ಸಿಎಂ ಹುದ್ದೆ ವಿಚಾರ ಚರ್ಚೆ ನಡುವೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ತಮ್ಮ ಪಕ್ಷದ ಸಚಿವರನ್ನು ಕರೆದು ಕೆಲವರಿಗೆ ವಾರ್ನಿಂಗ್ ಮಾಡಿದ್ದಾರೆ.
ಬೆಂಗಳೂರು (ನ.4): ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ವಿಚಾರ ಚರ್ಚೆ ನಡುವೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ತಮ್ಮ ಪಕ್ಷದ ಸಚಿವರನ್ನು ಕರೆದಿದ್ದರು. ಸಿಎಂ ಕರೆದ ಸಭೆಗೆ ಒಟ್ಟು 17 ಮಂದಿ ಸಚಿವರು ಭಾಗಿಯಾಗಿದ್ದರು. ಡಿಕೆಶಿವಕುಮಾರ್ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಬಹಿರಂಗ ಹೇಳಿಕೆ ನೀಡಿದ ಸಚಿವರಿಗೆ ಸಭೆಯಲ್ಲಿ ವಾರ್ನಿಂಗ್ ಮಾಡಲಾಗಿದೆ. ಗೊಂದಲ ಹೆಚ್ಚು ಮಾಡುವ ರೀತಿಯಲ್ಲಿ ಯಾವ ಸಚಿವರು ವರ್ತಿಸಬಾರದು. ಮಿತಿ ಮೀರಿದ ಹೇಳಿಕೆಗಳನ್ನು ಸಹಿಸುವುದಿಲ್ಲ. ವ್ಯಕ್ತಿ ಪೂಜೆ ಬದಲು ಪಕ್ಷ ಪೂಜೆ ಮಾಡೋಣ ಎಂದು ಡಿಸಿಎಂ ಡಿಕೆಶಿ ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟರು. ಇದು ಸಭೆಯಲ್ಲಿ ಹಾಜರಿದ್ದ ಸಚಿವ ರಾಜಣ್ಣ ಟಾರ್ಗೆಟ್ ಮಾಡಿದಂತಿತ್ತು.
ಏಕೆಂದರೆ ಎಐಸಿಸಿ ಎಚ್ಚರಿಕೆ ಬಳಿಕವೂ ಸಿಎಂ ಕುರ್ಚಿ ಬಗ್ಗೆ ಮಾತನಾಡಿದ್ದರು. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ ಹೆದರುವುದಿಲ್ಲ ಎಂದು ಸಚಿವ ರಾಜಣ್ಣ ಮಾತನಾಡಿದ್ದರು. ಸಿದ್ದರಾಮಯ್ಯ ಬಳಿಕ ಪರಮೇಶ್ವರ್ ಸಿಎಂ ಆಗಲಿ ಎಂದಿದ್ದರು. ಇದು ಪಕ್ಷದ ಇರುಸು ಮುರಿಸಿಗೆ ಕಾರಣವಾಗಿತ್ತು.
ಇನ್ನು ಇದೇ ವೇಳೆ ಲೋಕಸಭಾ ಟಾಸ್ಕ್ ಪೂರ್ಣ ಮಾಡಲು ತಯಾರಿ ನಡೆಸಿ, ವಾರದೊಳಗೆ ಲೋಕಸಭಾ ಕ್ಷೇತ್ರ ವಾರು ಸಭೆ ಮಾಡಿ ವರದಿ ಕೊಡಿ ಎಂದು ಹಿರಿಯ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಭಾಗಿಯಾದವರು
1) ಬೊಸರಾಜು
2) ರಾಮಲಿಂಗ ರೆಡ್ಡಿ
3) ದಿನೇಶ್ ಗುಂಡೂರಾವ್
4) ಕೃಷ್ಣಾ ಬೈರೆಗೌಡ
5 )ಜಮೀರ್ ಅಹ್ಮದ್ ಖಾನ್
6 ) ಸಂತೋಷ ಲಾಡ್.
7 ) ಎಂ ಬಿ ಪಾಟೀಲ್
8 ) ಈಶ್ವರ್ ಖಂಡ್ರೆ
9) ಪರಮೇಶ್ವರ್
10) ಡಿಸಿಎಂ ಡಿಕೆಶಿ
11) ಬೈರತಿ ಸುರೇಶ್
12) ಮುನಿಯಪ್ಪ
13) ಕೆ ಜೆ ಚಾರ್ಜ್
14) ಕೆ ಎನ್ ರಾಜಣ್ಣ
15)ಹೆಚ್ ಸಿ ಮಹದೇವಪ್ಪ
16)ಪ್ರಿಯಾಂಕಾ ಖರ್ಗೆ
ಸಿಎಂ ಸಚಿವರುಗಳಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಇದಕ್ಕಿದ್ದ ಹಾಗೇ ಕರೆಯಲು ಕಾರಣವೇನು ಗೊತ್ತಾ?
ಸಿಎಂ ಕಾವೇರಿ ನಿವಾಸದೊಳಗೆ ಹೊಸದಾಗಿ ಮೀಟಿಂಗ್ ಹಾಲ್ ಕಟ್ಟಡವೊಂದನ್ನ ಕಟ್ಟಲಾಗಿದೆ. ಈ ನೂತನ ಕಟ್ಟದದ ಒಪನಿಂಗ್ ಗೆ ಸಚಿವರುಗಳನ್ನ ಸಿಎಂ ಆಹ್ವಾನಿದ್ದಾರೆ. ಕಾವೇರಿ ನಿವಾಸದ ನವೀಕರಣ ಸಮಯಲ್ಲಿ ಮೀಟಿಂಗ್ ಹಾಲ್ ಒಂದನ್ನು ಹೊಸದಾಗಿ ನಿರ್ಮಿಸಲಾಗಿದೆ. ಸಚಿವರ ಸಮುಖದಲ್ಲಿ ಈ ಮೀಟಿಂಗ್ ಹಾಲ್ ಉದ್ಘಾಟನೆ ಮಾಡಲು ಕರೆದಿದ್ದರು. ಕಾವೇರಿ ನಿವಾಸದಲ್ಲಿ ನಿರ್ಮಿಸಿರುವ ನೂತನ ಮೀಟಿಂಗ್ ಹಾಲ್ ನ್ನು ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ರಿಂದ ಉದ್ಘಾಟನೆ ಮಾಡಿಸಿದರು. ಬಳಿಕ ಅದೇ ಮೀಟಿಂಗ್ ಹಾಲ್ ನಲ್ಲಿ ಸಿಎಂ ಸಭೆ ನಡೆಸಿದರು. ಬೆಂಗಳೂರಿನಲ್ಲಿ ಯಾವೆಲ್ಲ ಸಚಿವರುಗಳು ಇದ್ದಾರೋ ಬಹುತೇಕ ಎಲ್ಲರೂ ಸಿಎಂ ಕರೆದ ಬ್ರೇಕ್ ಫಾಸ್ಟ್ ಮೀಟಿಂಗ್ ಹಾಜರಿದ್ದರು
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಳೆದ ಕೆಲವು ದಿನಗಳಿಂದ ಮತ್ತೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ನಡುವಲ್ಲೇ ಮುಂದಿನ 5 ವರ್ಷ ನಾನೇ ಸಿಎಂ ಎಂದು ಹೇಳಿದ್ದ ಸಿದ್ದರಾಮಯ್ಯ ಹೇಳಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಡಿಕೆಶಿ ಬಣ, ಸಿದ್ದು ಬಣ, ಜಾರಕಿಹೊಳಿ ಬಣ ಎಂದೆಲ್ಲ ಗುಲ್ಲೆದ್ದಿತ್ತು. ತಕ್ಷಣ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟನೆ ಕೊಟ್ಟು ನಮ್ಮದು ಹೈಕಮಾಂಡ್ ಪಕ್ಷ. ನಾನು ಆ ರೀತಿ ಹೇಳಿಕೆ ನೀಡಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದಿದ್ದೆ ಎಂದು ಹೇಳಿ ಸ್ಪಷ್ಟನೆ ಕೊಟ್ಟಿದ್ದರು.
ನವೆಂಬರ್ 2ರಂದು ವಿಜಯನಗರದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿಗಳು ಐದು ವರ್ಷ ಕೂಡ ನಮ್ಮದೇ ಸರಕಾರ ಇರುತ್ತದೆ. ನಮ್ಮದೇ ಸರ್ಕಾರ ಇರುತ್ತದೆ. ಈಗ ನಾನು ಮುಖ್ಯಮಂತ್ರಿ, ನಾನೇ ಮುಂದುವರಿಯುತ್ತೇನೆ ಎಂದಿದ್ದರು. ಈ ಹೇಳಿಕೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡಿಕೊಂಡಿರಲಿಲ್ಲ. ಒಂದೇ ವೇದಿಕೆಯಲ್ಲಿದ್ದರು ಪರಸ್ಪರ ಮಾತನಾಡದೇ ಇದ್ದುದು ಡಿಕೆಶಿ ಮುನಿಸಿಕೆ ಕಾರಣವಾಗಿದೆ ಎನ್ನಲಾಗಿತ್ತು.