರಶ್ನೆಯೂ ಎದ್ದಿದೆ. ಕಾರ್ಯಕ್ರಮದ ಕುರಿತು ಮಾತನಾಡಿರೋ ಸಚಿವ ಆನಂದ್ ಸಿಂಗ್, ಸಭೆಗೆ ಆಗಮಿಸೋ ಎಲ್ಲಾ ಗಣ್ಯರಿಗೂ ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!