ಲೋಕಸಭಾ ಚುನಾವಣೆ 2024: ಕಾಂಗ್ರೆಸ್‌ನದ್ದು ಪಿಕ್‌ಪಾಕೆಟ್‌ ಸರ್ಕಾರ, ಕುಮಾರಸ್ವಾಮಿ

By Kannadaprabha NewsFirst Published Apr 16, 2024, 1:29 PM IST
Highlights

ತಾಯಂದಿರಿಗೆ ಗ್ಯಾರಂಟಿಗೆ ಮರುಳಾಗಿ ಮತ ನೀಡಬೇಡಿ ಎಂದು ಭಾಷಣ ಮಾಡಿದರೆ, ರಾಜ್ಯದ ಮಹಿಳೆಯರಿಗೆ ಕುಮಾರಸ್ವಾಮಿ ಅವಮಾನ ಮಾಡಿಬಿಟ್ಟರು ಎಂದು ಕಾಂಗ್ರೆಸ್ ಸುದ್ದಿ ಹಬ್ಬಿಸಿದೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 

ದೊಡ್ಡಬಳ್ಳಾಪುರ(ಏ.16):  ಒಂದೆಡೆ ಕೊಟ್ಟು ಮತ್ತೊಂದೆಡೆ ಜನರಿಂದ ವಸೂಲಿ ಮಾಡುವ ತಂತ್ರ ಕಾಂಗ್ರೆಸ್‌ನದ್ದು. ಇದು ಪಿಕ್‌ಪಾಕೆಟ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ದೊಡ್ಡಬಳ್ಳಾಪುರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತಯಾಚಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ ನೀಡುತ್ತಿರುವ 2 ಸಾವಿರ ರು. ಜೊತೆಗೆ 4 ಸಾವಿರ ರುಪಾಯಿ ಹೆಚ್ಚುವರಿ ಹಣ ನೀಡಿದರೂ ನನ್ನ ತಕರಾರು ಇಲ್ಲ. ಕಳೆದ ವಿಧಾನಸಭೆ ಚುನಾವಣೆಗೆ ಬಂದಾಗ 75 ವರ್ಷ ಮೀರಿದ ತಂದೆ-ತಾಯಂದಿರಿಗೆ ತಿಂಗಳಿಗೆ 5 ಸಾವಿರ ರುಪಾಯಿ ನೀಡುವ ಘೋಷಣೆ ಮಾಡಿದ್ದೆ. ಅಷ್ಟೆ ಅಲ್ಲ ನಾಡಿನ ಪ್ರತಿ ಕುಟುಂಬಕ್ಕೆ ಶ್ರೀಮಂತ ಕುಟುಂಬ ಪಡೆಯುವಂತಹ ಉತ್ತಮ ಶಿಕ್ಷಣ ಕೊಡಬೇಕೆಂಬುದು ತಮ್ಮ ಕಾರ್ಯಕ್ರಮವಾಗಿತ್ತು. ಈಗ ಸರ್ಕಾರದ 2 ಸಾವಿರ ರುಪಾಯಿ ಪಡೆದು, ದುಬಾರಿಯಾಗುತ್ತಿರುವ ಶಿಕ್ಷಣ, ಜೀವನ ನಿರ್ವಹಿಸಲು ಸಾಧ್ಯವೇ ಎಂಬುದು ತಮ್ಮ ಪ್ರಶ್ನೆ ಎಂದರು.

ಪಿಎಂ, ಸಿಎಂ ಸ್ಥಾನ ಉಳಿಸಿಕೊಳ್ಳಲು ಅಪ್ಪ, ಮಗನಿಗೆ ಆಗಲಿಲ್ಲ: ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯ

ಹೇಳಿಕೆ ತಿರುಚಿದ ಕಾಂಗ್ರೆಸ್!

ತುಮಕೂರಿನಲ್ಲಿ ಮಾತನಾಡುವ ವೇಳೆ, ತಾಯಂದಿರಿಗೆ ಗ್ಯಾರಂಟಿಗೆ ಮರುಳಾಗಿ ಮತ ನೀಡಬೇಡಿ ಎಂದು ಭಾಷಣ ಮಾಡಿದರೆ, ರಾಜ್ಯದ ಮಹಿಳೆಯರಿಗೆ ಕುಮಾರಸ್ವಾಮಿ ಅವಮಾನ ಮಾಡಿಬಿಟ್ಟರು ಎಂದು ಕಾಂಗ್ರೆಸ್ ಸುದ್ದಿ ಹಬ್ಬಿಸಿದೆ. ಗ್ರಾಮ ವಾಸ್ತವ್ಯಕ್ಕೆ ಬಂದಾಗ ತಾಯಂದಿರು ಸಾರಾಯಿ ನಿಷೇಧ ಮಾಡುವಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿ, ಸಾರಾಯಿ ನಿಷೇದದಂತಹ ದಿಟ್ಟ ಕ್ರಮ ಕೈಗೊಳ್ಳಲಾಗಿತ್ತು ಎಂದರು.
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸ್ವಂತ ಉದ್ಯೋಗ ಪಡೆವ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಸರ್ಕಾರದ ಕೆಲಸ ಆಗಬೇಕು. ಆಗ ಸ್ವಾವಲಂಬನೆ ಸಾಧ್ಯ ಎಂದರು.

click me!