ಮೋದಿ ಭೇಟಿಗೆ ಸಮಯ ನಿಗದಿ: ದಿಲ್ಲಿಗೆ ತೆರಳಿರುವ ಸಿಎಂ ಬಿಎಸ್‌ವೈ

By Suvarna News  |  First Published Jul 15, 2021, 6:46 PM IST

* ಸಿಎಂ ಬಿಎಸ್ ವೈ ರಿಂದ ಪಿಎಂ ಮೋದಿ ಭೇಟಿಗೆ ಸಮಯ ನಿಗದಿ
* ದೆಹಲಿ ತೆರಳಲಿರುವ ಸಿಎಂ ಬಿಎಸ್ ಯಡಿಯೂರಪ್ಪ
* ಸಿಎಂ ಜೊತೆ ಡಿಸಿಎಂ ಗೋವಿಂದ ಕಾರಜೋಳ ಸಹ ದೆಹಲಿಗೆ ತೆರಳುವ ಸಾಧ್ಯತೆ.


ಬೆಂಗಳೂರು, (ಜುಲೈ.15): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಳೆ (ಜುಲೈ.16) ನವದೆಹಲಿ ಪ್ರಯಾಣ ಬೆಳೆಸಲಿದ್ದಾರೆ. 

ವಿಶೇಷ ವಿಮಾನದ ಮೂಲಕ ರಾಷ್ಟ್ರ ರಾಜಧಾನಿಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಳೆ (ಶುಕ್ರವಾರ) ಸಂಜೆ 6.30ರಿಂದ 8 ಗಂಟೆಯ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. 

Tap to resize

Latest Videos

undefined

ಸಿಎಂ ಬೆನ್ನ ಹಿಂದೆ ದೆಹಲಿಗೆ ಹೊರಟ ರೇಣುಕಾಚಾರ್ಯ ಮತ್ತು ತಂಡ!

 ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳೊಂದಿಗೆ ಪ್ರಧಾನಿ ಜತೆ ಸಿಎಂ ಯಡಿಯೂರಪ್ಪ ಅವರು ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಿಎಂ ಯಡಿಯೂರಪ್ಪ ಜತೆ ಡಿಸಿಎಂ ಗೋವಿಂದ ಕಾರಜೋಳ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿ‌ ಕೂಡಾ ತೆರಳುವ ಸಾಧ್ಯತೆಯಿದೆ.

click me!