ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಪ್ರಯತ್ನಗಳಿಗೆ ಜೀವನದಲ್ಲಿ ಅಷ್ಟುದೊಡ್ಡ ನ್ಯಾಯ ಸಿಕ್ಕಿಲ್ಲ. ಕೆಲ ಷಡ್ಯಂತ್ರಗಳು ಅವರನ್ನು ಹಿಂದೆಳೆಯುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕಮಗಳೂರು (ಮಾ.06): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಪ್ರಯತ್ನಗಳಿಗೆ ಜೀವನದಲ್ಲಿ ಅಷ್ಟುದೊಡ್ಡ ನ್ಯಾಯ ಸಿಕ್ಕಿಲ್ಲ. ಕೆಲ ಷಡ್ಯಂತ್ರಗಳು ಅವರನ್ನು ಹಿಂದೆಳೆಯುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಯಡಿಯೂರಪ್ಪನವರಿಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಈ ಕ್ಷೇತ್ರದಲ್ಲಿ ನಿಂತು ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ಯಡಿಯೂರಪ್ಪ ಅವರಿಗೆ ಜನರ ಪ್ರೀತಿ, ವಿಶ್ವಾಸ ಬಹಳ ದೊಡ್ಡ ಪ್ರಮಾಣದಲ್ಲಿದೆ.
ಆದರೆ, ಅವರ ಹೋರಾಟ-ಪ್ರಯತ್ನಕ್ಕೆ ಅಷ್ಟುದೊಡ್ಡ ನ್ಯಾಯ ಸಿಗಲಿಲ್ಲ ಎಂದರು. ಕೆಲ ಷಡ್ಯಂತ್ರಗಳು ಅವರನ್ನು ಹಿಂದೆಳೆಯುವಂಥ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ. ಆದರೆ, ಯಡಿಯೂರಪ್ಪ ಅಂದ್ರೆ ಯಡಿಯೂರಪ್ಪ, ಅದ್ಯಾವುದಕ್ಕೂ ಅವರು ಜಗ್ಗಲಿಲ್ಲ, ಬಗ್ಗಲಿಲ್ಲ ಎಂದು ಹೇಳಿದರು. ಯಡಿಯೂರಪ್ಪನವರಂಥ ನಾಯಕರನ್ನು ಕಂಡಿರುವುದು ಕರ್ನಾಟಕದ ಸೌಭಾಗ್ಯ. ಅಂಥವರನ್ನು ಗುರುತಿಸಿ ರೇಣುಕಾಚಾರ್ಯ ಪ್ರಶಸ್ತಿ ನೀಡುತ್ತಿರುವ ಶ್ರೀಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು.
ನವ ಭಾರತ ನಿರ್ಮಾಣ ಮಾಡಲು ಆಶೀರ್ವದಿಸಿ: ಸಿಎಂ ಬೊಮ್ಮಾಯಿ
ಬ್ರಿಟಿಷರ ವಂಶಾವಳಿ ನಾಶಕ್ಕೆ ಕಾಂಗ್ರೆಸ್ ಸೋಲಿಸಿ: ಬ್ರಿಟಿಷರ ವಂಶಾವಳಿಯನ್ನು ಬೇರು ಸಮೇತ ಕಿತ್ತೊಗೆಯಬೇಕಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಕರೆ ನೀಡಿದರು. ದೇಶದಲ್ಲಿ ಕಾಂಗ್ರೆಸ್ ಕೊನೆಯ ವಿಧಾನಸಭಾ ಚುನಾವಣೆಯನ್ನು ಕರ್ನಾಟಕದಲ್ಲಿ ಎದುರಿಸುತ್ತಿದೆ. ಎಲ್ಲ ಕಡೆಯಲ್ಲಿಯೂ ಸೋತು ಧೂಳಿಪಟವಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ದೇಶಾದ್ಯಂತ ಬೇರು ಸಮೇತ ಕಿತ್ತು ಹಾಕಿದಂತಾಗಲಿದೆ. ಬ್ರಿಟಿಷರ ವಂಶಾವಳಿ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ವಿಜಯ ಪತಾಕೆಗೆ ಉತ್ತರ ಪೂರ್ವ ರಾಜ್ಯಗಳು ಸೇರಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಅಮಿತ್ ಶಾ ಅವರ ಸಂಘಟನಾ ಶಕ್ತಿಗೆ ಉತ್ತರ ಪೂರ್ವದಲ್ಲಿ ಕೇಸರಿ ಮತ್ತು ಕಮಲ ಅರಳಿದೆ. ದೇಶದ ಎಲ್ಲಾ ಕಡೆ ಗೆಲ್ಲುತ್ತಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು. ಆದರೆ ನಿಜವಾಗಿಯೂ ಭಾರತವನ್ನು ಇಬ್ಭಾಗ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶವನ್ನು ಜೋಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿಕೊಂಡು ಬಂದಿದ್ದಾರೆ. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಯೋಜನೆಗಳನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೇ, ಸಂಧ್ಯಾ ಸುರಕ್ಷಾ ಯೋಜನೆಗಳನ್ನು ನೀಡಿದ್ದರೆ, ನಮ್ಮ ಸರ್ಕಾರ ರೈತರು ಸೇರಿದಂತೆ ಹಲವು ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ, ರೈತರಿಗೆ 10ಎಚ್‌ಪಿವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳನ್ನು ನೀಡಲಾಗಿದೆ ಎಂದರು.
ಆಡಳಿತಗಾರನಿಗೆ ತಲೆ ತಣ್ಣಗಿರಬೇಕು, ಹೃದಯ ವಿಶಾಲವಾಗಿರಬೇಕು: ಸಿಎಂ ಬೊಮ್ಮಾಯಿ
ನವ ಬೆಂಗಳೂರು ನಿರ್ಮಾಣಕ್ಕೆ ಸಂಕಲ್ಪ: ದೇವನಹಳ್ಳಿ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿ ನವ ಬೆಂಗಳೂರು ನಿರ್ಮಾಣ ಮಾಡಲಾಗುವುದು. ಕೈಗಾರಿಕಾ ಪಾರ್ಕ್, ಸಾಫ್ಟ್‌ವೇರ್ ಪಾರ್ಕ್, ಸ್ಟಾರ್ಚ್ ಆಪ್ ಪಾರ್ಕ್ ದೇವನಹಳ್ಳಿಯ ಅಕ್ಕಪಕ್ಕದಲ್ಲಿ ಆಗುತ್ತಿವೆ. ಇಷ್ಟುವರ್ಷ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಮೋಸ ಮಾಡಿದೆ. ನಿಜವಾದ ಅಭಿವೃದ್ಧಿ ಬಿಜೆಪಿ ಸರ್ಕಾರ ಮಾಡಿದೆ. ಬೆಂಗಳೂರು ಗ್ರಾಮೀಣ ಜಿಲ್ಲೆಗಳನ್ನು ಅಭಿವೃದ್ಧಿ ಮಾಡುವ ಗುರಿ ನಮ್ಮದಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.