ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಿಸ್ತು ಮರೆತ ಕಾಂಗ್ರೆಸ್..!

Published : Jan 26, 2019, 05:43 PM ISTUpdated : Jan 26, 2019, 05:54 PM IST
ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಿಸ್ತು ಮರೆತ ಕಾಂಗ್ರೆಸ್..!

ಸಾರಾಂಶ

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಿಸ್ತು ಮರೆತ ಕಾಂಗ್ರೆಸ್..! ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದ ಕಾಂಗ್ರೆಸ್! ಗಣೇಶ್ ಅವರನ್ನ ಪಕ್ಷದಿಂದ ಉಚ್ಚಾಟಿಸಿದೇ ಕೇಲವ ಅಮಾನತ್ತು ಮಾಡಿ ಕಣ್ಣೋರೆಸುವ ತಂತ್ರ! ಅತೃಪ್ತರ ಆಟ ನೋಡ್ತಾ ಕಣ್ಮುಚ್ಚಿ ಕುಳಿತ ಕೈ!

ಬೆಂಗಳುರು, [ಜ.26]: ಕಾಂಗ್ರೆಸ್ ಶಿಸ್ತುಬದ್ಧ ಪಕ್ಷ ಎಂದೇ ಬಿಂಬಿತವಾಗಿದೆ. ಆದ್ರೆ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳು ತನ್ನ ಶಿಸ್ತು ಮರೆತಿದೆ.

ಇದಕ್ಕೆ ಪೂರಕವೆಂಬಂತೆ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಸಾಂಕೇತಿಕವಾಗಿ ಪಕ್ಷದಿಂದ ಅಮಾನತು ಮಾಡಿದ್ದೇನೋ ನಿಜ. ಆದ್ರೆ ಗಣೇಶ್ ಅವರನ್ನ ಪಕ್ಷದಿಂದ ಉಚ್ಚಾಟಿಸಿದೇ ಕೇಲವ ಅಮಾನತ್ತು ಮಾಡಿ ಕಣ್ಣೋರೆಸುವ ತಂತ್ರ ಅನುಸರಿಸಿದೆ.

ರೆಸಾರ್ಟ್‌ ಬಡಿದಾಟ: 6 ದಿನಗಳಾದ್ರೂ ಆನಂದ್ ಸಿಂಗ್‌ ಕಡೆ ತಲೆಹಾಕದ ತನಿಖಾ ಸಮಿತಿ!

ಮತ್ತೊಂದಡೆ ಯಾವುದೇ ಕಾರಣಕ್ಕೂ ಅರೆಸ್ಟ್ ಆಗದಂತೆ ಕಾಂಗ್ರೆಸ್ ನೋಡಿಕೊಳ್ಳಿತ್ತಿದೆ ಎನ್ನುವ ಮಾತುಗಳು ರಾಜ್ಯ ರಾಜಕರಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಆನಂದ ಸಿಂಗ್ ಮತ್ತು ಗಣೇಶ್ ನಡುವೆ ಸಂಧಾನ ಮಾಡಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಡಿ.ಕೆ ಶಿವಕುಮಾರ್ ಗೆ ಜವಾಬ್ದಾರಿ ನೀಡಿದ್ದಾರೆ ಎನ್ನಲಾಗಿದೆ.

ಅತೃಪ್ತರ ಮುಂದೆ ಮಂಡಿಯೂರಿದ ಕೈ

ಹೌದು....ಕಳೆದ ಹಲವು ದಿನಗಳಿಂದ ರಮೇಶ್ ಜಾರಕಿಕೊಳಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಆದರೂ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ರಮೇಶ್ ಜಾರಕಿಜೊಳಿ ಅವರನ್ನು ತಲೆ ಮೇಲೆ ಕೂಡಿಸಿಕೊಂಡಿದೆ.

ಗೈರಾದ ಶಾಸಕರಿಗೆ ಶೋಕಾಸ್ ನೋಟಿಸ್​ ಕೊಟ್ಟ ಕಾಂಗ್ರೆಸ್​:ನೋಟಿಸ್​ನಲ್ಲೇನಿದೆ?

ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ರೆ ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದ್ದ ರಾಹುಲ್, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೆಳಗಿಳಿಸಿ ಖಡಕ್ ಎಚ್ಚರಿಕೆ ನೀಡಿದ್ದರು.

ಇದೀಗ ರಮೇಶ್ ಜಾರಕಿಹೊಳಿ ಗುಂಪುಗಾರಿಕೆ ಜೊತೆಗೆ ಕೈ ಶಾಸಕರ ಕಿತ್ತಾಟ ಬೀದಿಗೆ ಬಂದಿದ್ರೂ  ಕೈ ಪಾಳೆಯ ಕೈ ಕಟ್ಟಿ ಕುಳಿತಿದೆ. ಸಾರ್ವಜನಿಕ ವಲಯದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದ್ರು ಸರ್ಕಾರವನ್ನು ಉಳಿಸಿಕೊಳ್ಳಲು ತನ್ನ ಶಿಸ್ತು ಮರೆಯುತ್ತಿದೆ.

ಒಂದು ವೇಳೆ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಂಡರೆ ಏನಾಗುತ್ತೋ ಎನ್ನುವ ಭಯದಿಂದ ಹಿಂಜರಿಯುತ್ತಿದೆ.  ಇದು ರಮೇಶ್ ಜಾರಕಿಹೊಳಿ ಕಥೆಯಾದ್ರೆ, ನಾಗೇಂದ್ರ ಉಮೇಶ್ ಜಾದವ್ ಮೇಲೂ ಕ್ರಮ ಕೈಗೊಳ್ಳಲು ಸಾಧ್ಯವಾಗ್ತಿಲ್ಲ.

ಬಿಕ್ಕಟ್ಟಿಗೆ ಪರಿಹಾರ ಸೂಚಿಸಿ: ರೆಸಾರ್ಟ್ ಮಾಲೀಕರಿಗೆ ರಾಜ್ಯಪಾಲರ ಮನವಿ?

ಕ್ರಮಕ್ಕೆ ಮುಂದಾದ್ರೆ ಮೈತ್ರಿ ಬಜೆಟ್ ಸೆಷನ್ ನಲ್ಲಿ ಶಾಸಕರು ತಿರತುಗಿಬಿದ್ರೆ ಬಜೆಟ್ ಬಿಲ್ ಪಾಸ್ ಆಗೋದು ಕಷ್ಟವಾಗಲಿದ್ದು, ವಿಧಾನ ಸಭೆಯಲ್ಲಿ ಬಜೆಟ್ ಬಿದ್ದರೆ ಮೈತ್ರಿ ಸರ್ಕಾರವು ಉರುಳಿಹೋಗಲಿದೆ ಎನ್ನುವ ಭಯ ಕಾಂಗ್ರೆಸ್ ಗೆ ಕಾಡುತ್ತಿದೆ.

ಒಟ್ಟಿನಲ್ಲಿ ರಾಜ್ಯ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳು ಕಾಂಗ್ರೆಸ್ ತನ್ನ ಶಿಸ್ತುನ್ನು ಬಲಿ ಕೊಡುತ್ತಿರುವುದಂತೂ ಸತ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರಲ್ಲೇ ಮಾತನಾಡುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ