* ಸಚಿವ ಸಿಪಿ ಯೋಗೇಶ್ವರ್‌ಗೆ ಜಿಲ್ಲಾ ಉಸ್ತುವಾರಿ ನೀಡಲು ಸಿಎಂ ನಿರ್ಧಾರ
* ಬಹಿರಂಗವಾಗಿಯೇ ಘೋಷಣೆ ಮಾಡಿದ ಸಿಎಂ ಬಿಎಸ್‌ವೈ
* ವಿಧಾನಪರಿಷತ್ ಮೂಲಕ ಅರಣ್ಯ ಸಚಿವರಾಗಿರುವ ಸಿ.ಪಿ.ಯೋಗೇಶ್ವರ್
ಬೆಂಗಳೂರು, (ಜೂನ್.23): ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿ.ಪಿ. ಯೋಗೇಶ್ವರ್ ಅವರ ಶ್ರಮ ಕೂಡ ಇದೆ. ಈ ಹಿನ್ನಲೆಯಲ್ಲಿಅವರನ್ನ ವಿಧಾನಪರಿಷತ್ ಮೂಲಕ ಸಚಿವರನ್ನಾಗಿ ಮಾಡಲಾಗಿದೆ. ಆದ್ರೆ, ಅವರಿಗೆ ಇದರುವರೆಗೂ ಜಿಲ್ಲಾ ಉಸ್ತುವಾರಿ ಕೊಟ್ಟಿಲ್ಲ. ಇದರಿಂದ ಗರಂ ಆಗಿರುವ ಸಿ.ಪಿ.ಯೋಗೇಶ್ವರ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.
ಇದೀಗ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಸಿ.ಪಿ.ಯೋಗೇಶ್ವರ್‌ಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಕೊಡಲು ನಿರ್ಧರಿಸಲಾಗಿದೆ ಎಂದು ಘೋಷಿಸಿರುವುದು ಅಚ್ಚರಿ ಮೂಡಿಸಿದೆ.
undefined
ಸಿಗದ ರಾಮನಗರ ಜಿಲ್ಲಾ ಉಸ್ತುವಾರಿ: ಯೋಗೇಶ್ವರ್ ಹೈಕಮಾಂಡ್ ಭೇಟಿ
ಹೌದು..ಸಚಿವ ಎಂಟಿಬಿ ನಾಗರಾಜ್ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಿಎಂ, ಕೋಲಾರ ಜಿಲ್ಲೆಯ ಉಸ್ತುವಾರಿ ಹುದ್ದೆ ಖಾಲಿ ಇದ್ದು, ಅದನ್ನು ಸಚಿವ ಸಿ.ಪಿ.ಯೋಗೇಶ್ವರ್‌ಗೆ ನೀಡಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಂದಾಯ ಸಚಿವ ಮತ್ತು ಇಷ್ಟು ದಿನಗಳ ಕಾಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಹೊಂದಿದ್ದ ಆರ್.ಅಶೋಕ್ರ ಅಪೇಕ್ಷೆಯಂತೆ ಎಂಟಿಬಿ ನಾಗರಾಜ್ ಅವರಿಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಲಾಗಿದೆ. ಈಗ ಕೋಲಾರ ಜಿಲ್ಲೆ ಖಾಲಿ ಇದ್ದು, ಈ ಹುದ್ದೆಯನ್ನು ಸಿ.ಪಿ.ಯೋಗೇಶ್ವರ್ ಅವರಿಗೆ ವಹಿಸುತ್ತೇವೆ ಎಂದು ಎಂದು ಹೇಳಿದರು.
ಸಿ.ಪಿ,ಯೋಗೇಶ್ವರ್ ಅವರು ತಮ್ಮ ರಾಮನಗರ ಜಿಲ್ಲೆ ಮೇಲೆ ಕಣ್ಣಿಟ್ಟಿದ್ದು, ಅದನ್ನು ಈಗಾಗಲೇ ಡಾ ಸಿಎನ್. ಅಶ್ವತ್ಥ್ ನಾರಾಯಣ ಅವರಿಗೆ ನೀಡಲಾಗಿದೆ. ಇದೀಗ ಯೋಗೇಶ್ವರ್‌ಗೆ ಕೋಲಾರ್ ಜಿಲ್ಲೆ ಆಫರ್ ಬಂದಿದ್ದು, ಅದನ್ನು ಅವರು ಸ್ವೀಕರಿಸುತ್ತಾರೋ ಅಥವಾ ನಿರಾಕರಿಸುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.