
ಬೆಂಗಳೂರು(ಜ. 09) ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇದೊಂದು ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಜಕಾರಣದಲ್ಲಿ ಯಾರೂ ವೈರಿಗಳು ಅಲ್ಲ..ಮಿತ್ರರೂ ಅಲ್ಲ ಸಿಕ್ಕಾಪಟ್ಟೆ ಹಳೆ ಗಾದೆ..
ವಿಧಾನಸೌದದಲ್ಲಿ ಕಚ್ಚಾಡಿಕೊಳ್ಳುವ ನಾಯಕರು ಹೊರಗೆ ಒಟ್ಟಿಗೆ ಟೀ ಕುಡಿಯುತ್ತಾರೆ. ಸಿದ್ದರಾಮಯ್ಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಆಸ್ಪತ್ರೆಗೆ ತೆರಳಿ ಸಿಎಂ ಯಡಿಯೂರಪ್ಪ..ಸಚಿವ ಈಶ್ವರಪ್ಪ ಧೈರ್ಯ ಹೇಳಿ ಬರುತ್ತಾರೆ.. ಯಡಿಯೂರಪ್ಪ ಜನ್ಮದಿನ ಸಂಭ್ರಮಕ್ಕೆ ಸಿದ್ದರಾಮಯ್ಯ ಬಂದು ಭಾಷಣ ಮಾಡುತ್ತಾರೆ... ಕರ್ನಾಟಕದಲ್ಲಿ ಇಂಥ ಹಲವು ಉದಾಹರಣೆ ಸಿಗುತ್ತವೆ..
ವೈಕುಂಠ ಏಕಾದಶಿ ಪೂಜೆ ಸಲ್ಲಿಸಿದ ಜಮೀರ್
ಈಗ ನಾವು ಹೇಳುತ್ತಿರುವುದು ಅಂಥದ್ದೇ ಒಂದು ಕತೆ... ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಬಹುದು ಎಲ್ಲವನ್ನು ಬದಿಗಿಟ್ಟು ನಾಯಕರು ಜನರ ಒಳಿತಿಗೆ ಕೆಲಸ ಮಾಡಿದ ಸಾಕಷ್ಟು ಸಂಗತಿಗಳಿವೆ.. ಕಾಂಗ್ರೆಸ್ ನಾಯಕ ಚಾಮರಾಜಪೇಟೆ ಶಾಸಕ ಬಿಝಡ್ ಜಮೀರ್ ಅಹಮದ್ ಖಾನ್ ಬೆಂಗಳೂರು ದಕ್ಷಿಣ ಸಂಸದ..ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕಚೇರಿಗೆ ತೆರಳಿದ್ದಾರೆ.ಇದಕ್ಕೆ ಕಾರಣ ಇದೆ..
ಮಗಳ ಮದುವೆಗೆ ತೇಜಸ್ವಿ ಅವರನ್ನು ಆಹ್ವಾನಿಸಲು ಜಮೀರ್ ತೆರಳಿದ್ದಾರೆ. ಬಂದ ಅತಿಥಿಗೆ ಗೌರವಗಳು ತೇಜಸ್ವಿ ಅವರ ಕಚೇರಿಯಲ್ಲಿ ಸಿಕ್ಕಿದೆ. ಒಟ್ಟಿನಲ್ಲಿ ರಾಜಕೀಯ ಕಿತ್ತಾಟಗಳನ್ಣೇ ಕಂಡು ಕಂಡು ಸಾಕಾದವರಿಗೆ ಇದೊಂದು ಪೋಟೋ ಬೇರೆ ಕತೆ ಹೇಳುತ್ತದೆ.. ಜಮೀರ್ ಎಲ್ಲ ಪಕ್ಷದ ನಾಯಕರನ್ನು ಆಹ್ವಾನಿಸುತ್ತ ಇದ್ದಾರೆ. ಜನವರಿ 21 ಕ್ಕೆ ವಿವಾಹ ನೆರವೇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.