ಕಾಂಗ್ರೆಸ್ಸೇ ರೌಡಿಗಳ ಪಕ್ಷ, ಅದರ ಅಧ್ಯಕ್ಷರ ಹಿನ್ನೆಲೆ ನೋಡಿ: ಅಶ್ವತ್ಥನಾರಾಯಣ್‌ ತಿರುಗೇಟು

By Kannadaprabha News  |  First Published Dec 2, 2022, 9:00 AM IST

ಸಾರ್ವಜನಿಕವಾಗಿ ಎಲ್ಲರನ್ನೂ ಭೇಟಿಯಾಗುವ ಹಕ್ಕು ಜನಪ್ರತಿನಿಧಿಗಳಿಗೆ ಇದೆ. ಕೆಲವರು ಮಾತನಾಡಿಸಿದಾಗ ಮಾತಾಡಲೇಬೇಕಾಗುತ್ತದೆ. ಮಾತನಾಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಇದನ್ನು ಅನಗತ್ಯ ವಿವಾದ ಮಾಡಬಾರದು ಎಂದ ಅಶ್ವತ್ಥನಾರಾಯಣ್‌ 


ಬೆಂಗಳೂರು(ಡಿ.02):  ‘ಸಾರ್ವಜನಿಕವಾಗಿ ಎಲ್ಲರನ್ನೂ ಭೇಟಿಯಾಗುವ ಹಕ್ಕು ಜನ ಪ್ರತಿನಿಧಿಗಳಿಗೆ ಇದೆ. ಕೆಲವರು ಮಾತನಾಡಿಸಿದಾಗ ಮಾತಾಡಲೇಬೇಕಾಗುತ್ತದೆ. ನಮ್ಮ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್‌ನದ್ದೇ ರೌಡಿಗಳ ಪಕ್ಷ. ಪಕ್ಷದ ಅಧ್ಯಕ್ಷರ ಹಿನ್ನೆಲೆ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ’ ಎಂದು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಮಣ್ಣ ಅವರು ಯಾರನ್ನೋ (ಕ್ರಿಮಿನಲ್‌ ಹಿನ್ನೆಲೆ ವ್ಯಕ್ತಿಯನ್ನು) ಭೇಟಿ ಮಾಡಿದ್ದರು ಎನ್ನುವುದನ್ನು ವಿವಾದ ಮಾಡಲಾಗಿದೆ. ಸಾರ್ವಜನಿಕವಾಗಿ ಎಲ್ಲರನ್ನೂ ಭೇಟಿಯಾಗುವ ಹಕ್ಕು ಜನಪ್ರತಿನಿಧಿಗಳಿಗೆ ಇದೆ. ಕೆಲವರು ಮಾತನಾಡಿಸಿದಾಗ ಮಾತಾಡಲೇಬೇಕಾಗುತ್ತದೆ. ಮಾತನಾಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಇದನ್ನು ಅನಗತ್ಯ ವಿವಾದ ಮಾಡಬಾರದು’ ಎಂದರು.

Tap to resize

Latest Videos

Mandya: ಮಂಡ್ಯದಲ್ಲಿ ಇನ್ನೊಬ್ಬರ ರಕ್ತ ಹೀರುವ ನಾಯಕರು ಬೇಕಾ? ಅಶ್ವತ್ಥ ನಾರಾಯಣ ಟೀಕೆ

‘ಇನ್ನು ನಮ್ಮ ಬಗ್ಗೆ ಆರೋಪ ಮಾಡುತ್ತಿರುವವರು ತಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷ ಎಂದರೆ ರೌಡಿಗಳ ಹಾಗೂ ಗೂಂಡಾಗಳ ಪಕ್ಷ. ಪಕ್ಷದ ಅಧ್ಯಕ್ಷರ ಹಿನ್ನೆಲೆ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ನಾವು ಜನಪರವಾಗಿ ಕೆಲಸ ಮಾಡುವವರು, ಜನರಿಗಾಗಿ ಕೆಲಸ ಮಾಡುವವರು. ವಿಚಾರ ಕೊರತೆಯಿಂದ ಅವರು ಏನೇನೋ ಮಾತನಾಡುತ್ತಾರೆ. ಇದಕ್ಕೆ ಮನ್ನಣೆ ನೀಡಬಾರದು’ ಎಂದು ಹೇಳಿದರು.

‘ನಮ್ಮ ಸರ್ಕಾರ ಜನರಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಾ ಜನರ ಆಶೀರ್ವಾದದಂತೆ ಕೆಲಸ ಮಾಡುತ್ತಿದ್ದೇವೆ. ವಿನಾಕಾರಣ ಆರೋಪ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
 

click me!