
ಬೆಂಗಳೂರು, (ಏ.26): ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಲಾಕ್ ಡೌನ್ ಘೋಷಿಸಲಾಗಿದೆ. ಇದರ ನಡುವೆ ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ಮಾಡಿದ್ದಾರೆ.
ಓರ್ವ ಜನಪ್ರತಿನಿಧಿಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಎಷ್ಟು ಸರಿ ಅಂತೆಲ್ಲಾ ರೇಣುಕಾಚಾರ್ಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಇದೀಗ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ರೇಣುಕಾಚಾರ್ಯರಿಗೆ ಕರೆ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ರೇಣುಕಾಚಾರ್ಯ ಗಮ್ಮತ್ತೇ ಬೇರೆ; ಸೋಶಿಯಲ್ ಡಿಸ್ಟಂಸಿಂಗ್‌ಗೆ ಕಿಮ್ಮತ್ತೇ ಇಲ್ಲ!
ರೇಣುಕಾಚಾರ್ಯಗೆ ಬಿಎಸ್‌ವೈ ಫುಲ್ ಕ್ಲಾಸ್
ಹೌದು...ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದ ವೈರಲ್ ಆಗಿರುವ ವಿಡಿಯೋ ನೋಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಗರಂ ಆಗಿದ್ದಾರೆ.
ದೂರವಾಣಿ ಕರೆ ಮಾಡಿ, ಏನು ಮಾಡುತ್ತಿದ್ದೀಯಾ ನೀನು, ಇಡೀ ದೇಶವೇ ಸಾಮಾಜಿಕ ಅಂತರದ ಪಾಲನೆ ಮಾಡುತ್ತಿದ್ದು, ಅದರ ಬಗ್ಗೆ ಮಾತನಾಡುತ್ತಿದೆ. ಆದರೆ, ನೀನು ಮಾತ್ರ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದೀಯಾ' ಎಂದು ಫುಲ ಕ್ಲಾಸ್ ತೆಗೆದುಕೊಂಡಿದ್ದಾರೆ.
ರೇಣುಕಾಚಾರ್ಯ ಅವರು ಸಿಎಂ ಅವರಿಂದ ಬೈಯಿಸಿಕೊಳ್ಳುವುದು ಇದೇನು ಮೊದಲಲ್ಲ. ಈ ಹಿಂದೆ ಹಲವು ಸಲ ಎಡವಟ್ಟು ಮಾಡಿಕೊಂಡು ಬೈಯಿಸಿಕೊಂಡಿರುವ ಉದಾಹರಣೆಗಳು ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.