Kodagu: 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿಸಿ ಶಾಸಕ ಬೋಪಯ್ಯ ವಿರುದ್ಧ ಪೊನ್ನಣ್ಣ ಶಕ್ತಿ ಪ್ರದರ್ಶನ!

By Gowthami K  |  First Published Apr 18, 2023, 7:54 PM IST

ಶಾಸಕ ಕೆ.ಜಿ. ಬೋಪಯ್ಯ ವಿರುದ್ಧ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶಿಸಿ ಪ್ರಶ್ನಿಸಿದ ಕಾಂಗ್ರೆಸ್ ಅಭ್ಯರ್ಥಿ ಎ. ಎಸ್ ಪೊನ್ನಣ್ಣ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.18): ವಿರಾಜಪೇಟೆ ಮತ್ತು ಮಡಿಕೇರಿ ಕ್ಷೇತ್ರಗಳ ಅಭ್ಯರ್ಥಿಗಳು ಹೊರಗಿನವರು ಎಂದು ಹೇಳುವ ಶಾಸಕ ಕೆ.ಜಿ. ಬೋಪಯ್ಯ ಎಲ್ಲಿಯವರು, ವಿರಾಜಪೇಟೆಯಲ್ಲಿ ಕೆ.ಜಿ. ಬೋಪಯ್ಯನವರದು ಏನಿದೆ ಹೇಳಲಿ ಎಂದು ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಪ್ರಶ್ನಿಸಿದ್ದಾರೆ. ಮಂಗಳವಾರ ವಿರಾಜಪೇಟೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಬಳಿಕ ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

Tap to resize

Latest Videos

undefined

ಕೆ.ಜಿ. ಬೋಪಯ್ಯ ಅವರು ಕಳೆದ ನಾಲ್ಕು ಬಾರಿಯಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಆದರೆ ವಿರಾಜಪೇಟೆಯಲ್ಲಿ ಕನಿಷ್ಠ ಪಕ್ಷ ಅವರ ಮತವಿದೆ ಎಂದು ಪ್ರಶ್ನಿಸಿದರು. ನಾನು ವಿರಾಜಪೇಟೆಯಲ್ಲಿಯೇ ಹುಟ್ಟಿ ಬೆಳೆದವನು, ಇಂದಿಗೂ ನನ್ನ ಮತ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರಿನ ಮತಗಟ್ಟೆಯಲ್ಲಿ ನನ್ನ ಮತವಿದೆ. ಅಲ್ಲಿಯೇ ನನ್ನ ಪಿತ್ರಾರ್ಜಿತ ಆಸ್ತಿ ಇದೆ. ವಿರಾಜಪೇಟೆಯ ಪಂಜರಪೇಟೆಯಲ್ಲಿ ನನ್ನ ಮನೆ ಇದೆ. ನನ್ನ ತಾತ ಇದೇ ವಿರಾಜಪೇಟೆಯ ಮುನ್ಸಿಪಲ್ ಕೌನ್ಸಿಲ್ನ ಸದಸ್ಯರಾಗಿದ್ದವರು. ಇಷ್ಟೆಲ್ಲಾ ಇರುವ ನಾನು ಹೊರಗಿನವರು, ಹೊಗರಡೆ ಇದ್ದೇನೆ ಎಂದು ಹೇಳುವುದಕ್ಕೆ ಕಾರಣವಿದೆ. ಬೋಪಯ್ಯ ಅವರಿಗೆ ಸೋಲುವ ಭೀತಿ ಶುರುವಾಗಿದೆ. ಹೀಗಾಗಿ ಇಂತಹ ಸಲ್ಲದ ಆರೋಪಗಳನ್ನು ಮಾಡುತ್ತಾರೆ ಎಂದು ತಿರುಗೇಟು ನೀಡಿದರು.

ನನ್ನ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಸದಾ ಜನರ ಸೇವೆಗೆ ಸಿಗುತ್ತೇನೆ ಎಂದರು. ಉಮೇದುವಾರಿಕೆ ಸಲ್ಲಿಸುವುದಕ್ಕೂ ಮುನ್ನಾ ವಿರಾಜಪೇಟೆಯ ಪಂಜರಪೇಟೆಯಿಂದ ಮೆರವಣಿಗೆ ಆರಂಭಿಸಿದ ಪೊನ್ನಣ್ಣ ತಹಶೀಲ್ದಾರ್ ಕಚೇರಿ ವರೆಗೆ ಸಾಗಿದರು. ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಮತ್ತು ಪೊನ್ನಣ್ಣ ಅವರಿಗೆ ಜೈಕಾರ ಹಾಕುತ್ತಿದ್ದರೆ ಇಡೀ ಮಡಿಕೇರಿ ಬಹುತೇಕ ರಸ್ತೆಗಳು ಕಾಂಗ್ರೆಸ್ ಕಾರ್ಯಕರ್ತರಿಂದ ತುಂಬಿದ್ದವು. 12.30 ಕ್ಕೆ ನಾಮಪತ್ರ ಸ್ಲಲಿಕೆಗೆ ಸಮಯ ನೀಡಲಾಗಿತ್ತು. ಆದರೆ ಕಾರ್ಯಕರ್ತರಿಂದ ರಸ್ತೆಗಳು ತುಂಬಿ ಪೊನ್ನಣ್ಣ ಅವರೇ ಇದ್ದ ವಾಹನ ಕೂಡ ಮುಂದೆ ಹೋಗಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಯಿತು.

ಕೊನೆಗೆ ಸಾಕಷ್ಟು ಕಾರ್ಯಕರ್ತರು ವಾಹನ ಮುಂದೆ ಹೋಗಲು ಹರಸಾಹಸಪಟ್ಟು ದಾರಿ ಮಾಡಿಕೊಟ್ಟರು. ಕೊನೆಗೆ ಪೊನ್ನಣ್ಣ ನಾಮಪತ್ರ ಸಲ್ಲಿಸಿದರು.
ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ ಬಳಿಕ ವಿರಾಜಪೇಟೆ ಪಟ್ಟಣದ ಸಿರಿನಿಟಿ ಹಾಲ್ ನಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲೂ ಮಾತನಾಡಿದ ಎ. ಎಸ್ ಪೊನ್ನಣ್ಣ ಮತ್ತೆ ಶಾಸಕ ಕೆ.ಜಿ ಬೋಪಯ್ಯ ವಿರುದ್ಧ ತಿರುಗಿ ಬಿದ್ದರು. ನಾನು ತಾಯಿ ಕಾವೇರಮ್ಮನ ಭಕ್ತ, ಈ ನಾಡಿನ ಮಣ್ಣಿನ ಮಗ ನಾನು, ನನ್ನ ಭಕ್ತಿ, ನನ್ನ ನಂಬಿಕೆಯನ್ನು ಪ್ರಶ್ನೆ ಮಾಡಲು ಹೋಗಬೇಡಿ, ನಾನು ಮತದಾನ ಮಾಡುವ ಮತಕೇಂದ್ರವೂ ಬೆಳ್ಳೂರಿನಲ್ಲಿದೆ. ಆದರೇ ನೀವು ಎಲ್ಲಿಯ ಮತದಾರರು..? ಎಲ್ಲಿ ಮತದಾನ ಮಾಡುತ್ತೀರಿ…? ಆದ್ದರಿಂದ ಇದೆಲ್ಲವನ್ನೂ ಪ್ರಶ್ನೆ ಮಾಡುವ ಬದಲಿಗೆ ನೀವೇನೂ ಅಭಿವೃದ್ಧಿ ಕಾರ್ಯ ಮಾಡಿದ್ದೀರಾ ಆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಆಗ್ರಹಿಸಿದರು.

ಅಫಜಲಪುರದಲ್ಲಿ ಸಂಧಾನ ವಿಫಲ: ಸಹೋದರರ ಕಾಳಗ, ನಾನೇ ಗೆಲ್ಲಲಿ ಆಶೀರ್ವದಿಸೆಂದು

 ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ರಾಜಕೀಯ ಹಿನ್ನೆಲೆ ಇರದ ಪಕ್ಷೇತರರು ಹುಟ್ಟಿಕೊಳ್ಳುತ್ತಿದ್ದಾರೆ ಇದೆಲ್ಲಾ  ಯಾರ ಕುತಂತ್ರ ಎಂಬುದು ಬಹಿರಂಗ ಸತ್ಯ. ಅಭಿವೃದ್ಧಿಯ ಕುರಿತು ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದವರಿಗೆ ಮತದಾನದ ಮೂಲಕ ಮತದಾರರು ಉತ್ತರ ನೀಡಬೇಕಿದೆ ಎಂದರು. ಬಡವರ, ದಲಿತರ ಏಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದರು.

ಯಾದಗಿರಿಯಲ್ಲಿ ಜೋರಾದ ನಾಮಿನೇಷನ್ ಭರಾಟೆ, ಒಟ್ಟು 22 ನಾಮಪತ್ರ ಸಲ್ಲಿಕೆ!

ತಳಸಮುದಾಯದವರ ಉನ್ನತ ಶಿಕ್ಷಣದ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ತಳಸಮುದಾಯದವರು ಉಳಿಯಬೇಕು, ಅಭಿವೃದ್ದಿ ಹೊಂದಬೇಕಿದ್ದರೇ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಮುಖಂಡ ಇಂದೂಧರ ಹೊನ್ನಾಪುರ ಹೇಳಿದರು. ಕಾಂಗ್ರೆಸ್ ನ ಪರಿಶಿಷ್ಟ ಜಾತಿ ಪಂಗಡ ಘಟಕದ ಜಿಲ್ಲಾಧ್ಯಕ್ಷ ಬಿ.ಇ.ಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶ ನಡೆಯಿತು.

click me!