ಡಾ. ಮಲ್ಲಿಕಾರ್ಜುನ ಖರ್ಗೆ 371 (ಜೆ) ವಿಧಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 38 ಸಾವಿರ ಉದ್ಯೋಗ ಕಲ್ಪಿಸಿದ ರೂವಾರಿಗಳು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಕೈ ಬಲಪಡಿಸಲು ಕಾಂಗ್ರೆಸ್ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಈಶ್ವರ್ ಖಂಡ್ರೆ.
ಗುರುಮಠಕಲ್(ಮಾ.26): ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಅಚ್ಛೆ (ಒಳ್ಳೆಯ) ದಿನಗಳು ಬರುತ್ತವೆಂದರು, ಆದರೆ ಎಲ್ಲ ಕಡೆ ಕೆಟ್ಟದಿನಗಳು ಬಂದಿವೆ. ಇದನ್ನು ತಡೆಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ನೂತನ ಕಾಂಗ್ರೆಸ್ ಕಚೇರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಪ್ರತಿ ವರ್ಷ 2 ಲಕ್ಷ ಉದ್ಯೋಗ ಕಲ್ಪಿಸುತ್ತದೆ ಎಂದು ಹೇಳಿ ಉದ್ಯೋಗ ಕಿತ್ತುಕೊಂಡು ನಿರುದ್ಯೋಗ ಸಮಸ್ಯೆ ಹೆಚ್ಚು ಮಾಡುತ್ತಿದೆ. ಬಡವರಿಗೆ ಗ್ಯಾಸ್ ಸಿಲಿಂಡರ್ ಹೊರೆ ಹಾಗೂ ವಸ್ತುಗಳ ಬೆಳೆ ಹೆಚ್ಚಿನ ದರದಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲ ಕಡೆ ಕೆಟ್ಟದಿನಗಳು ಬಂದಿದ್ದು, ಜನರು ಕಂಗಾಲಾಗಿದ್ದಾರೆ ಎಂದರು.
undefined
ಸಿಎಂ ಸ್ಥಾನದ ಆಮಿಷ ತೋರಿದ್ರೂ ಬಿಜೆಪಿ ತೊರೆಯಲ್ಲ: ಮಾಲೀಕಯ್ಯ ಗುತ್ತೇದಾರ್
ಡಾ. ಮಲ್ಲಿಕಾರ್ಜುನ ಖರ್ಗೆ 371 (ಜೆ) ವಿಧಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 38 ಸಾವಿರ ಉದ್ಯೋಗ ಕಲ್ಪಿಸಿದ ರೂವಾರಿಗಳು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಕೈ ಬಲಪಡಿಸಲು ಕಾಂಗ್ರೆಸ್ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ, ಬಾಬುರಾವ್ ಚಿಂಚನಸೂರ, ಶರಣಬಸಪ್ಪ ದರ್ಶನಾಪೂರ್, ರಾಜಾ ವೆಂಕಟಪ್ಪ ನಾಯಕ, ರಾಜಶೇಖರ್ ಪಾಟೀಲ್, ಶಾಸಕ ಡಾ. ಅಜಯ್ ಸಿಂಗ್, ಶರಣಪ್ಪ ಮಟ್ಟೂರ್, ಡೇವಿಡ್ ಸಿಮೆಯೋನ್, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ತುನ್ನೂರು, ಬಸರೆಡ್ಡಿ ಅನಪುರ, ಕೃಷ್ಣ ಚಪೇಟ್ಲಾ ಇದ್ದರು.