ರೈತರ ಅನುದಾನಕ್ಕೆ ಸಿದ್ದರಾಮಯ್ಯ ಕತ್ತರಿ: ಜಿ.ಟಿ.ದೇವೆಗೌಡ ಆರೋಪ

By Kannadaprabha News  |  First Published Oct 12, 2023, 11:30 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಏನೂ ಮಾಡಿಲ್ಲ. ಒಂದೇ ಒಂದು ಗ್ಯಾರಂಟಿ ರೈತರಿಗೆ ಮೀಸಲಿದೆಯೇ. ರೈತರಿಗೆ ನೀಡುವ ಅನುದಾನಕ್ಕೇ ಕತ್ತರಿ ಹಾಕಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೆಗೌಡ ಆರೋಪಿಸಿದರು.


ವಿಜಯಪುರ (ಅ.12): ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಏನೂ ಮಾಡಿಲ್ಲ. ಒಂದೇ ಒಂದು ಗ್ಯಾರಂಟಿ ರೈತರಿಗೆ ಮೀಸಲಿದೆಯೇ. ರೈತರಿಗೆ ನೀಡುವ ಅನುದಾನಕ್ಕೇ ಕತ್ತರಿ ಹಾಕಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೆಗೌಡ ಆರೋಪಿಸಿದರು. ನಗರದ ಕಿತ್ತೂರ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಜೆಡಿಎಸ್ ಕೋರ್ ಕಮೀಟಿ ಸಭೆಯಲ್ಲಿ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಮುಖ್ಯಮಂತ್ರಿಗಳು ಏನೂ ಮಾಡಿಲ್ಲ. ಸೌಜನ್ಯಕ್ಕೂ ರೈತರನ್ನು ಭೇಟಿ ಮಾಡಿಲ್ಲ. ಅವರ ಜಮೀನುಗಳಿಗೆ ಹೋಗಿ ಪರಿಸ್ಥಿತಿ ಅವಲೋಕಿಸಿಲ್ಲ.

ಮುಖ್ಯಮಂತ್ರಿಗಳು ತಾವು ರೈತಪರ ಎಂದು ಹೇಳುವುದು ಕೇವಲ ಮಾತಿಗೆ ಸೀಮಿತವಾಗಿದೆ ಹೊರತು ಕೃತಿಯಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. 40 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇದರಿಂದ 4800 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದರು. ಬಿಜೆಪಿ ವಿರುದ್ಧ ಶೇ.40 ಕಮೀಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಹಿಂದಿನ ಸರ್ಕಾರದ ಅವಧಿಯಲ್ಲಿನ ಎಲ್ಲ ಕಾಮಗಾರಿ ನಿಲ್ಲಿಸಿದೆ, ಅನುದಾನ ಸ್ಥಗಿತಗೊಳಿಸಿದೆ. ಇದು ಅಭಿವೃದ್ಧಿ ವಿರೋಧಿಯಲ್ಲವೇ? ಎಂದು ಪ್ರಶ್ನಿಸಿದರು.

Tap to resize

Latest Videos

ಕಾಂಗ್ರೆಸ್ ಸರ್ಕಾರ ನುಡಿದಂತೆ‌ ನಡೆಯುತ್ತಿದೆ: ಸಂಸದ ಡಿ.ಕೆ.ಸುರೇಶ್‌

ಸಿದ್ಧಾಂತ ಉಳಿಸಿಕೊಂಡು ನಮ್ಮ ರಾಜ್ಯ ಹಾಗೂ ದೇಶ ಉಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕಾಗಿಯೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದರು. ಮಾಜಿ ಶಾಸಕ ವೈಎಸ್‌ವಿ ದತ್ತಾ ಮಾತನಾಡಿ, ಕಾರ್ಯಕರ್ತರು ಹೊಸ ಹುಮ್ಮಸ್ಸಿನೊಂದಿಗೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯವಾಗಬೇಕು. ವಿಜಯಪುರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಖಾತೆ ತೆರೆಯುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು ಎಂದು ಹೇಳಿದರು. 

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಮಾತನಾಡಿ, ಜೆಡಿಎಸ್ ಅಲ್ಪಸಂಖ್ಯಾತರ ಹಿತ ಬಯಸುವ ಪಕ್ಷ. ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲಿಸಿದ್ದು ಜೆಡಿಎಸ್. ತತ್ವ-ಸಿದ್ಧಾಂತ ಉಳಿಸಿಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ನಮ್ಮ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗಿಲ್ಲ, ಮುಂದೆ ಆಗುವುದಿಲ್ಲ ಎಂದರು. ರಾಜ್ಯಕ್ಕೆ ನ್ಯಾಯ ದೊರಕಿಸಲು ಪದವಿ ಬಿಡುತ್ತೆನೆ ಎಂದು ರೈತರ ಪರ ನಿಂತವರು ದೇವೆಗೌಡರು. ಜೆಡಿಎಸ್ ಪಕ್ಷಕ್ಕೆ ಈ ರೀತಿಯ ಶ್ರೇಷ್ಠ ನಾಯಕನ ನಾಯಕತ್ವವಿದೆ. 

ಉತ್ತಮ ವರದಿ, ಲೇಖನ ಬರೆದಿದ್ದೀರಾ? ನೀವು ಒಳ್ಳೆ ಫೋಟೋಗ್ರಾಫರಾ?: ಕೆಯುಡಬ್ಯುಜೆ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಹಾಕಿ!

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಮೂಲಕ ಕಣ್ಣೋರೆಸುವ ತಂತ್ರ ಮಾಡುತ್ತಿದೆ, ರೈತರಿಗೆ ನಿತ್ಯ ಅನ್ಯಾಯವಾಗುತ್ತಿದ್ದು, ರೈತರು ಹಿಡಿಶಾಪ ಹಾಕುತ್ತಿದ್ದಾರೆ, ಕಾಂಗ್ರೆಸ್ ಬಂದಾಗ ಬರಗಾಲ ಬರುತ್ತದೆ. ಜೆಡಿಎಸ್ ಬಂದಾಗ ಸಮೃದ್ಧಿ ಇರುತ್ತದೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು. ನಾಗಠಾಣ ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ, ಜೆಡಿಎಸ್ ಧುರಿಣೆ ಡಾ.ಸುನೀತಾ ಚವ್ಹಾಣ, ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಬಿ.ಡಿ. ಪಾಟೀಲ, ಬಸವರಾಜ ಹೊನವಾಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ, ಪೀರಪಾಷಾ ಗಚ್ಚಿನಮಹಲ್ ಮುಂತಾದವರು ಇದ್ದರು.

click me!