ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ ಕಾಂಗ್ರೆಸ್ ನಾಯಕರು ತುಂಬಾ ಒತ್ತಡದಲ್ಲಿದ್ದಾರಾ? ಮತದಾರರ ಮೇಲೆ ಹಲ್ಲೆ ಮಾಡುತ್ತಿರುವ ಘಟನೆಗಳು ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ.
ತುಮಕೂರು (ಏ.27) : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತುಂಬಾ ಒತ್ತಡದಲ್ಲಿದ್ದಾರಾ? ಹತಾಶೆಗೊಳಗಾಗಿದ್ದಾರಾ? ಮತದಾರರ ಮೇಲೆ ಹಲ್ಲೆ ಮಾಡುತ್ತಿರುವ ಘಟನೆಗಳು ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ.
ಹೌದು, ಕೆಲ ದಿನಗಳ ಹಿಂದೆ ವಿಜಯಪುರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ(Congress campaigning) ಸಭೆಯಲ್ಲಿ ಯುವಕನೋರ್ವ ತನ್ನ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂಬ ವಿಚಾರಕ್ಕೆ ಎಂ.ಬಿ.ಪಾಟೀಲ್ ಯುವಕನಿಗೆ ಕಪಾಳಮೋಕ್ಷ ಮಾಡಿದ್ದು ಎಲ್ಲೆಡೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಇದೀಗ ಅಂತದ್ದೇ ಘಟನೆ ತುಮಕೂರಲ್ಲಿ ಮರುಕಳಿಸಿದೆ.
ಯುವಕನಿಗೆ ಶಾಸಕನ ಕಪಾಳಮೋಕ್ಷ: ಚರ್ಚೆಗೆ ಗ್ರಾಸವಾದ ಘಟನೆ ಬಗ್ಗೆ ಎಂ.ಬಿ.ಪಾಟೀಲ್ ಹೇಳಿದ್ದೇನು?
ಏನು ಘಟನೆ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ತನಗಿಷ್ಟ ಬಂದ ಪಕ್ಷಕ್ಕೆ ಮತ ಹಾಕಬಹುದು. ಅದು ಮತದಾನ ಹಕ್ಕು. ಅಂತಯೇ ಕಾಂಗ್ರೆಸ್‌ಗೆ ಮತ ಹಾಕಲ್ಲ ಎಂದಿದ್ದಕ್ಕೆ ಜೀತೇಂದ್ರ ಎಂಬುವವರ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾದ ಜ್ಯೋತಿನಗರ(Jyoti nagar at tumakuru)ದಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡ, ನಗರಸಭೆ ಸದಸ್ಯ ಗೋಣಿಹಳ್ಳಿ ದೇವರಾಜು(Gonihalli devaraju) ಮತ್ತು ಆತನ ಮೂರು ಮಂದಿ ಸಹಚರರಿಂದ ಜೀತೇಂದ್ರ (Jitendra)ಎಂಬುವವರಿಗೆ ಹಲ್ಲೆ ಮಾಡಿದ್ದಾರೆ.
ನಿನ್ನೆ ತಡರಾತ್ರಿ 8.30ಸುಮಾರಿಗೆ ಕಾಂಗ್ರೆಸ್ ಮುಖಂಡ ದೇವರಾಜು, ಬೆಂಬಲಿಗರು ಜನರ ಮನವೊಲಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಪ್ರಚಾರ ಕಾರ್ಯ ನಡೆಸಿದ್ದಾರೆ. ಈ ವೇಳೆ ತಾನು ಕಾಂಗ್ರೆಸ್ ಗೆ ಮತ ಹಾಕಲ್ಲ ಎಂದಿದ್ದ ಜಿತೇಂದ್ರ. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಮುಖಂಡ ದೇವರಾಜು ಹಲ್ಲೆ ನಡೆಸಿದ್ದಾನೆ. ಅಲ್ಲದೇ, 'ನೀನು ಕಾಂಗ್ರೆಸ್ ಗೆ ಮತ ಹಾಕದೇ ಇದ್ದರೆ ಬದುಕಿ ಉಳಿಯಲ್ಲ, ಸಾಯಿಸಿಬಿಡ್ತೀವಿ' ಎಂದು ಬೆದರಿಸಿ ಹಲ್ಲೆ ನಡೆಸಿದ್ದಾರೆ.
ಲಿಂಗಾಯತರನ್ನು ಬಳಸಿಕೊಂಡು ಕೈ ಬಿಡುವುದೇ ಬಿಜೆಪಿ ಹಿಡನ್ ಅಜೆಂಡಾ: ಎಂ.ಬಿ.ಪಾಟೀಲ
ದೇವರಾಜು ಮತ್ತವನ ಸಹಚರರ ಹಲ್ಲೆಯಿಂದ ಗಂಭೀರವಾಗಿ ಪೆಟ್ಟು ಬಿದ್ದು ಜೀತೇಂದ್ರನ ಹಲ್ಲುಗಳು ಮುರಿದಿವೆ. ಸದ್ಯ ಘಟನೆ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.