ಸಿಎಂ ಸ್ಥಾನಕ್ಕೆ ರಾಜೀನಾಮೆ ಫಿಕ್ಸ್? ಮಹತ್ವದ ಸುಳಿವು ಕೊಟ್ಟ ಯಡಿಯೂರಪ್ಪ

By Suvarna NewsFirst Published Jul 21, 2021, 9:35 PM IST
Highlights

* ನಾಯಕತ್ವ ಬದಲಾವಣೆಗೆ ಮತ್ತೊಂದು ಸುಳಿವು
* ನಾಯಕತ್ವ ಬದಲಾವಣೆಗೆ ಸ್ವತಃ ಒಪ್ಪಿಕೊಂಡ್ರಾ  ಬಿಎಸ್‌ವೈ
* ಟ್ವಿಟ್ಟರ್‌ ಮೂಲಕ ಮಹತ್ವದ ನಿರ್ಣಯದ ಸುಳಿವು ನೀಡಿದ್ರಾ ಯಡಿಯೂರಪ್ಪ

ಬೆಂಗಳೂರು, (ಜು.21):  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬದಲಾವಣೆ ಮಾಡುವ ಬಗ್ಗೆ ಚರ್ಚೆ ತಾರಕಕ್ಕೇರಿದೆ. ಯಾವುದೇ ಕಾರಣಕ್ಕೂ ಬದಲಾವಣೆ ಬೇಡ ಎಂದು ಬಿಎಸ್‌ವೈ ಪರ ಹಲವು ಮಾಠಾಧೀಶರು ಬ್ಯಾಟಿಂಗ್ ಮಾಡಿದ್ದಾರೆ.

ಆದ್ರೆ, ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆಗೆ ಸ್ವತಃ ಒಪ್ಪಿಕೊಂಡ್ರಾ ಎನ್ನುವ ಪ್ರಶ್ನೆ,ಚರ್ಚೆಗಳು ಶುರುವಾಗಿವೆ.

ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಮಹತ್ವದ ಸಭೆ ಕರೆದ ಬಿಜೆಪಿ

ಹೌದು....ತಮ್ಮ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ಟ್ವೀಟ್‌ ಮೂಲಕ ಮಹತ್ವದ ನಿರ್ಣಯದ ಸುಳಿವು ಕೊಟ್ಟಿದ್ದಾರೆ.

ಟ್ವೀಟ್ ಮೂಲಕ ಮನವಿ ಮಾಡಿರುವ ಯಡಿಯೂರಪ್ಪ, ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಸೂಕ್ಷ್ಮವಾಗಿ ಗಮನಿಸಿದ್ರೆ, ನಾಯಕತ್ವ ಬದಲಾವಣೆಯಾಗುವುದು ಪಕ್ಕಾ ಎನ್ನುವಂತಾಗಿದ್ದು, ತಾವು ಸಹ ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಮುಂಚಿತವಾಗಿ ಬಿಎಸ್‌ವೈ, ಯಾವುದೇ ಪ್ರತಿಭಟನೆ ಮಾಡಬಾರದು ಎಂದು ಅಭಿಮಾನಿ ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿಕೊಂಡಂತಿದೆ. 

ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು.
ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ

— B.S. Yediyurappa (@BSYBJP)

ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಲೀಕ್ ಆಗಿದ್ದಾಗಿನಿಂದ ಯಡಿಯೂರಪ್ಪ ಈ ಬಗ್ಗೆ ಮಧ್ಯಮಗಳಿಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಬದಲಾಗಿ ಮನೆಗೆ ಬಂದ ಸ್ವಾಮೀಜಿಗಳಿಗೆ ಹೈಕಮಾಂಡ್ ಹೇಳಿದಂತೆ ಕೇಳಬೇಕಾಗುತ್ತೆದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಯಡಿಯೂರಪ್ಪನವರ ಸದ್ಯದ ನಡೆ ನೋಡಿದ್ರೆ, ನಾಯಕತ್ವ ಬದಲಾವಣೆ ಮಾಡಲು ಹೈಕಮಾಂಡ್ ನಿರ್ಧರಿಸಿದ್ದು, ಇದಕ್ಕೆ ಬಿಎಸ್‌ವೈ ಕೆಳಗಿಳಿಯಲು ಸಜ್ಜಾಗಿದ್ದಾರೆ.

"

click me!