Karnataka Politics| ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ: ಯಡಿಯೂರಪ್ಪ

By Kannadaprabha News  |  First Published Nov 20, 2021, 12:45 PM IST

*  ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಮಾಡಿದ ಅನ್ಯಾಯವೇ ಸಾಕಷ್ಟಿದೆ
*  ಸುಳ್ಳು ಟೀಕೆ ಬಿಡಿ, ಜನರು ಈಗ ಸುಶಿಕ್ಷಿತರಾಗಿದ್ದಾರೆ 
*  ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸತತವಾಗಿ ಮಳೆ ಕಾಡುತ್ತಿದೆ


ಗದಗ(ನ.20):  ಜಗತ್ತೇ ಮೆಚ್ಚುವಂತಹ ಸಂವಿಧಾನವನ್ನು ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ದೀನ-ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ಹೇಳಿದರು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌(BR Ambedkar) ಭವನದಲ್ಲಿ ಜಿಲ್ಲಾ ಬಿಜೆಪಿ(BJP) ವತಿಯಿಂದ ಆಯೋಜಿಸಲಾಗಿದ್ದ ಜನ ಸ್ವರಾಜ್‌(JanSwaraj) ಸಮಾವೇಶಕ್ಕೆ ಚಾಲನೆ ನೀಡಿದ ಅವರು, ವಿರೋಧ ಪಕ್ಷದ ನಾಯಕರು ದಲಿತರು(Dalit) ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಾರೆ ಎನ್ನುವ ಮೂಲಕ ಆ ಸಮುದಾಯದವರಿಗೆ ಅವಮಾನ ಮಾಡಿದ್ದಾರೆ. ಈ ಹಿಂದೆ ಅಂಬೇಡ್ಕರ ಅವರಿಗೆ ಕಾಂಗ್ರೆಸ್‌(Congress) ಮಾಡಿದ ಅನ್ಯಾಯವೇ ಸಾಕಷ್ಟಿದೆ. ಅವರ ಅಂತ್ಯಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್ಸಿಗರು ಈಗ ದಲಿತರ ಬಗ್ಗೆ ಮಾತನಾಡುತ್ತಿರುವುದು ತೀರಾ ಹಾಸ್ಯಾಸ್ಪದ. ಅದಕ್ಕಾಗಿ ಕಾಂಗ್ರೆಸ್‌ ನಾಯಕರು ನಿಮ್ಮ ಊರಿಗೆ ಬಂದರೆ ಅವರಿಗೆ ಹೇಳಿ, ದಲಿತರು ಹೊಟ್ಟೆಪಾಡಿಗಾಗಿ ಅಲ್ಲ, ದೇಶದ ಮತ್ತು ದಲಿತರ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದರು.

Tap to resize

Latest Videos

undefined

ಸ್ವಾತಂತ್ರ್ಯ ಬಂದು 6 ದಶಕಗಳ ಕಾಲ ಅಧಿಕಾರ ನಡೆಸಿದರೂ ದಲಿತರನ್ನು ಕೇವಲ ಓಟ್‌ ಬ್ಯಾಂಕ್‌(Vote Bank) ಮಾಡಿಕೊಂಡು ಅಧಿಕಾರ ನಡೆಸಿದ್ದಾರೆ. ಇದರೊಟ್ಟಿಗೆ ಬಿಜೆಪಿ ಅಲ್ಪಸಂಖ್ಯಾತರ(Minorities) ವಿರೋಧಿ ಪಕ್ಷ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ, ಆದರೆ, ನಾನು ಮಖ್ಯಮಂತ್ರಿಯಾಗಿದ್ದ(Chief Minister) ವೇಳೆಯಲ್ಲಿ ಸರ್ವ ಜನರ ಒಳಿತಿಗಾಗಿ ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾರು ಫಲಾನುಭವಿಗಳಿದ್ದಾರೆ ಎನ್ನುವ ದಾಖಲೆಗಳನ್ನು ತೆಗೆದು ನೋಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

Jan Swaraj Yatra| ಪರಿಷತ್‌ ಚುನಾವಣೆ ಬಳಿಕ ಪ್ರವಾಸ: ಬಿ.ಎಸ್‌.ಯಡಿ​ಯೂ​ರ​ಪ್ಪ

ಸಚಿವ ಗೋವಿಂದ ಕಾರಜೋಳ(Govind Karjol) ಮಾತನಾಡಿ, ಬಿಜೆಪಿಯ ಸತತ ಗೆಲುವು, ಪ್ರಧಾನಿ ನರೇಂದ್ರ ಮೋದಿ(Narendrab Modi) ಜನಪ್ರಿಯತೆಯಿಂದಾಗಿ ಕಾಂಗ್ರೆಸ್‌ನವರು ಹತಾಶೆಗೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದರಲ್ಲಿಯೂ ಸಿದ್ದರಾಮಯ್ಯ(Siddaramaiah) ಅವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಾರೆ ಎನ್ನುವ ಮೂಲಕ ದಲಿತರು ಕಾಂಗ್ರೆಸ್‌ನ ಗುಲಾಮರು ಎಂದುಕೊಂಡಿದ್ದಾರೆ. ಅವರು ನಿಮ್ಮೂರಿಗೆ ಬಂದರೆ ಅವರಿಗೆ ಸರಿಯಾಗಿ ಛೀಮಾರಿ ಹಾಕಿ ಕಳಿಸಿ, ಮುಂಬರುವ ಚುನಾವಣೆಯಲ್ಲಿ(Election) ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ(CC Patil) ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸತತವಾಗಿ ಮಳೆ ಕಾಡುತ್ತಿದೆ. ಇದರ ಮಧ್ಯೆಯೂ ನಮ್ಮ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಲ್ಲದೇ ದೇಶದಲ್ಲಿಯೇ ಪ್ರಥಮವಾಗಿ ಬಿದ್ದಿರುವ ಮನೆಗೆ 5 ಲಕ್ಷದಷ್ಟು ಪರಿಹಾರವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದ ಅವರು ಸರ್ಕಾರ ಸಾಧನೆಗಳ ಕುರಿತು ವಿವರಿಸಿದರು.

ರೋಣ ಶಾಸಕ ಕಳಕಪ್ಪ ಬಂಡಿ, ಹಾವೇರಿ-ಗದಗ ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಎನ್‌. ರವಿಕುಮಾರ, ಎಸ್‌.ವಿ. ಸಂಕನೂರ, ರಾಮಣ್ಣ ಲಮಾಣಿ ಮುಂತಾದವರು ಮಾತನಾಡಿ ಸರ್ಕಾರದ ಸಾಧನೆಗಳ ಕುರಿತು ವಿವರಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಪಂ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 942 ಬಿಜೆಪಿ ಸದಸ್ಯರ ಬೆಂಬಲ ನಮಗಿದೆ ಎಂದರು.

MLC Election ನಾನು ಟಿಕೆಟ್‌ ಕೇಳಲ್ಲ : ರಮೇಶ್ ಜಾರಕಿಹೊಳಿ

ಸಭೆಯಲ್ಲಿ ರಾಜು ಕುರುಡಗಿ, ಎಂ.ಎಸ್‌. ಕರಿಗೌಡ್ರ, ಶಾರದಾ ಹಿರೇಮಠ, ಸಂಗಮೇಶ ದುಂದೂರ, ಶ್ರೀಪತಿ ಉಡುಪಿ, ಶಿವಕುಮಾರ ಉದಾಸಿ, ಎನ್‌. ರವಿಕುಮಾರ, ಲಿಂಗರಾಜ ಪಾಟೀಲ, ರವಿ ದಂಡೀನ, ನಾರಾಯಣ ಜರತಾಕರ, ಪ್ರಶಾಂತ ನಾಯ್ಕರ ಸೇರಿದಂತೆ ಎಲ್ಲ ಘಟಕಗಳು, ವಿವಿಧ ಮೋರ್ಚಾದ ಪದಾಧಿಕಾರಿಗಳು ಹಾಜರಿದ್ದರು. ಮುತ್ತಣ್ಣ ಲಿಂಗನಗೌಡ್ರ ನಿರೂಪಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಗ್ರಾಪಂ, ಪುರಸಭೆ, ಪಟ್ಟಣ ಪಂಚಾಯ್ತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಬಿಜೆಪಿ ಹಿಂದುಳಿದ ವರ್ಗ, ದೀನ ದಲಿತರು, ಅಲ್ಪ ಸಂಖ್ಯಾತರ ವಿರೋಧಿ ಎಂದು ಹೇಳುವ ಕಾಂಗ್ರೆಸ್‌ ನಾಯಕರೇ ನಾವೀಗ ಕುಳಿತಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ನಾನೇ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ . 5 ಕೋಟಿ ಬಿಡುಗಡೆ ಮಾಡಿದ್ದೆ. ಇದು ಕೇವಲ ಗದುಗಿನ ಉದಾಹರಣೆ. ಈ ರೀತಿ ರಾಜ್ಯದ ಯಾವುದೇ ತಾಲೂಕುಗಳಿಗೆ ಹೋಗಿ ಅಲ್ಲಿ ದೀನ ದಲಿತರ ಉದ್ಧಾರಕ್ಕೆ ಬಿಜೆಪಿ ಮಾಡಿದ ಕೆಲಸ ಕಾರ್ಯಗಳು ನಿಮ್ಮನ್ನು ಸ್ವಾಗತಿಸುತ್ತೇವೆ. ಸುಳ್ಳು ಟೀಕೆಗಳನ್ನು ಬಿಡಿ, ಜನರು ಈಗ ಸುಶಿಕ್ಷಿತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.  

ಜನಸ್ವರಾಜ್‌ ಸಮಾವೇಶವನ್ನು ಉದ್ದೇಶಿಸಿ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾತನಾಡುವ ವೇಳೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದಾಗ ನೆರೆದಿದ್ದ ಕಾರ್ಯಕರ್ತರಲ್ಲಿ ಆಶ್ಚರ್ಯಕ್ಕೆ ಕಾರಣವಾಯಿತು. ಆದರೆ ಕೆಲ ಹಿರಿಯ ಬಿಜೆಪಿ ನಾಯಕರು, ಅವರು ಹೇಳಿದ್ದು 2023ರ ವಿಧಾನಸಭೆ ಚುನಾವಣೆಯಲ್ಲಿ ಎಂದು ತೇಲಿಸಿದ ಘಟನೆಯೂ ಜರುಗಿತು.
 

click me!