ಆಡಿಯೋ ಕ್ಲಿಪ್: 'ಸುಪ್ರೀಂ ನಿಯಮದಂತೆ ಸ್ವತಃ ಕುಮಾರಸ್ವಾಮಿಯೂ ತಪ್ಪಿತಸ್ಥರು'

By Web DeskFirst Published Feb 11, 2019, 5:00 PM IST
Highlights

ಆಪರೇಷನ್ ಆಡಿಯೋ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾಗಿಯಾಗಿದ್ದಾರೆ ಎಂದು ಮಾಜಿ ಸಿಎಂ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು,[ಫೆ.11]: ಆಪರೇಷನ್ ಆಡಿಯೋ ಪ್ರಕರಣ ವಿಧಾನಸಭೆಯಲ್ಲಿ ಮಾತ್ರವಲ್ಲದೇ ಲೋಕಸಭೆಯಲ್ಲೂ ಕೋಲಾಹಲ ಎಬ್ಬಿಸಿದ್ದು, ಈ ಪ್ರಕರಣವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಆಪರೇಷನ್ ಆಡಿಯೋ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾಗಿಯಾಗಿದ್ದಾರೆ.  ಇಡೀ ಪ್ರಕರಣ ಅವರ ಪ್ರಚೋದನೆಯಿಂದಲೇ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. 

ಆಡಿಯೋದಲ್ಲಿ ಸ್ಪೀಕರ್ ಹೆಸ್ರು: ತನಿಖೆಯಾಗ್ಬೇಕು ಎಂದ ಸಿದ್ದರಾಮಯ್ಯ

ಕುಟುಕು ಕಾರ್ಯಾಚರಣೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿದೆ.  ​ಕುಟುಕು ಕಾರ್ಯಾಚರಣೆಯನ್ನ ಯಾರು ಪ್ರಚೋದಿಸುತ್ತಾರೋ ಅವರೂ ತಪ್ಪಿತಸ್ಥರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರೂ ಸಹ ಆಪಾದಿತರೇ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಪೀಕರ್​ ರೂಲಿಂಗ್​ ಪ್ರಕಾರ ಸಿಎಂ ಕುಮಾರಸ್ವಾಮಿ ಅವರು SIT ತನಿಖೆಗೆ ಆದೇಶಿಸುವುದು ಸರಿಯಲ್ಲ. ಏಕೆಂದ್ರೆ ಯಾವುದೇ ತನಿಖಾ ಸಂಸ್ಥೆಯೇ ಆದರೂ ಅದು ಸಿಎಂ ಕುಮಾರಸ್ವಾಮಿ ಅವರ ಅಂಡರ್​​ ಬರುತ್ತದೆ. 

ಹಾಗಾಗಿ ನಿಷ್ಪಕ್ಷಪಾತದಿಂದ ತನಿಖೆ ನಡೆಯಬೇಕು ಅಂದ್ರೆ ಅದು ಸದನ ಸಮಿತಿಯಿಂದ ಆಗಬೇಕು ಅಥವಾ ನ್ಯಾಯಾಂಗ ತನಿಖೆಯಿಂದ ನಡೆಯಬೇಕು ಎಂಬುದು ನಮ್ಮ ಪಕ್ಷದ ಸ್ಪಷ್ಟ ನಿಲುವಾಗಿದೆ ಎಂದರು.

click me!