ಸಚಿವ ಸಂಪುಟದಲ್ಲಿ ಎಲ್ಲಾ ಸಮಾಜಗಳಿಗೂ ಆದ್ಯತೆ ನೀಡಲಾಗಿದೆ. ಸ್ವತಃ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದಾರೆ. ಏಳು ಮಂದಿ ವೀರಶೈವ ಲಿಂಗಾಯತ ಸಚಿವರಿದ್ದಾರೆ. ಸಿದ್ದರಾಮಯ್ಯ ಕುರುಬ ಸಮಾಜದ ಓಲೈಕೆ ಮಾಡುತ್ತಿಲ್ಲ. ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ
ಮೈಸೂರು(ಅ.04): ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ ತಳಹದಿಯ ಮೇಲೆ ಕಾರ್ಯ ನಿರ್ವಹಸುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಆರೋಪವನ್ನು ತಳ್ಳಿಹಾಕಿದ ಸಚಿವರು, ಸಚಿವ ಸಂಪುಟದಲ್ಲಿ ಎಲ್ಲಾ ಸಮಾಜಗಳಿಗೂ ಆದ್ಯತೆ ನೀಡಲಾಗಿದೆ. ಸ್ವತಃ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದಾರೆ. ಏಳು ಮಂದಿ ವೀರಶೈವ ಲಿಂಗಾಯತ ಸಚಿವರಿದ್ದಾರೆ. ಸಿದ್ದರಾಮಯ್ಯ ಕುರುಬ ಸಮಾಜದ ಓಲೈಕೆ ಮಾಡುತ್ತಿಲ್ಲ. ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
undefined
ಇದ್ದದ್ದನ್ನು ಇರುವ ಹಾಗೆ ಹೇಳಿದ್ದೇನೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ರಾಜು ಕಾಗೆ
ಎಲ್ಲರೂ ಒಟ್ಟಾಗಿ ಸೇರಿ ಸರ್ಕಾರ ನಡೆಸಬೇಕು. ಭಾರತವು ಜಾತ್ಯಾತೀತ ರಾಷ್ಟ್ರ. ಇಲ್ಲಿ ಜಾತಿ ಆಧಾರದ ಮೇಲೆ ನಿರ್ಧಾರಗಳು ಆಗುವುದಿಲ್ಲ. ಯಾರೋ ಏನೋ ಹೇಳಿರ್ತಾರೆ ಪೋಸ್ಟ್ ಸಿಕ್ಕಿರಲ್ಲ. ಅದಕ್ಕೆ ಈ ರೀತಿ ಹೇಳುತ್ತಿರುತ್ತಾರೆ. ಸರ್ಕಾರ ಏನನ್ನೂ ಉದ್ದೇಶ ಪೂರ್ವಕವಾಗಿ ಮಾಡುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಇವೆಲ್ಲಾ ಸಾಧ್ಯವೇ ಇಲ್ಲ. ಸರ್ಕಾರದಲ್ಲಿ ಕುರುಬರು, ಒಕ್ಕಲಿಗರು, ಬ್ರಾಹ್ಮಣರು ಸೇರಿದಂತೆ ಎಲ್ಲಾ ಜಾತಿಯವರು ಇರುತ್ತಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಎಲ್ಲಿ ಮಾತನಾಡಬೇಕೊ ಅಲ್ಲಿ ಮಾತನಾಡಿ ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ. ಮಾತನಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋಮುಗಲಭೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿಎಂ ಸಿದ್ದರಾಮಯ್ಯ
ಹಗಲು ಕನಸು
ಸರ್ಕಾರ ಬೀಳುತ್ತದೆ ಎಂಬ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್ ಹಗಲು ಕನಸು ಕಾಣುತ್ತಿದ್ದಾರೆ. 135 ಜನ ಶಾಸಕರು ಇದ್ದಾರೆ, ಯಾಕೆ ಸರ್ಕಾರ ಬೀಳುತ್ತೆ? ಅಂದರೇ ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂಥಾ ಅರ್ಥ ಅಲ್ವಾ? ಜನರ ಆದೇಶದ ಮೇಲೆ ಅವರಿಗೆ ನಂಬಿಕೆ ಇಲ್ಲ. ಹೇಗೆ ಸರ್ಕಾರ ಬೀಳುತ್ತೇ ಅಂಥಾ ಹೇಳುತ್ತಾರೆ? ಆಪರೇಷನ್ ಎಲ್ಲಾ ನಡೆಯುವುದಿಲ್ಲ. ಎಲ್ಲಾ ಅವರೇ ಮಾಡಿಕೊಳ್ಳಬೇಕು, ಇಲ್ಲಿ ಏನೂ ನಡೆಯಲ್ಲ ಎಂದು ತಿರುಗೇಟು ನೀಡಿದರು.
ಸಚಿವರ ಸಮರ್ಥನೆ
ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೇಸ್ ವಾಪಸ್ ಪಡೆಯುವ ವಿಚಾರವನ್ನು ಕ್ಯಾಬಿನೆಟ್ ಸಬ್ ಕಮಿಟಿ ತೀರ್ಮಾನ ಆಗಿದೆ. ಯಾವುದೇ ರಾಜಕೀಯ ಪ್ರೇರಿತ ಕೇಸ್ ಗಳು ಆಗಿವೆ, ಯಾವುದು ಕ್ರಿಮಿನಲ್ ಹಿನ್ನೆಲೆ ಅಟ್ರ್ಯಾಕ್ಟ್ ಮಾಡೊದಲಿಲ್ಲವೋ, ಅಂತಹ ಪ್ರಕರಣಗಳನ್ನು ಪರಿಶೀಲಿಸಲಾಗುತ್ತೆ. ಕ್ಯಾಬಿನೆಟ್ ಸಬ್ ಕಮಿಟಿ ಈ ಬಗ್ಗೆ ವಾಪಸ್ ಪಡೆಯಲು ಶಿಫಾರಸು ನೀಡುತ್ತೇ. ಮೆರಿಟ್ ಮೇಲೆ ಕ್ಯಾಬಿನೆಟ್ ಕಮಿಟಿ ಇದನ್ನು ತೀರ್ಮಾನ ಮಾಡುತ್ತೆ ಎಂದು ಸಚಿವರು ಸಮರ್ಥಿಸಿಕೊಂಡರು.