
ಬೆಂಗಳೂರು, (ಮಾ.02): ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆಯ ಸಿ.ಡಿ. ಬಿಡುಗಡೆಯಾಗಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಸಿ.ಡಿ. ಬಿಡುಗಡೆ ಮಾಡಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಯುವತಿಯೊಂದಿಗೆ ಅಶ್ಲೀಲವಾಗಿ ಕಾಣಿಸಿಕೊಂಡಿರುವ ವಿಡಿಯೋ ಇದಾಗಿದ್ದು,ರಾಜ್ಯ ರಾಜಕಾರಣದಲ್ಲಿ ಈ ಸಿ.ಡಿ. ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆಯಿದೆ.
ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ CD ರಿಲೀಸ್: ಸಾಹುಕಾರನ ಕಾಮದಾಟ ಬಯಲು
ಸಂದಿಗ್ಧತೆಗೆ ಸಿಲುಕಿ ಬಿಎಸ್‌ವೈ
ಹೌದು....ತಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಪಡೆಯುವ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದ್ದಾರೆ.
ಇದೇ ಮಾರ್ಚ್5ರಿಂದ ಆರಂಭವಾಗಿ ಬಜೆಟ್ ಅಧಿವೇಶನದಲ್ಲಿ ಮಿತ್ರ ಮಂಡಳಿ ಸಚಿವರು ಮುಜುಗರ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಪಡೆಯುವ ಸಾಧ್ಯತೆಗಳಿವೆ. ಇಲ್ಲ ಅಷ್ಟರೊಳಗೆ ಪಕ್ಷದ ಸೂಚನೆ ಬರುವ ಮುನ್ನವೇ ರಾಜೀನಾಮೆ ನೀಡಲು ಜಾರಕಿಹೊಳಿ ಮುಂದಾಗಬಹುದು.
ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ CD ರಿಲೀಸ್ ಮಾಡಿದ್ದು ಇವರೇ...!
ಸಚಿವ ರಾಜೀನಾಮೆ ನೀಡಿದ್ರೆ ಆಗುವ ಪರಿಣಾಮಗಳು -
- ಜಾರಕಿಹೊಳಿ ರಾಜೀನಾಮೆ ನೀಡಿದ್ರೆ ಮಿತ್ರಮಂಡಳಿಯಲ್ಲಿ ಆತಂಕ ಸೃಷ್ಟಿಯಾಗುವ ಸಾಧ್ಯತೆ...
- ರಾಜೀನಾಮೆ ನೀಡಿದರೆ ಮಿತ್ರಮಂಡಳಿ ಲೀಡ್ ಮಾಡುವ ನಾಯಕತ್ವದ ಕೊರತೆ...
- ಅಧಿವೇಶನದಲ್ಲಿ ಮಿತ್ರ ಮಂಡಳಿ ಸಚಿವರು ಮುಜುಗರ ಎದುರಿಸಬೇಕಾದ ಸಾಧ್ಯತೆ...
- ಸಿಡಿ ವಿಚಾರ ಪ್ರಸ್ತಾಪ ಆಗೊದ್ರಿಂದ ಅಧಿವೇಶನದ ಮೊದಲೆರಡು ದಿನಗಳು ಬಲಿಯಾಗುವುದು ಗ್ಯಾರಂಟಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.