ಒಂದೆಡೆ ಚಿಕ್ಕಬಳ್ಳಾಪುರ ವಿಧಾನಸಭೆಯ ಉಪ ಚುನಾವಣೆ ಕಣ ರಂಗೇರುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಗೆ ಮೊದಲ ಗೆಲುವು ಸಿಕ್ಕಿದ್ದು, ತಮ್ಮ ಶಕ್ತಿ ಏನು ಎನ್ನುವುದನ್ನು ಕಾಂಗ್ರೆಸ್‌ಗೆ ತೋರಿಸಿದ್ದಾರೆ.
ಚಿಕ್ಕಬಳ್ಳಾಪುರ, (ಅ.23): ಚಿಕ್ಕಬಳ್ಳಾಪುರದಲ್ಲಿ ನಾನೇ ಬಾಸು ಅಂತಾ ಡಾ.ಕೆ.ಸುಧಾಕರ್ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಿದ್ದು, ಸುಧಾಕರ್ ಬೆಂಬಲಿಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಮ್ಮ ಪವರ್ ಏನು ಎಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇಂದು (ಬುಧವಾರ) ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಹಾಗೂ ಸುಧಾಕರ್ ಬೆಂಬಲಿಗ ಚಿಕ್ಕನರಸಿಂಹಯ್ಯ 15 ಮತಗಳನ್ನು ಪಡೆದು ಗೆದ್ದಿದ್ದಾರೆ. ಇನ್ನು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪ್ರಕಾಶ್ 13 ಮತಗಳ ಪಡೆದು ಸೋತಿದ್ದಾರೆ.
ಈ ಚುನಾವಣೆ ಸುಧಾಕರ್ ಹಾಗೂ, ಶಿವಶಂಕರ ರೆಡ್ಡಿಗೆ ಪ್ರತಿಷ್ಠೆಯಾಗಿತ್ತು. ಸುಧಾಕರ್ ಜಿಲ್ಲೆಯಲ್ಲಿ ಮತ್ತೊಮ್ಮೆ ಫವರ್ ಪುಲ್ ಎಂದು ತೋರಿಸಿದ್ದಾರೆ. ಜಿ.ಪಂ. ಅಧ್ಯಕ್ಷ ಸ್ಥಾನ ಕೋಡಿಸೋದಾಗಿ ಪ್ರಕಾಶ್ ಕಣಕ್ಕಿಳಿಸಿದ್ದ ಮಾಜಿ ಸಚಿವ ಎನ್ ಹೆಚ್ ಶಿವಶಂಕರರೆಡ್ಡಿ ಗೆ ಭಾರೀ ಮುಖಭಂಗವಾಗಿದೆ.
ಉಪಕದನಕ್ಕೂ ಮುನ್ನ ಜಿಲ್ಲೆಯಲ್ಲಿ ಸುಧಾಕರ್ ಮೇಲುಗೈ ಸಾಧಿಸಿದ್ದಾರೆ. ಜೆಡಿಎಸ್ 5, ಸಿಪಿಐ(ಎಂ) 1, ಪಕ್ಷೇತರ 01 ರ ಜತೆಗೆ 8 ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಸುಧಾಕರ್ ಬೆಂಬಲಿತ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕನರಸಿಂಹಯ್ಯ ಗೆದ್ದು ಬೀಗಿದ್ದರೆ, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪಿ.ಎನ್.ಪ್ರಕಾಶ್ ಸೋಲು ಕಂಡರು.
ಈ ಮೂಲಕ ಮಾಜಿ ಸಚಿವ ಶಿವಶಂಕರ್ ರೆಡ್ಡಿಗೆ ಮುಖಭಂಗವಾಗಿದ್ದು, ಉಪಚುನಾವಣೆ ಮುನ್ನವೇ ಇದು ಸುಧಾಕರ್ ಗೆ ಮೊದಲು ಗೆಲುವು ಸಿಕ್ಕಂತಾಗಿದೆ.
ಚಿಕ್ಕಬಳ್ಳಾಪುರ ವಿಧಾನಸಭೆಗೆ ಡಿಸೆಂಬರ್ 5 ರಂದು ಉಪಚುನಾವಣೆ ಘೋಷಣೆಯಾಗಿದ್ದು, ಈ ಮೊದಲ ಗೆಲುವು ಬೈ ಎಲೆಕ್ಷನ್ ನಲ್ಲಿ ಸುಧಾಕರ್ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ.