ಬಿಜೆಪಿ ಸರ್ಕಾರಕ್ಕೆ ವರ್ಷ: ಶಾಸಕರಿಗೆ ಭರ್ಜರಿ ಗಿಫ್ಟ್‌ ನೀಡಿದ ಸಿಎಂ ಯಡಿಯೂರಪ್ಪ

By Suvarna News  |  First Published Jul 27, 2020, 1:56 PM IST

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ| 24 ಶಾಸಕರನ್ನ ನಿಗಮ/ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿದ ಸಿಎಂ ಯಡಿಯೂರಪ್ಪ|


ಬೆಂಗಳೂರು(ಜು.27):  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಂದು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 24 ಶಾಸಕರಿಗೆ ಭರ್ಜರಿ ಕೊಡುಗೆಯನ್ನ ನೀಡಿದ್ದಾರೆ. ಹೌದು, ಸರ್ಕಾರ ಒಂದು ವರ್ಷದ ಪೂರೈಸಿದ ಸುಸಂದರ್ಭದಲ್ಲಿ 24 ಶಾಸಕರನ್ನ ನಿಗಮ/ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿ ಸಿಎಂ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ. 

"

Latest Videos

undefined

ಇತ್ತೀಚೆಗಷ್ಟೆ ಉಪಚುನಾವಣೆಯಲ್ಲಿ ಪರಾಭವ ಹೊಂದಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್‌ ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ. ಪಿ.ಯೋಗೇಶ್ವರ್‌ ಅವರನ್ನ ವಿಧಾನ ಪರಿಷತ್‌ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.  ಹೀಗಾಗಿ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಳ್ಳುವ ಮುನ್ನವೇ ಸಿಎಂ ಯಡಿಯೂರಪ್ಪ ಎಲ್ಲರಿಗೂ ಸಮಾಧಾನ ಪಡಿಸುವ ನಿಟ್ಟಿನಲ್ಲಿ 24 ಶಾಸಕರಿಗೆ ನಿಗಮ/ಮಂಡಳಿಗಳ ಅಧ್ಯಕ್ಷರ ಸ್ಥಾನಗಳನ್ನ ಹಂಚಿಕೆ ಮಾಡಿದ್ದಾರೆ. 

1 ವರ್ಷ ಪೂರೈಸಿದ ಬೆನ್ನಲ್ಲೇ ಸಂಪುಟಕ್ಕೆ ಸಣ್ಣ ಸರ್ಜರಿ: ಮೂರ್ನಾಲ್ಕು ಸಚಿವರಿಗೆ ಕೊಕ್..?

ಯಾವ ಶಾಸಕರಿಗೆ ಯಾವ ನಿಗಮ/ ಮಂಡಳಿ ಸ್ಥಾನಗಳು ಸಿಕ್ಕಿವೆ ಎಂಬುದರ ಪಟ್ಟಿ ಈ ಕೆಳಗಿನಂತಿದೆ. 

1.ಅರಗ ಜ್ಞಾನೇಂದ್ರ - ಗೃಹ ಮಂಡಳಿ
2.ಎಂ ಚಂದ್ರಪ್ಪ - ಕೆಎಸ್‌ಆರ್‌ಟಿಸಿ
3.ನರಸಿಂಹ ನಾಯಕ(ರಾಜೂಗೌಡ) - ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
4.ಎಂಪಿ ಕುಮಾರಸ್ವಾಮಿ - ಕರ್ನಾಟಕ ಮಾರುಕಟ್ಟೆ ಸಲಹೆಗಾರ ಮತ್ತು ಏಜೆನ್ಸಿ ಲಿಮಿಟೆಡ್
5. ಎ ಎಸ್ ಪಾಟೀಲ್(ನಡಹಳ್ಳಿ) - ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಉಮಿತ
6.ಹೆಚ್ ಹಾಲಪ್ಪ - ಎಂ ಎಸ್ ಐ ಎಲ್
7.ಮಾಡಳು ವಿರುಪಾಕ್ಷಪ್ಪ - ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
8. ಜಿ. ಎಚ್. ತಿಪ್ಪಾರೆಡ್ಡಿ- ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
9.ಶಿವನಗೌಡ ನಾಯಕ - ರಸ್ತೆ ಅಭಿವೃದ್ಧಿ ನಿಗಮ
10. ಕಳಕಪ್ಪ ಬಂಡಿ - ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
11. ಪರಣ್ಣ ಮುನವಳ್ಳಿ - ರಾಜ್ಯ ಹಣಕಾಸು ಸಂಸ್ಥೆ
12. ಸಿದ್ದು ಸವದಿ - ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ
13. ಪ್ರೀತಂಗೌಡ - ಜಂಗಲ್ ಲಾಡ್ಜ್ ರೇಸಾರ್ಟ್
14. ರಾಜಕುಮಾರ ತೆಲ್ಕೂರು - ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
15. ದತ್ತಾತ್ರೇಯ ಚಂದ್ರಶೇಖರ್‌ ಪಾಟೀಲ್ ರೇವೂರ್‌- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
16. ಶಂಕರ್ ಪಾಟೀಲ್ ಮುನೇನಕೊಪ್ಪ- ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ
17. ಹೆಚ್. ನಾಗೇಶ್‌- ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿನ ನಿಗಮ
18.ಎಸ್‌.ವಿ. ರಾಮಚಂದ್ರ- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ 
19. ನೆಹರು ಓಲೆಕಾರ್ - ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
20. ಐಹೊಳೆ ಧುರ್ಯೊಧನ  - ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ
21. ಲಾಲಾಜಿ ಮೆಂಡನ್ - ರಾಜ್ಯ ಹಿಂದುಳಿದ ವರ್ಗಗಳ ಆಯೋಗ
22. ಬಸವರಾಜ್ ದಡೆಸೂಗುರು - ರಾಜ್ಯ ಸಮಾಜಕಲ್ಯಾಣ ಮಂಡಳಿ
23. ಎಸ್ ಶಿವರಾಜ್ ಪಾಟೀಲ್ - ರಾಜ್ಯ ಜೈವಿಕ  ಇಂಧನ ಅಭಿವೃದ್ಧಿ ಮಂಡಳಿ
24. ಸಿ ಎಸ್ ನಿರಂಜನಕುಮಾರ್ - ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ

click me!