ಡಿಕೆಶಿಯ ಅತ್ಯಂತ ನಂಬಿಕಸ್ತ ಸಾರಥಿ ಅಂದ್ರೆ ಕೃಷ್ಣ ಬೈರೇಗೌಡ.. ಇದೀಗ ಮತ್ತೊಂದು ಪವರ್‌ಫುಲ್ ಜವಾಬ್ದಾರಿ..!

Published : Aug 18, 2026, 07:13 PM IST
krishna byre gowda and dk shivakumar

ಸಾರಾಂಶ

ಸಚಿವ ಕೃಷ್ಣ ಬೈರೇಗೌಡರ ಕಾರ್ಯಕ್ಷಮತೆ ಮತ್ತು ಕ್ಲೀನ್ ಇಮೇಜ್‌ಗೆ ಮೆಚ್ಚುಗೆ ಸೂಚಿಸಿರುವ ಸಿಎಂ ಡಿಕೆಶಿ, ಅವರಿಗೆ ಸಂಸದೀಯ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಈಗಾಗಲೇ ಜನಮನ್ನಣೆ ಗಳಿಸಿರುವ ಬೈರೇಗೌಡರು, ಸರ್ಕಾರದ ಅತ್ಯಂತ ನಂಬಿಕಸ್ತ ಸಚಿವರಾಗಿ ಹೊರಹೊಮ್ಮಿದ್ದಾರೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅತ್ಯಂತ ಆಪ್ತ ಹಾಗೂ ನಂಬಿಕಸ್ತ ಸಚಿವ ಎಂದೇ ಗುರುತಿಸಿಕೊಂಡಿರುವ ಕೃಷ್ಣ ಬೈರೇಗೌಡಗೆ ಮತ್ತೊಂದು ಪ್ರಮುಖ ಜವಾಬ್ದಾರಿ ವಹಿಸಲಾಗಿದೆ. ಸಂಸದೀಯ ವ್ಯವಹಾರಗಳ (Parliamentary Affairs) ಹೆಚ್ಚುವರಿ ಖಾತೆಯನ್ನು ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಅವರ ಕೆಲಸದ ಮೇಲೆ ಸಿಎಂ ಡಿಕೆಶಿಯವರಿಗೆ ಎಲ್ಲಿಲ್ಲದ ನಂಬಿಕೆ. ಈಗಾಗಲೇ ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳಾದ BWSSB, BMRCL ಮತ್ತು ಜಿಬಿಎ (GBA) ಖಾತೆಗಳನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಈಗ ಅವರ ಬುದ್ಧಿವಂತಿಕೆ ಮತ್ತು ಸಂಸದೀಯ ಜ್ಞಾನವನ್ನು ಗಮನಿಸಿ ಸರ್ಕಾರ ಈ ಹೊಸ ಜವಾಬ್ದಾರಿಯನ್ನು ನೀಡಿದೆ.

ಡಿಕೆಶಿ ನಂಬಿಕೆಗೆ ಕಾರಣಗಳೇನು?

ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ 'ಕ್ಲೀನ್ ಹ್ಯಾಂಡ್' ಎಂಬ ಹೆಗ್ಗಳಿಕೆ ಕೃಷ್ಣ ಬೈರೇಗೌಡರಿಗಿದೆ. ಸರ್ಕಾರದ ಮೇಲೆ ಯಾವುದೇ ಆರೋಪಗಳು ಬಂದಾಗ ಅಥವಾ ಸಂಕಷ್ಟ ಎದುರಾದಾಗ ಅದನ್ನು ಕಾನೂನಾತ್ಮಕವಾಗಿ ಮತ್ತು ತರ್ಕಬದ್ಧವಾಗಿ ಎದುರಿಸುವ ಶಕ್ತಿ ಇವರಿಗಿದೆ. ಈ ಹಿಂದೆ ಕಂದಾಯ ಸಚಿವರಾಗಿದ್ದಾಗ ಇವರು ಮಾಡಿದ ಕೆಲಸಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿ ಜನರಿಂದ 'ಭೇಷ್' ಎನಿಸಿಕೊಂಡಿದ್ದಾರೆ.

ಹಠ ಬಿಡದ ಡಿಕೆಶಿ, ಗೆದ್ದ ಬೈರೇಗೌಡ!

ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಚಿವ ರಾಮಲಿಂಗಾರೆಡ್ಡಿ ಪಟ್ಟು ಹಿಡಿದಿದ್ದರು. ಆದರೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೃಷ್ಣ ಬೈರೇಗೌಡರೇ ಸೂಕ್ತ ಎಂಬ ನಂಬಿಕೆಯಿಂದ ಡಿಕೆ ಶಿವಕುಮಾರ್ ಅವರು ಹಠಕ್ಕೆ ಬಿದ್ದು ಇವರಿಗೇ ಜವಾಬ್ದಾರಿ ನೀಡಿದ್ದರು. ಆರಂಭದಲ್ಲಿ ಕಂದಾಯ ಖಾತೆಯ ಮೇಲೆ ಆಸಕ್ತಿ ಹೊಂದಿದ್ದ ಬೈರೇಗೌಡರಿಗೆ, ಬೆಂಗಳೂರು ಅಭಿವೃದ್ಧಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ಕೆಲಸಕ್ಕೆ ಹಚ್ಚಿದ್ದು ಇದೇ ಡಿಕೆಶಿ. ಒಟ್ಟಿನಲ್ಲಿ ಸರ್ಕಾರದ ಕೆಲಸ ಕಾರ್ಯಗಳ ಮೇಲೆ ಹಿಡಿತ ಹೊಂದಿರುವ ಮತ್ತು ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲದ ಕೃಷ್ಣ ಬೈರೇಗೌಡರು ಈಗ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಸರ್ಕಾರದ ಬಲ ಹೆಚ್ಚಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಂಧ್ರದಲ್ಲಿ ಅಣ್ಣ-ತಮ್ಮನ ಜುಗಲ್‌ಬಂದಿ.. ನಾಯ್ಡು ಸರ್ಕಾರದಲ್ಲಿ ಪವನ್ ಕಲ್ಯಾಣ್‌ಗೆ ಆನೆಬಲ..!
DK ಶಿವಕುಮಾರ್ ಮತ್ತು ಪ್ರಕಾಶ್ ರಾಜ್ ದಿಢೀರ್ ಭೇಟಿ.. ಭಾರೀ ಕುತೂಹಲ