ಭಾರತ್ ಜೋಡೋ ಯಾತ್ರೆ ನಂತರ ಮುಂದೇನು? ಕಾಂಗ್ರೆಸ್‌ನ ಮೆಘಾ ಪ್ಲಾನ್ ಬಹಿರಂಗ!

By Suvarna News  |  First Published Dec 4, 2022, 3:50 PM IST

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜಸ್ಥಾನದಲ್ಲಿ ಸಂಚರಿಸುತ್ತಿದೆ. ಈ ಯಾತ್ರೆ ಕನ್ಯಾಕುಮಾರಿಯಲ್ಲಿ ಅಂತ್ಯವಾಗಲಿದೆ. ಈ ಯಾತ್ರೆ ಬಳಿಕ ಮುಂದೇನು ಅನ್ನೋ ಪ್ರಶ್ನೆಗೆ ಕಾಂಗ್ರೆಸ್ ಮಹತ್ವದ ಸಭೆ ನಡೆಸಿದೆ. ಭಾರತ್ ಜೋಡೋ ಯಾತ್ರೆ ಬಳಿಕ ಮತ್ತೊಂದು ಹೊಸ ಯಾತ್ರೆಗೆ ಕಾಂಗ್ರೆಸ್ ಸಜ್ಜಾಗಿದೆ.


ನವದೆಹಲಿ(ಡಿ.04); ಭಾರತ ಒಗ್ಗೂಡಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ. ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆ, ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಚರಿಸಿದೆ. ಸದ್ಯ ರಾಜಸ್ಥಾನದಲ್ಲಿ ಶಕ್ತಿ ಪ್ರದರ್ಶನ ನಡೆಸುತ್ತಿದೆ. ಈ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಫೆಬ್ರವರಿ ವೇಳೆಗೆ ಬರೋಬ್ಬರಿ 3,570 ಕಿಲೋಮೀಟರ್ ಸಂಚರಿಸಿ ಕಣಿವೆ ರಾಜ್ಯದಲ್ಲಿ ಅಂತ್ಯಗೊಳ್ಳಲಿದೆ. ಈ ಯಾತ್ರೆ ಬಳಿಕ ಮುಂದೇನು ಅನ್ನೋ ಪ್ರಶ್ನೆಗೆ ಇದೀಗ ಕಾಂಗ್ರೆಸ್ ಮಹತ್ವದ ಸಭೆ ನಡೆಸಿದೆ. ಬಳಿಕ ಭಾರತ್ ಜೋಡೋ ಯಾತ್ರೆಗೆ ಸಿಕ್ಕಿರುವ ಜನಸ್ಪಂದನೆ ಆಧರಿಸಿ ಇದೀಗ ಹಾಥ್ ಸೇ ಹಾಥ್ ಜೋಡೋ ಅಭಿಯಾನ ಆರಂಭಿಸಲು ಮುಂದಾಗಿದೆ. 

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ರಚಿಸಿರುವ ಹೊಸ ಸ್ಟೀರಿಂಗ್ ಕಮಿಟಿ ಈ ಕುರಿತು ಸಭೆ ಸೇರಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಿಂದ ನಡೆಯುತ್ತಿರುವ ಭಾರತ್ ಜೊಡೋ ಯಾತ್ರೆ ಇದೀಗ ಅಂತಿಮ ಹಂತಕ್ಕೆ ತಲುಪುತ್ತಿದೆ. ಈ ಯಾತ್ರೆ ಬಳಿಕ ಮುಂದೇನು ಅನ್ನೋ ಪ್ರಶ್ನೆಗೆ ಹೊಸ ಸಮಿತಿ ಉತ್ತರ ನೀಡಿದೆ. 

Tap to resize

Latest Videos

‘ಭಾರತ್‌ ಜೋಡೋ’ ಬಳಿಕ ಮತ್ತೆ ಕರ್ನಾಟಕಕ್ಕೆ ರಾಹುಲ್‌ ಗಾಂಧಿ

ಜನವರಿ 26 ರಿಂದ ಹಾಥ್ ಸೇ ಹಾಥ್ ಜೋಡೋ ಅಭಿಯಾನ ಕಾಂಗ್ರೆಸ್ ಆರಂಭಿಸುತ್ತಿದೆ. ಇದು ಬ್ಲಾಕ್ ಲೆವೆಲ್ ಪಾದಯಾತ್ರೆಯಾಗಿದ್ದು, ಬೂಥ್ ಮಟ್ಟದಲ್ಲಿ ಕಾರ್ಯಕರ್ತರನ್ನೊಳಗೊಂಡ ಯಾತ್ರೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಯಾತ್ರೆ 2 ತಿಂಗಳ ಕಾಲ ನಡೆಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಹಾಥ್ ಸೇ ಹಾಥ್ ಜೋಡೋ ಅಭಿಯಾನ ಯಾವ ಜಿಲ್ಲೆಗಳಲ್ಲಿ ನಡೆಯಲಿದೆ? ದಿನಾಂಕ, ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ ಅನ್ನೋ ರೂಪುರೇಶೆ ಶೀಘ್ರದಲ್ಲೇ ಕಾಂಗ್ರೆಸ್ ಬಹಿರಂಗಪಡಿಸಲಿದೆ. ಈ ಮೂಲಕ ಮತ್ತೊಂದು ಮೆಘಾ ಯಾತ್ರೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಮುಂಬರುವ ಕರ್ನಾಟಕ  ವಿಧಾನಸಾಭಾ ಸೇರಿದಂತೆ ಹಲವು ವಿಧಾನಸಭಾ ಚುನಾವಣೆ ಹಾಗೂ 2023ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬೂಥ್ ಮಟ್ಟದಲ್ಲಿ ಕಾಂಗ್ರೆಸ್ ಬಲಪಡಿಸಲು ಕಾಂಗ್ರೆಸ್ ಈ ಹೋರಾಟಕ್ಕೆ ಮುಂದಾಗಿದೆ. 

ಎದುರಾಳಿಗಳ ಹಿಮ್ಮೆಟ್ಟಿಸೋಕೆ ರಾಹುಲ್ ಬಳಿ ಭರ್ಜರಿ ಅಸ್ತ್ರ..!

ಭಾರತ್ ಜೋಡೋ ಯಾತ್ರೆ ಈಗಾಗಲೇ 2,500 ಕಿಲೋಮೀಟರ್ ಸಂಚರಿಸಿದೆ. 7 ರಾಜ್ಯಗಳಲ್ಲಿ ಯಾತ್ರೆ ಸಂಚರಿಸಿದೆ. ಇನ್ನು 1,000 ಕಿಲೋಮೀಟರ್ ಯಾತ್ರೆ ಬಾಕಿ ಇದೆ. ರಾಜಸ್ಥಾನದ ಬಳಿಕ ಉತ್ತರ, ಪ್ರದೇಶ, ಹರ್ಯಾಣ, ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಯಾತ್ರೆ ಸಂಚರಿಸಲಿದೆ. 

ಬಿಜೆಪಿ ಸೀತೆಯನ್ನು ಪೂಜಿಸಲ್ಲ: ರಾಹುಲ್‌ ವಿವಾದ
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ‘ಜೈ ಶ್ರೀರಾಮ್‌’ ಎಂದಯ ಘೋಷಣೆ ಕೂಗುತ್ತಾರೆ. ಅದರೆ ಅವರು ‘ಜೈ ಸಿಯಾ ರಾಮ್‌’ (ಜೈ ಸೀತಾ ರಾಮ್‌) ಹೆಳುವುದಿಲ್ಲ ಏಕೆಂದರೆ ಅವರು ಸೀತೆಯನ್ನು ಪೂಜಿಸುವುದಿಲ್ಲ ಎಂದು ಹೇಳಿಕೆ ನೀಡಿದ ರಾಹುಲ್‌ ಗಾಂಧಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಭಾರತ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಮಧ್ಯಪ್ರದೇಶದ ಅಗರ್‌ ಮಾಲ್ವಾದಲ್ಲಿ, ‘ಜೈ ಸೀತಾ ರಾಮ್‌ ಎಂದರೆ ಸೀತೆ ಹಾಗೂ ರಾಮ ಇಬ್ಬರೂ ಒಂದೇ ಎಂದಾಗಿದೆ. ಆದರೆ ಅವರು (ಆರ್‌ಎಸ್‌ಎಸ್‌) ಜೈ ಸೀತಾ ರಾಮ್‌ ಎನ್ನುವುದಿಲ್ಲ ಏಕೆಂದರೆ ಅಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಅವರು ಸೀತಾಳನ್ನು ಹೊರಗಿಟ್ಟಿದ್ದಾರೆ’ ಎಂದು ಹೇಳಿದರು. ‘ನಾನು ಆರ್‌ಎಸ್‌ಎಸ್‌ ಮಿತ್ರರಿಗೆ ಹೀಗೆ ಸೀತಾ ಜೀ ಅವರನ್ನು ಅವಮಾನಿಸಬೇಡಿ, ಜೈ ಸೀತಾ ರಾಮ್‌ ಎಂದು ಜಪಿಸಿ ಎಂದು ಕೋರಿಕೊಳ್ಳುತ್ತೇನೆ’ ಎಂದು ಕೋರಿದರು. ರಾಹುಲ್‌ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಿಜೆಪಿ ನಾಯಕರು ಆಕ್ಷೇಪಿಸಿದ್ದಾರೆ.
 

click me!