MLC ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ, ಯುಗಾದಿ ನಂತರ ರಾಜಕೀಯವಾಗಿ ದೊಡ್ಡ ಪ್ರವಾಹ ಎಂದು ಭವಿಷ್ಯ

By Suvarna NewsFirst Published Mar 31, 2022, 4:10 PM IST
Highlights

* MLC ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ
* ಯುಗಾದಿ ನಂತರ ರಾಜಕೀಯವಾಗಿ ದೊಡ್ಡ ಪ್ರವಾಹ ಎಂದು ಭವಿಷ್ಯ
* ಜೆಡಿಎಸ್ ಸೇರುವ ಬಗ್ಗೆ ಖಚಿತಪಡಿಸಿದ ಇಬ್ರಾಹಿಂ

ವರದಿ : ಶರತ್‌ ಕಪ್ಪನಹಳ್ಳಿ

ಬೆಂಗಳೂರು, (ಮಾ.31): ಸಿ.ಎಂ.ಇಬ್ರಾಹಿಂ (CM Ibrahim) ಇಂದು(ಗುರುವಾರ) ತಮ್ಮ ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು.ವಿಧಾನಸೌಧದಲ್ಲಿರುವ  ಸಭಾಪತಿಗಳ ಕೊಠಡಿಗೆ ತೆರಳಿ ಸಭಾಪತಿ ಬಸವರಾಜ್ ಹೊರಟ್ಟಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಆ ಕ್ಷಣವೇ ಸಿ. ಎಂ ಇಬ್ರಾಹಿಂ ರಾಜೀನಾಮೆಯನ್ನ ಸಭಾಪತಿ ಅಂಗೀಕರಿಸಿದರು.

ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಬ್ರಾಹಿಂ ಈಗ ತಮ್ಮ MLC ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಇನ್ನು ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದು, ಜೆಡಿಎಸ್ ಸೇರುವ ಬಗ್ಗೆ ಖಚಿತಪಡಿಸಿದರು.

Latest Videos

ಯುಗಾದಿ ನಂತರ ರಾಜಕೀಯವಾಗಿ ದೊಡ್ಡ ಪ್ರವಾಹ
ತಮ್ಮ MLC ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ...ಯುಗಾದಿ ಮುಗಿದ ಮೇಲೆ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ದೊಡ್ಡ ಮಟ್ಟದ ರಾಜಕೀಯ ಪ್ರವಾಹ ಬರುತ್ತೆ ದೊಡ್ಡ ರಾಜಕೀಯ ಬದಲಾವಣೆಯಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ...ಇಂದು  ಗುರುವಾರದ ದಿವಸ ಎಲ್ಲಾ‌ ಧರ್ಮ ಗಳಿಗೆ ಶ್ರೇಷ್ಠವಾದದ್ದು. ಇಂದು ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಮುಂದಿನ ನಡೆ ಇಲ್ಲಿಂದ ಆರಂಭ. ನನ್ನ ಮೇಲೆ ಏನು ಹೊರೆ ಇತ್ತು ಅದನ್ನ‌ ಕಳಚಿಕೊಂಡಿದ್ದೇನೆ. ನನ್ನ ಮುಂದಿನ ನಡೆಯನ್ನ ದೇವೆಗೌಡರ ಪಾಲಿಗೆ ಬಿಟ್ಟಿದ್ದೇನೆ. ದೇವೆಗೌಡರು ಒಬ್ಬರು ಮಾರ್ಗದರ್ಶಕರು. ದೇಶಕ್ಕೆ ಮಾರ್ಗದರ್ಶನ ಕೊಟ್ಟವರು, ಅಜಾತ ಶತ್ರು. ಕರ್ನಾಟಕ ರಾಜ್ಯದಲ್ಲಿ ವಯೋವೃದ್ದ ರಾಜಕಾರಣಿ.. ನಮ್ಮ‌ನಡೆ ಅವರ ಜೊತೆಯಲ್ಲಿ ಇದು ಸರ್ವಸಮ್ಮತ ಅಭಿಪ್ರಾಯ...ಯುಗಾದಿ ಮುಗಿದ ಮೇಲೆ ಎಪ್ರಿಲ್ ಮೇ ತಿಂಗಳಲ್ಲಿ ರಾಜಕೀಯವಾಗಿ ದೊಡ್ಡ ಪ್ರವಾಹ ಬರುತ್ತೆ ಎಂದು ಭವಿಷ್ಯ ನುಡಿದರು.

'ಲೇ.. ಇಬ್ರಾಹಿಂ ಹೇಳ್ದಷ್ಟು ಕೇಳು'-ಎದುರಿಗೆ ಬಂದ ಸಿಎಂ ಇಬ್ರಾಹಿಂಗೆ ಸಿದ್ದು ಸಲಹೆ

ವಿಧಿಯಿಲ್ಲದೆ ಕಾಂಗ್ರೆಸ್ ಬಿಡಬೇಕಾಯ್ತು
ಅನ್ಯಾರ ಡೊಂಕು ನೀವೇಕೆ  ತಿದ್ದುವಿರಯ್ಯ" ಎಂಬ ಬಸವಣ್ಣನವರ ವಚನ ಹೇಳಿದ ಇಬ್ರಾಹಿಂ,  ಇಂದು ನನ್ನ ರಾಜೀನಾಮೆಯನ್ನು ಸಭಾಪತಿಗಳು ಅಂಗಿಕರಿಸಿದ್ದಾರೆ. ಇಷ್ಟು ದಿನ ಜೊತೆಗಿದ್ದ ಕಾಂಗ್ರೆಸ್ ಕಾರ್ಯಕರ್ತರು, ಒಳ್ಳೊಳ್ಳೆ ಸ್ನೇಹಿತರಿದ್ದರು ವಿಧಿಯಿಲ್ಲದೆ ಬೇಡಬೇಕಾತ್ತು ಅವರೆಲ್ಲರಿಗೂ ಧನ್ಯವಾದ ಹೇಳ್ತೀನಿ ಎಂದರು...ಪದವಿ ಕೊಟ್ಟಾಗ ಯಾವತ್ತು ಇಟ್ಟುಕೊಳ್ಳಬಾರದು ವಾಲೆಂಟಿಯಾರ್ ಆಗಿ ಬಿಟ್ಟುಕೊಟ್ಟಿದ್ದೇನೆ. ಇನ್ಮುಂದೆ ಜನ ನನ್ನನ್ನು ಕೈಹಿಡಿತಾರೆ.ಜನರಿಗೆ ನಾನು ಇಷ್ಟೇ ಹೇಳೋದು. "ಎನ್ನ ನಾಮ ಕ್ಷೇಮಾ ನಿಮ್ಮದಯೇ  ಎನ್ನ ನಾಮ ಅಪಮಾನ ನಿಮ್ಮದಯೇ ಏನ್ನ ಹಾನಿ ವೃದ್ದಿ ನಿಮ್ಮದಯೇ ಬಳ್ಳಿಗೆ ಕಾಯಿ ಧನ್ಯಥೆ ಕೂಡಲಸಂಗಮದೇವ" ಎಂದು ವಚನ‌ ಉಲ್ಲೇಖ ಮಾಡಿದ ಅವರು, ನಾನು ಕಾಯಿ ಇದ್ದ. ಹಾಗೇ ನೀವು ಬಳ್ಳಿ ಇದ್ದ ಹಾಗೇ, ಇಷ್ಟು ದಿನ ನನನ್ನು ಕಾಪಾಡಿದ್ದೀರಾ ಎಂದರು...ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವದ ತಳಹದಿಯ ನಾಯಕನ್ನ ಆರಿಸಬೇಕಿತ್ತು. ಆದ್ರೆ ಅದನ್ನ ಅವರು ಮಾಡಲಿಲ್ಲ. ಹಾಗಂತ ನಾನು ಕೊಡಿ ಎಂದು‌ ಕೇಳಲಿಲ್ಲ. 21 ಜನ ಇದ್ದೇವೆ ಎಲೆಕ್ಷನ್ ಮಾಡಿ ಮೆಜಾರಿಟಿ ಬಂದ್ರೆ ನನಗೆ ಕೊಡಿ ಎಂದು ಕೇಳಿದ್ದೆ. ಅದನ್ನ ಯಾಕೆ ಮಾಡಲಿಲ್ಲ?  ಅದಕ್ಕೆ‌ ನಾನು ಹೊರಗಡೆ ಬಂದೆ. ಜೆಡಿಎಸ್ ನಲ್ಲಿ ಖಂಡಿತವಾಗಿಯೂ ಪ್ರಜಾಪ್ರಭುತ್ವ ಇದೆ ಎಂದರು...

ಜೆಡಿಎಸ್ ಗೆ ಯಾವುದೇ ಷರತ್ತು ಹಾಕದೇ ಹೋಗುತ್ತಿದ್ದೇನೆ
ಜೆಡಿಎಸ್ ಪಕ್ಷಕ್ಕೆ ಯಾವುದೇ ಷರತ್ತು ಹಾಕದೇ ಹೋಗುತ್ತಿದ್ದೇನೆ. ಜೆಡಿಎಸ್ ನನ್ನ ಮನೆ, ನನ್ನ ಮನೆಗೆ ಏನಾದ್ರು ಷರತ್ತು ಹಾಕಿ ಹೋಗ್ತೀವಾ?. ಎಲ್ಲಿ ಬಾಗಿಲು ಇದೆ‌. ಎಲ್ಲಿ ಕಿಟಕಿ ಇದೆ ಎಲ್ಲಿ ಅಡುಗೆ ಮನೆ ಇದೆ ಅನ್ನೋದು ನನಗೆ ಗೊತ್ತಿಲ್ವಾ?. ನನ್ನ ಮನೆಗೆ ಹೋಗಬೇಕಾದ್ರೆ ದಾರಿ ತೋರಿಸುವ ಅವಶ್ಯಕತೆ ಇಲ್ಲ...ಸ್ವತಂತ್ರವಾಗಿ ನಾವೇ ಸರ್ಕಾರ ಮಾಡಬೇಕು ಎಂಬ ಶಕ್ತಿ ಜೆಡಿಎಸ್ ಗೆ ಇದೆ.  ಮುಂದಿನ ಚುನಾವಣೆಯಲ್ಲಿ  ಮೊದಲು ಜೆಡಿಎಸ್ ನಂತರ ಬಿಜೆಪಿ ಕೊನೆಯಲ್ಲಿ ಕಾಂಗ್ರೆಸ್ ಇರಲಿದೆ..ಉತ್ತರ ಪ್ರದೇಶ ಹಾಗೂ ಪಂಜಾಬ್  ನಲ್ಲಿ ಏನಾಯ್ತು ಅದೇ ವಾತಾವರಣ ಕರ್ನಾಟಕದಲ್ಲೂ ಆಗಲಿದೆ ಎಂದು ಭವಿಷ್ಯ ನುಡಿದರು.

ಕೂಡಿ ಬಾಳಿ ಬದುಕುವ ಸಂದೇಶ ನಮ್ಮದು
 ರಾಜ್ಯದಲ್ಲಿ ಉದ್ಬವಿಸಿರುವ ಸಾಮರಸ್ಯ ವಿಚಾರವಾಗಿ ಮಾತಮಾಡಿದ ಸಿಎಂ‌ ಇಬ್ರಾಹಿಂ ಬಿಜೆಪಿಯವರಲ್ಲಿ ನಾನು ಮನವಿ ಮಾಡ್ತೀನಿ. ಮತೀಯ ಭಾವನೆ ಏನಿದೆ? ಅಮಿತ್ ಶಾ ಸಹ ಪಾರ್ಲಿಮೆಂಟ್ ನಲ್ಲಿ ಹೇಳಿದ್ದಾರೆ. ಹಿಂಸೆಯಿಂದ  ಎಲೆಕ್ಷನ್‌ ಗೆಲ್ಲೋದಿಲ್ಲ. ನಾವು ಐಡಿಯಾಲಜಿ ಮೇಲೆ ಎಲೆಕ್ಷನ್ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ದೊಡ್ಡವರೇ ಹಾಗೇ ಹೇಳುವಾಗ ನೀವು ಯಾಕೆ?" ಎಂದು ಬಿಜೆಪಿಯನ್ನ ಪ್ರಶ್ನಿಸಿದರು...ಹೀಗಿರುವಾಗ ಇಲ್ಲಿ ಈ ಕಟ್ಟು ಆ ಕಟ್ಟು ಚರಕ ಕಟ್ಟು ತಲೆ ಕಟ್ಟು ಮಲೆ ಕಟ್ಟು ಅಂತ ಸುಮ್ಮನೆ ಬೇಡದಿರುವ ವಿಷಯಗಳನ್ನೆಲ್ಲ ವಿವಾದ ಮಾಡಿಕೊಳ್ಳುವುದು ಸರಿಯಲ್ಲ ಎಂದರು‌.‌..ಇವತ್ತು ಬಪ್ಪ ಬ್ಯಾರಿ ಕಟ್ಟಿಸಿದ ದೇವಸ್ಥಾನದಲ್ಲಿ ಅಂಗಡಿ ಹಾಕಬಾರದು, ಆದ್ರೆ ಆ ದೇವಿ ಪ್ರಸಾದವನ್ನು ಆ ಪೂಜಾರಿಯವರು ಮನೆ ತಲುಪಿಸುವ ಕೆಲಸ ಮಾಡಿದ್ದಾರೆ. ಇದೇ ಕುಡಿ ಬಾಳಿ ಬದುಕುವ ಸಂದೇಶ ತೋರಿಸುತ್ತೆ. ಇದೇ ಭಾರತ ಕರ್ನಾಟಕದ ಸಂಸ್ಕೃತಿ ಎಂದರು‌...

click me!