ಜಾತಿ ಗಣತಿ ಹೆಸರಿನಲ್ಲಿ ರಾಜ್ಯ ಹಾಳು ಮಾಡೋದೇ ಕಾಂಗ್ರೆಸ್ ಉದ್ದೇಶ: ವಿಜಯೇಂದ್ರ

Published : Apr 20, 2025, 10:28 PM ISTUpdated : Apr 20, 2025, 10:30 PM IST
ಜಾತಿ ಗಣತಿ ಹೆಸರಿನಲ್ಲಿ ರಾಜ್ಯ ಹಾಳು ಮಾಡೋದೇ ಕಾಂಗ್ರೆಸ್ ಉದ್ದೇಶ: ವಿಜಯೇಂದ್ರ

ಸಾರಾಂಶ

ರಾಜ್ಯದಲ್ಲಿ ಜಾತಿ ಗಣತಿ ಹೆಸರಿನಲ್ಲಿ ರಾಜ್ಯವನ್ನು ಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.   

ಯರಗಟ್ಟಿ (ಏ.20): ರಾಜ್ಯದಲ್ಲಿ ಜಾತಿ ಗಣತಿ ಹೆಸರಿನಲ್ಲಿ ರಾಜ್ಯವನ್ನು ಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು. ಜಿಲ್ಲಾ ಪಂಚಾಯತಿ ಸದಸ್ಯ ಅಜೀತಕುಮಾರ ದೇಸಾಯಿ ನಿವಾಸಕ್ಕೆ ಭೇಟಿ ವೇಳೆ ಬಿಜೆಪಿ ಸವದತ್ತಿ ಮಂಡಳದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗಿನಿಂದಲೂ ಜಾತಿಗಣತಿ ಬಿಡುಗಡೆ ಮಾಡುತ್ತೇನೆ ಅಂತ ಹೇಳುತ್ತ ಬರುತ್ತಿದೆ. ಆದರೂ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು. ಅಖಂಡ ವೀರಶೈವ ಲಿಂಗಾಯತರನ್ನು 3 ಭಾಗಗಳನ್ನಾಗಿ ಮಾಡಿ ಮೂಲೆಗುಂಪು ಮಾಡುವ ಉದ್ದೇಶ ಕಾಂಗ್ರೆಸ್ ಸರ್ಕಾರರದ್ದು, ಕಾಂಗ್ರೆಸನಲ್ಲಿರುವ ವೀರಶೈವ ಲಿಂಗಾಯತ ಶಾಸಕರು ಜಾತಿ ಗಣತಿ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಮಾಜಿ ಜಿಪಂ ಸದಸ್ಯ ಅಜೀತಕುಮಾರ ದೇಸಾಯಿ, ಸವದತ್ತಿ ರತ್ನಾ ಮಾಮನಿ, ಧಾರವಾಡ ಮಾಜಿ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕ ವಿ.ಐ.ಪಾಟೀಲ, ಮಲ್ಲಣ್ಣ ಯಾದವಾಡ, ಈರಣ್ಣ ಚಂದರಗಿ, ವೆಂಕಟೇಶ ದೇವರಡ್ಡಿ, ಚೇತನ ಜಕಾತಿ, ಸುನೀಲ ಮಾಮನಿ, ಕೃಷ್ಣಮೂರ್ತಿ ತೊರಗಲ್, ಸದಾನಂದ ಪಾಟೀಲ, ಸದಾನಂದ ಹಣಬರ, ಬಾಲಕೃಷ್ಣ ಹಡಪದ, ಬಸಯ್ಯ ಹಿರೇಮಠ, ಪುಂಡಲೀಕ ಮೇಟಿ, ಕುಮಾರ ಜಕಾತಿ, ನಾಗಪ್ಪ ಪುಂಜಿ, ಗೌಡಪ್ಪ ಸವದತ್ತಿ, ಕಿರಣ ಹುಣಶ್ಯಾಳ, ಮಹಾದೇವ ಮುರಗೋಡ ಬಿಜೆಪಿ ಕಾರ್ಯಕರ್ತರು ಇದ್ದರು.

ಹಿಂದುಗಳಿಗೆ ಸಿಎಂ ಅವಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಮಮಂತ್ರಿಯಾಗಿದ್ದಾಗ ವೀರಶೈವ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಈಗ ಜಾತಿ ಜನಗಣತಿ ಎಂದು ಮುಸಲ್ಮಾನರನ್ನು ಎತ್ತಿಕಟ್ಟಿ ಹಿಂದುಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು ಅವರು ನಗರದ ಶಿವಾಜಿ ವೃತ್ತದಲ್ಲಿ ಬಿಜೆಪಿಯ ಜನಾಕ್ರೋಶದ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ತುಷ್ಟಿಕರಣ ಮಾಡುತ್ತಿದೆ. ಜಾತಿ ಜನಗಣಿತಿ ಮಾಡಿ ರಾಜ್ಯದಲ್ಲಿಯೇ ಮುಸ್ಲಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಬಿಂಬಿಸಿದ್ದಾರೆ. ಕಳೆದ ಬಜೆಟನಲ್ಲಿ ಶಾದಿ ಭಾಗ್ಯ ಸೇರಿದಂತೆ ಕಾಮಗಾರಿಯಲ್ಲಿ ಮಿಸಲಾತಿ ಘೋಷಿಸಿದ್ದಾರೆ.

ಇದು ನುಡಿದಂತೆ ನಡೆದ ಸರ್ಕಾರ ಅಲ್ಲ, ಎಡವಿ ಬಿದ್ದ ಸರ್ಕಾರ: ಬಿ.ವೈ.ವಿಜಯೇಂದ್ರ ಕಿಡಿ

ಮುಸ್ಲಿಂರಿಗೆ ಮಿಸಲಾತಿ ನೀಡಿದ್ದಿರಿ, ಹಿಂದೂಗಳಲ್ಲಿ ಬಡವರು ಇಲ್ವಾ? ಎಂದು ಪ್ರಶ್ನಿಸಿದ ಬಿವೈ ವಿಜಯೇಂದ್ರ ಜನಗಣತಿ ಮಾಡಿ ಅತಿ ಹೆಚ್ಚು ಜನಸಂಖ್ಯೆ ಎಂಬ ವರದಿ ತರಿಸಿಕೊಂಡಿದ್ದೀರಿ, ಹೀಗಾಗಿ ನೀವು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮುಸಲಮಾನರ ಸಿಎಮ್ಮೋ? ಎಂದು ಪ್ರಶ್ನಿಸಿದರು. ಬಿಜೆಪಿ ಪಕ್ಷ ಮುಸ್ಲಿಂರ ವಿರೋಧಿ ಇಲ್ಲ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಟ್ರಿಪಲ್ ತಲಾಖ್‌ ಜಾರಿಗೆ ತಂದಿದ್ದಾರೆ. ಬಿಜೆಪಿ ದೇಶದ್ರೋಹಿಗಳನ್ನು ಸಹಿಸುವ ಪಕ್ಷ ಇಲ್ಲ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌