'ನಾಡಿನ ಅಭಿವೃದ್ಧಿ ಮರೆತು ಮಸೀದಿಗಳಲ್ಲಿ ಶಿವಲಿಂಗ ಹುಡುಕಾಟ'

Published : Jun 11, 2022, 02:55 PM IST
'ನಾಡಿನ ಅಭಿವೃದ್ಧಿ ಮರೆತು ಮಸೀದಿಗಳಲ್ಲಿ ಶಿವಲಿಂಗ ಹುಡುಕಾಟ'

ಸಾರಾಂಶ

*  ರಾಜ್ಯ ಸರ್ಕಾರದ ವಿರುದ್ಧ ಜನತಾ ಪಕ್ಷದ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯ್ಕ ವಾಗ್ದಾಳಿ *  ಭ್ರಷ್ಟಾಚಾರ ಕಡಿವಾಣಕ್ಕೆ ಮನವಿ *  224 ಕ್ಷೇತ್ರ​ದಲ್ಲೂ ಸ್ಪರ್ಧೆ: ನಾಗೇಶ್‌  

ಚಿತ್ರದುರ್ಗ(ಜೂ.11): ನಾಡಿನ ಕೃಷಿ ಹಾಗೂ ಶೈಕ್ಷಣಿಕ ಕ್ಷೇತ್ರ ಸಂಕಷ್ಟ ಎದುರಿಸುತ್ತಿದ್ದು ಅಭಿವೃದ್ಧಿ ಮರೆತ ರಾಜ್ಯ ಸರ್ಕಾರ ಮಸೀದಿಗಳಲ್ಲಿ ಶಿವಲಿಂಗ ಹುಡುಕಿಕೊಂಡು ಹೊರಟಿದೆ ಎಂದು ಜನತಾಪಕ್ಷದ ಅಧ್ಯಕ್ಷೆ ಬಿ.ಟಿ.ಲಲಿತನಾಯ್ಕ ಆರೋಪಿಸಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮಿತಿ ಮೀರಿದ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಮತದಾರರ ಬಗ್ಗೆ ಕಾಳಜಿ ಇಟ್ಟುಕೊಂಡಿಲ್ಲ. ಇಂತಹ ಭ್ರಷ್ಟಸರ್ಕಾರದ ವಿರುದ್ಧ ಮುಂದಿನ ಚುವಾವಣೆಯಲ್ಲಿ ಮತದಾರರು ದಿಟ್ಟತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.

ಇತಿಹಾಸ ತಿರುಚಲು ಹೋಗಿ ಪಠ್ಯಪುಸ್ತಕದಲ್ಲಿ ಅವಾಂತರ: ಖಂಡ್ರೆ

ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ರಸ್ತೆಗಳು ಇಲ್ಲ . ಜನತೆಗೆ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ . ಶಾಲಾ ಸಮವಸ್ತ್ರದ ಬಗ್ಗೆ ಅನಾವಶ್ಯಕವಾಗಿ ಗಲಭೆ ಎಬ್ಬಿಸಿ ಶಿಕ್ಷಣದಲ್ಲಿ ಧರ್ಮ ತುರುಕುವ ಪ್ರಯತ್ನ ಮಾಡಲಾಯಿತು. ನಿಜವಾದ ಸಮಸ್ಯೆಗಳಿಂದ ಜನರ ಆಸಕ್ತಿಯ ಬೇರೆಡೆಗೆ ಸೆಳೆಯಲು ಇಂತಹ ತಂತ್ರಗಾರಿಕೆ ಮಾಡಲಾಗುತ್ತಿದೆ . ಮಸೀದಿಯಲ್ಲಿ ಶಿವಲಿಂಗ ಇದೆ ಎಂದು ಹೇಳುವ ಮೂಲಕ ಮಸೀದಿಗಳನ್ನು ತಮ್ಮ ವಶಕ್ಕೆ ಪಡೆಯುವ ಕಾರ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಹಿಂದಿನ ಕಾಲದಲ್ಲಿ ಎಲ್ಲರೂ ಸೇರಿ ಕೂಡಿ ಬಾಳುವೆ ಮಾಡುತ್ತಿದ್ದರು. ಆಗ ಯಾವುದೇ ಜಾತಿ, ಧರ್ಮ ಇರಲಿಲ್ಲ. ಶಾಲೆಯಲ್ಲಿ ಸಮವಸ್ತ್ರದ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಇಂದಿನ ದಿನಮಾನದಲ್ಲಿ ಶಿಕ್ಷಣ ನೀಡುವ ಶಾಲಾ-ಕಾಲೇಜು, ಜ್ಞಾನವನ್ನು ನೀಡುವ ಗ್ರಂಥಾಲಯಗಳು ಹೆಚ್ಚಾಗಬೇಕಿದೆ. ಇದರ ಬಗ್ಗೆ ಮಠಗಳು ಹೆಚ್ಚು ಪ್ರಚುರ ಪಡಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಿತ್ತು. ಅದು ಸಾಧ್ಯವಾಗದೇ ಹೋಗಿದೆ. ಶಾಲೆಗಳು ಪ್ರಾರಂಭವಾಗಿ ತಿಂಗಳಾದರೂ ಪಠ್ಯ ಸಿಕ್ಕಿಲ್ಲ. ಶೀಘ್ರ ಪಠ್ಯಪುಸ್ತಕ ತಲುಪಿಸುವ ಕೆಲಸವಾಗಬೇಕೆಂದು ಆಗ್ರಹಿಸಿದರು.

Karnataka Rajya sabha Election ಕಾಂಗ್ರೆಸ್ ಜೆಡಿಎಸ್ ಬಡಿದಾಟದ ನಡುವೆ ಬಿಜೆಪಿ ನಂಬರ್ ಗೇಮ್!

ರೈತ ದೇಶದ ಬೆನ್ನುಲುಬು ಎಂದು ಎಲ್ಲರೂ ಹೇಳುತ್ತಿದ್ದು ಆತನ ಸಮಸ್ಯೆ ಗಂಭೀರವಾಗಿ ಯಾರೂ ಆಲಿಸುತ್ತಿಲ್ಲ. ಸರ್ಕಾರ ಜಾರಿ ಮಾಡಲು ಉದ್ದೇಶಿಸಿದ್ದ ಎಪಿಎಂಸಿ ಕಾಯ್ದೆ ರೈತರಿಗೆ ಉಪಯೋಗವಾಗುತ್ತಿಲ್ಲ. ಬಂಡವಾಳಶಾಹಿಗಳ ಪರವಾಗಿ ರೂಪುಗೊಂಡಂತೆ ಕಾಣಿಸುತ್ತಿದೆ. ಭವಿಷ್ಯದಲ್ಲಿ ಜನತಾ ಪಕ್ಷದ ವತಿಯಿಂದ ಮತದಾರಲ್ಲಿ ಅರಿವು ಮತ್ತು ಪ್ರಜ್ಞೆ ಮೂಡಿಸುವ ಕಾರ್ಯಮಾಡಲಾಗುತ್ತದೆ ಎಂದು ಲಲಿತಾನಾಯ್ಕ ಹೇಳಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾಧ್ಯಕ್ಷ ಕೆ.ಎಂ.ಲೋಕೇಶ್‌, ಮಹಿಳಾ ಜಿಲ್ಲಾಧ್ಯಕ್ಷ ಬಿ.ಗೀತಾಂಜಲಿ, ರಾಜ್ಯ ಸದಸ್ಯತ್ವ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ, ರಾಜ್ಯ ಕಾರ್ಯಾಧ್ಯಕ್ಷ ರಫೀಕ್‌, ರಾಜ್ಯ ಕಾರ್ಯದರ್ಶಿ ಮಹಡಿಕ್‌ ಬಾಲರಾಜ್‌, ಪ್ರಕಾಶ್‌, ಸಾಕಮ್ಮ, ಮಂಜುನಾಥ್‌, ಅನಂತಮೂರ್ತಿ ಇದ್ದರು.

224 ಕ್ಷೇತ್ರ​ದಲ್ಲೂ ಸ್ಪರ್ಧೆ: ನಾಗೇಶ್‌

ಜನತಾ ಪಕ್ಷದಲ್ಲಿ ಉತ್ತಮ ನಾಯಕರಿದ್ದು ಉತ್ತಮ ಇತಿಹಾಸವನ್ನು ಹೊಂದಿದವರು ಇದ್ದಾರೆ. ಬೇರೆ ಪಕ್ಷಗಳು ಬಂಡವಾಳ ಶಾಹಿ ಅಥವಾ ತೋಳ್ಬಲ ಹೊಂದಿದವರ ಆಯ್ಕೆ ಮಾಡುತ್ತಿವೆ. ಆದರೆ ನಮ್ಮ ಪಕ್ಷ ತುಳಿತಕ್ಕೆ ಒಳಗಾದವರನ್ನು ಆಯ್ಕೆ ಮಾಡುವ ಮೂಲಕ ಆವರಿಗೆ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದು ಪತ್ರಿ​ಕಾ​ಗೋ​ಷ್ಠಿ​ಯ​ಲ್ಲಿದ್ದ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ್‌ ಹೇಳಿ​ದರು. ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟು ರಾಜ್ಯ ಪ್ರವಾಸ ಮಾಡಲಾಗುತ್ತಿದ್ದು 224 ಕ್ಷೇತ್ರಗಳಿಗೂ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ಉತ್ತಮ ಆಭ್ಯರ್ಥಿಗಳ ಆಯ್ಕೆ ಕಾರ್ಯ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ 150 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು. ಪಕ್ಷಕ್ಕೆ ಬೇರೆ ಬೇರೆ ಪಕ್ಷದ ಹಲವಾರು ನಾಯಕರು ಸೇರ್ಪಡೆಯಾಗುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆ ಜನತಾ ಪಾರ್ಟಿಗೆ ದಿಕ್ಸೂಚಿಯಾಗಲಿದೆ ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಾ। ಯತೀಂದ್ರ ವಿರುದ್ಧ ಡಿಕೆಶಿ ಬಣ ಮತ್ತೆ ಬಾಣ
ಮತ್ತೆ ಟಿಪ್ಪು ಜಯಂತಿ ವಿವಾದ ಭುಗಿಲು