ಇಬ್ಬರೂ ಜತೆಗಿರುವ ವಿಡಿಯೋ ನೋಡಿದ್ದೀರಾ, ಈಗ ಯಾರೆಂಬುದು ಗೊತ್ತಿಲ್ಲ ಅಂದ್ರೆ?: HDKಗೆ ಟಾಂಗ್

Published : Jan 13, 2021, 03:19 PM ISTUpdated : Jan 13, 2021, 03:46 PM IST
ಇಬ್ಬರೂ ಜತೆಗಿರುವ ವಿಡಿಯೋ ನೋಡಿದ್ದೀರಾ, ಈಗ ಯಾರೆಂಬುದು ಗೊತ್ತಿಲ್ಲ ಅಂದ್ರೆ?: HDKಗೆ ಟಾಂಗ್

ಸಾರಾಂಶ

ರಾಧಿಕಾ ಯಾರು ಗೊತ್ತಿಲ್ಲ. ಗೊತ್ತಿಲ್ಲದವರ ಬಗ್ಗೆ ಕೇಳಬೇಡಿ ಎಂದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಇದೀಗ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಂಡ್ಯ, (ಜ.13): ರಾಧಿಕಾ, ಎಚ್‌ಡಿಕೆ ಜತೆಯಲ್ಲಿ ಓಡಾಡಿದ್ದು ನೋಡಿದ್ದೀರಾ. ಅವರಿಬ್ಬರು ಜತೆಯಲ್ಲಿ ಹೋಗಿರೋದನ್ನು ನೋಡಿದ್ದೀರಾ. ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು? ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ಕೆಲದಿನಗಳ ಹಿಂದೆ ಶ್ರೀರಂಗಪಟ್ಟಣದ ನೇರಳೆಕೆರೆ ಗ್ರಾಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ರಾಧಿಕಾಗೆ ಸಿಸಿಬಿ ನೋಟಿಸ್​ ಬಂದಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. 

ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದ ಕುಮಾರಸ್ವಾಮಿ...!

ಇನ್ನು ಕುಮಾರಸ್ವಾಮಿ ಅವರ ಆ ಹೇಳಿಕೆಗೆ ನಾಗಮಂಗಲದಲ್ಲಿ ಇಂದು (ಬುಧವಾರ) ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ ವ್ಯಂಗ್ಯವಾಡಿದ್ದಾರೆ.

ರಾಧಿಕಾ, ಹೆಚ್‌ಡಿಕೆ ಜತೆಯಲ್ಲಿ ಓಡಾಡಿದ್ದು ನೋಡಿದ್ದೀರಾ. ಅವರಿಬ್ಬರು ಜತೆಯಲ್ಲಿ ಹೋಗಿರೋದನ್ನು ನೋಡಿದ್ದೀರಾ. ಇಬ್ಬರೂ ಜತೆಗಿರುವ ವಿಡಿಯೋವನ್ನೂ ನೋಡಿದ್ದೀರಾ. ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು? ಅವರ ವೈಯಕ್ತಿಕ ಜೀವನದ ಬಗ್ಗೆ ನಾನು ಹೇಳಿಕೆ ಕೊಡಲ್ಲ ಎಂದು ಹೇಳಿದರು.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ