ಹಣೆಗೆ ತಿಲಕ ಹಾಕಿಸಿಕೊಳ್ಳಲು ಸಿದ್ದರಾಮಯ್ಯ ನಕಾರ: ಹೊಸ ವಿವಾದದಲ್ಲಿ ಸಿಎಂ!

By Kannadaprabha News  |  First Published Sep 18, 2023, 4:45 AM IST

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆ (ಸಿಡಬ್ಲ್ಯುಸಿ) ವೇಳೆ ತಿಲಕ ಧಾರಣೆಗೆ ನಿರಾಕರಿಸಿದ್ದಾರೆ. 


ಹೈದರಾಬಾದ್ (ಸೆ.18): ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆ (ಸಿಡಬ್ಲ್ಯುಸಿ) ವೇಳೆ ತಿಲಕ ಧಾರಣೆಗೆ ನಿರಾಕರಿಸಿದ್ದಾರೆ. ‘ಇಂಡಿಯಾ ಕೂಟ’ದ ಸದಸ್ಯ ಪಕ್ಷವಾಗಿರುವ ಡಿಎಂಕೆ ಸನಾತನ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ನಡುವೆಯೇ ಇದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದು, ಸಿದ್ದರಾಮಯ್ಯ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ.

ಶನಿವಾರ ಸಿಡಬ್ಲ್ಯುಸಿ ಸಭಾಂಗಣಕ್ಕೆ ಸಿದ್ದರಾಮಯ್ಯ ಆಗಮಿಸಿದಾಗ ಅವರಿಗೆ ಸ್ವಾಗತಕಾರಿಣಿಯು ಗಂಧದ ಬೊಟ್ಟು ಹಚ್ಚಿ ಆರತಿ ಮಾಡಲು ಮುಂದಾದಾಗ, ಸಿದ್ದರಾಮಯ್ಯ ತಿಲಕಕ್ಕೆ ನಿರಾಕರಿಸುತ್ತಾರೆ. ಸ್ವಾಗತಕಾರಿಣಿ ಆಗ ಆರತಿಯನ್ನಷ್ಟೇ ಮಾಡಿದ್ದಾರೆ. ಇದನ್ನು ಪಕ್ಕದಲ್ಲೇ ಇದ್ದ ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಹಾಗೂ ಇತರರು ಮೂಕಪ್ರೇಕ್ಷಕರಂತೆ ನೋಡುತ್ತಾರೆ.

Tap to resize

Latest Videos

ಬಿಜೆಪಿ ಗರಂ: ಇದನ್ನು ಟೀಕಿಸಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ‘ಮಮತಾ ದೀದಿಯ ನಂತರ ಈಗ ಸಿದ್ದರಾಮಯ್ಯ ತಿಲಕ ಧಾರಣೆಗೆ ನಿರಾಕರಿಸಿದ್ದಾರೆ. ಟೋಪಿ (ಮುಸ್ಲಿಂ ಟೋಪಿ) ಹಾಕುವುದು ಸರಿ. ಆದರೆ ತಿಲಕ ಧಾರಣೆ ಸರಿ ಅಲ್ಲವೆ? ಏಕೆಂದರೆ ಮುಂಬೈನಲ್ಲಿ ಹಿಂದೂಗಳು ಮತ್ತು ಸನಾತನ ಧರ್ಮದ ಮೇಲೆ ದಾಳಿ ಮಾಡಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ ಎಂದಿದ್ದಾರೆ.

ಆರ್‌ಎಸ್‌ಎಸ್‌ ತತ್ವ ನಂಬಿ ಉದ್ಧಾರ ಆಗಿರುವವರ ತೋರಿಸಿ: ಸಚಿವ ಪ್ರಿಯಾಂಕ್ ಖರ್ಗೆ

ಉದಯನಿಧಿ ಸ್ಟಾಲಿನ್‌ನಿಂದ ಎ. ರಾಜಾ ಹಾಗೂ ಜಿ. ಪರಮೇಶ್ವರರರಿಂದ ಪ್ರಿಯಾಂಕ್ ಖರ್ಗೆವರೆಗೆ, ಆರ್‌ಜೆಡಿಯಿಂದ ಎಸ್‌ಪಿವರೆಗೆ - ‘ಕರೋ ಹಿಂದೂ ಆಸ್ಥಾ ಪೆ ಚೋಟ್, ಔರ್ ಕೋ ಮತಬ್ಯಾಂಕ್ ಕಾ ವೋಟ್’ (ಹಿಂದೂ ನಂಬಿಕೆಗೆ ಘಾಸಿ ಮಾಡುವುದು, ಮತ ಬ್ಯಾಂಕ್‌ಗೆ ಮಣೆ ಹಾಕುವುದು) ತಂತ್ರ ಇದಾಗಿದೆ ಎಂದು ಛೇಡಿಸಿದ್ದಾರೆ.

click me!