ನಗರದಲ್ಲಿ (ಮಾರ್ಚ್.3) ಗ್ಯಾರಂಟಿ ಸಮಾವೇಶ ನಡೆಯುವ ಹಿನ್ನಲೆ ಜಿಲ್ಲಾಡಳಿತದಿಂದ ಸಂಪೂರ್ಣ ಸಿದ್ಧತೆ ಹಾಗೂ ತಯಾರಿ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆ ವೇದಿಕೆ ಸುತ್ತಮುತ್ತ ಫುಲ್ ಟೈಟ್ ಸೆಕ್ಯೂರಿಟಿ ಮಾಡಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್ ನಿಂದ ತಪಾಸಣೆ ಮಾಡಲಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.03): ನಗರದಲ್ಲಿ (ಮಾರ್ಚ್.3) ಗ್ಯಾರಂಟಿ ಸಮಾವೇಶ ನಡೆಯುವ ಹಿನ್ನಲೆ ಜಿಲ್ಲಾಡಳಿತದಿಂದ ಸಂಪೂರ್ಣ ಸಿದ್ಧತೆ ಹಾಗೂ ತಯಾರಿ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆ ವೇದಿಕೆ ಸುತ್ತಮುತ್ತ ಫುಲ್ ಟೈಟ್ ಸೆಕ್ಯೂರಿಟಿ ಮಾಡಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್ ನಿಂದ ತಪಾಸಣೆ ಮಾಡಲಾಗಿದೆ.
undefined
ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ: ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯುತ್ತಿದ್ದು, ಸಮಾವೇಶಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಸಮಾವೇಶದ ಜಾಗ ಹಾಗೂ ವೇದಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿದರು. ನಾಳಿನ ಕಾರ್ಯಕ್ರಮಕ್ಕೆ ಸಾವಿರಾರು ಫಲಾನುಭವಿಗಳು ಬರುವ ಸಾಧ್ಯತೆ ಇದ್ದು, ವೇದಿಕೆ ಸುತ್ತಮುತ್ತ, ಪ್ರವಾಸಿ ಮಂದಿರದಲ್ಲಿ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ. ಗ್ಯಾರಂಟಿ ಸಮಾವೇಶ ನಡೆಯುವ ಸ್ಥಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಚೆಕ್ಕಿಂಗ್ ನಡೆಯುತ್ತಿದ್ದು, ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ಹಾಗೂ ಡಿಸಿ ಮೀನಾ ನಾಗರಾಜ್ ನೇತೃತ್ವದಲ್ಲಿ ತಪಾಸಣೆ ಮಾಡಲಾಗಿದ್ದು ಟೈಟ್ ಸೆಕ್ಯೂರಿಟಿ ಮಾಡಲಾಗಿದೆ.
ವಾಹನ ಸಂಚಾರ ಬಂದ್ , ಮಾರ್ಗ ಬದಲಾವಣೆ: ಸಿ.ಎಂ. ಸಂಚರಿಸುವ ಮಾರ್ಗದಲ್ಲೂ ವಾಹನ ಸಂಚಾರ ಬಂದ್ ಮಾಡಲಾಗಿದ್ದು,ನಾಳೆ ಬೆಳಗ್ಗೆ 6 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ಸಂಚಾರ ಬಂದ್ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್ ಸೇರಿದಂತೆ ಸಾರ್ವಜನಿಕರ ವಾಹನ ಸಂಚಾರಕ್ಕೂ ನಿಷೇಧ ವಿಧಿಸಿದ್ದು, ಆಜಾದ್ ಪಾರ್ಕ್ ಸರ್ಕಲ್, ಕೋಟೆ ಸರ್ಕಲ್, ಎ.ಐ.ಟಿ. ಸರ್ಕಲ್, ಹೆಲಿಪ್ಯಾಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ.
ಬಿಜೆಪಿಯವರು ಭಾವನೆಯ ಮೇಲೆ ರಾಜಕೀಯ ಮಾಡುತ್ತಾರೆ: ಡಿ.ಕೆ.ಶಿವಕುಮಾರ್
ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಸಂಪೂರ್ಣ ತಪಾಸಣೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ನಗರದಲ್ಲಿ ಪೊಲೀಸ್ ಹೈ ಅಲರ್ಟ್ ಘೋಷಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ನಗರಕ್ಕೆ ಆಗಮಿಸುವ ಸಿಎಂ ಸಿದ್ದರಾಮಯ್ಯನವರು ನಗರದ ಲಕ್ಯಾ ಕ್ರಾಸ್ ಬಳಿಯ ಲಕ್ಷ್ಮೀಪುರದಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಬಳಿಕ ಗ್ಯಾರಂಟಿ ಸಮಾವೇಶದಲ್ಲಿ ಪಾಲ್ಗೊಂಡು ಸಂಜೆ 4 ಗಂಟೆ ಬಳಿಕ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.