ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಇಸ್ಲಾಂ ಧಾರ್ಮಿಕ ಮುಖಂಡರ ಜೊತೆ ಮಾತನಾಡಿ, ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ವಾಪಸ್ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಬಿಜೆಪಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲೇ ವಕ್ಫ್ ಆಸ್ತಿ ತೆರವು ಮಾಡಲು ಮೊದಲು ರೈತರಿಗೆ ನೋಟಿಸ್ ನೀಡಿದ್ದೇ ಬಿಜೆಪಿಯವರು: ಮುಖಮಂತ್ರಿ ಸಿದ್ದರಾಮಯ್ಯ
ಹಾಸನ(ಡಿ.06): ರಾಜಕೀಯ ದುರುದ್ದೇಶದಿಂದಲೇ ವಕ್ಫ್ ವಿರುದ್ದ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ಮುಖಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬೂವನಹಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಇಸ್ಲಾಂ ಧಾರ್ಮಿಕ ಮುಖಂಡರ ಜೊತೆ ಮಾತನಾಡಿ, ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ವಾಪಸ್ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಬಿಜೆಪಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲೇ ವಕ್ಫ್ ಆಸ್ತಿ ತೆರವು ಮಾಡಲು ಮೊದಲು ರೈತರಿಗೆ ನೋಟಿಸ್ ನೀಡಿದ್ದೇ ಬಿಜೆಪಿಯವರು. ಅವರ ಕಾಲದಲ್ಲೇ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ. ಆದರೆ ಈಗ ಅದರ ಬಗ್ಗೆ ಅವರು ಮಾತನಾಡುವುದೇ ಇಲ್ಲ. 2014ರಲ್ಲಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದರು. ಯಾರೆಲ್ಲಾ ಅತಿಕ್ರಮಣ ಮಾಡಿದ್ದಾರೋ ಅದೆಲ್ಲವನ್ನೂ ತೆರವುಗೊಳಿಸುತ್ತೇವೆ ಎಂದಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವಕ್ಫ್ ಆಸ್ತಿ ತೆರವು ಮಾಡುವುದಾಗಿ ಅವರೇ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈಗ ಹೋರಾಟ ಮಾಡುತ್ತಿರುವುದುಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ರೈತರ ಕಣ್ಣೀರು ಹಾಕಿಸೋ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ತಟ್ಟುತ್ತೆ: ವಿಜಯೇಂದ್ರ
ಯಾರೇ ಆದರೂ ರಾಜಕೀಯಕ್ಕಾಗಿ ಇಬ್ಬಂದಿತನ ತೋರುತ್ತಿದ್ದಾರೆ. ಅಧಿವೇಶನ ಮುಂದಿಟ್ಟುಕೊಂಡು ಸದನದಲ್ಲಿ ಮಾತನಾ ಡಲು ಯಾವುದೇ ವಿಚಾರಗಳಿಲ್ಲ, ಇದೇ ಕಾರ ಣಕ್ಕೆ ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ಮೂರು ಉಪ ಚುನಾವಣೆಗಳಲ್ಲಿ ಗೆದಿದ್ದೇವೆ, ಅವರು ಈ ಹಿಂದೆ ಗೆದ್ದಿದ್ದ ಎರಡು ಕ್ಷೇತ್ರಗಳು ನಮ್ಮ ವಶವಾಗಿವೆ. 25 ವರ್ಷಗಳ ಬಳಿಕ ಶಿಗ್ಗಾಂವಿಯಲ್ಲಿ ಗೆದ್ದಿದ್ದೇವೆ ಜೊತೆಗೆ ಚನ್ನ ಪಟ್ಟಣದಲ್ಲೂ ಗೆದಿದ್ದೇವೇ ಹಾಗಾಗಿ ಈಗ ಬಿಜೆಪಿಯವರು ರಾಜಕೀಯ ನಾಟಕ ಪ್ರಾರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೇನು ಚಳಿಗಾಲದ ಅಧಿವೇಶನ ಆರಂಭ ಆಗುತ್ತಿದೆ. ಅಲ್ಲಿ ಮಾತನಾಡಲು ಅವರಿಗೆ ವಿಷಯಗಳಿಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ನಾವು ಮೂರನ್ನೂ ಗೆದ್ದಿದ್ದೇವೆ. 25 ವರ್ಷಗಳ ನಂತರ ಶಿಗ್ಗಾಂವಿಯಲ್ಲಿ ಜಯ ಸಾಧಿಸಿದ್ದೇವೆ. ಚನ್ನಪಟ್ಟಣದಲ್ಲೂಗೆದ್ದಿದ್ದೇವೆ. ಇದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅವರು ರಾಜಕೀಯ ನಾಟಕ ಶುರು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತರರು ಇದ್ದರು.
ದೇವೇಗೌಡ್ರು ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ: ಸಿದ್ದು ಗುಡುಗು
ಹಾಸನ: ಸಿದ್ದರಾಮಯ್ಯನನ್ನು ಡಿಸಿಎಂ ಮಾಡಿ ರಾಜಕೀಯವಾಗಿ ಬೆಳೆಸಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳುತ್ತಾ ಬಂದಿದ್ದಾರೆ. ಆದರೆ, ನಾನು ಹಾಗೂ ಜಾಲಪ್ಪ ಬೆನ್ನಿಗೆ ನಿಲ್ಲದಿದ್ದರೆ ರಾಮಕೃಷ್ಣ ಹೆಗಡೆ ಅವರ ಪೈಪೋಟಿ ಎದುರಿಸಿ ದೇವೇಗೌಡ ಅವರು ಸಿಎಂ ಆಗುತ್ತಿರಲಿಲ್ಲ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೇ ನಾವು! ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಲದ ಗುರು ಎಂದೇ ಬಿಂಬಿತರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ. ದೇವೇಗೌಡ ಅವರೇ ರಾಜಕೀಯ ಕಾಲ ಮುಗಿಯಿತು ಎಂದು ಅಬ್ಬರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಲು ಸತೀಶ ಜಾರಕಿಹೊಳಿ ಸಮರ್ಥರಿದ್ದಾರೆ: ಸಚಿವ ಜಮೀರ್ ಅಹ್ಮದ್
ಕೆಪಿಸಿಸಿ ಮತ್ತು ಸ್ವಾಭಿಮಾನಿ ಸಂಘಟನೆ ಜಂಟಿಯಾಗಿ ಹಾಸನದಲ್ಲಿ ಆಯೋಜಿಸಿದ್ದ ಜನ ಕಲ್ಯಾಣ ಸಮಾವೇಶ ಅಕ್ಷರಶಃ ಸಿದ್ದರಾಮೋತ್ಸವವಾಗಿ ಪರಿವರ್ತಿತವಾದರೆ, ಈ ಉತ್ಸವದಲ್ಲಿ ಸಿದ್ದರಾಮಯ್ಯ ಎಚ್.ಡಿ.ದೇವೇಗೌಡ, ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್‌ನ ಭದ್ರಕೋಟೆ ಹಾಸನದಲ್ಲಿ ನಿಂತು ದೇವೇಗೌಡರನ್ನೇ ಕೇಂದ್ರವಾಗಿಸಿ ವಾಕ್ ಪ್ರಹಾರ ಮಾಡಿದ ಸಿಎಂ, ದೇವೇಗೌಡ ಅವರು ನನ್ನನ್ನು ಬೆಳೆಸಿದೆ ಎನ್ನುತ್ತಾರೆ. ನನ್ನನ್ನು ಬಿಡಿ ಅವರು ಖುದ್ದು ಒಕ್ಕಲಿಗ ನಾಯಕರನ್ನೇ ಬೆಳೆಸಲಿಲ್ಲ ಎಂದರು.