ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರಿಯಾಂಕ್‌ ವಿರೋಧವೇಕೆ: ಸಿಎಂ ಬೊಮ್ಮಾಯಿ

By Govindaraj S  |  First Published Sep 19, 2022, 4:15 AM IST

ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.


ಬೆಂಗಳೂರು (ಸೆ.19): ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಐದು ಸಾವಿರ ಕೋಟಿ ರು. ಅನುದಾನ ಘೋಷಣೆ ಮಾಡಿರುವುದನ್ನು ಸ್ವಾಗತಿಸುವುದು ಬಿಟ್ಟು ವಿರೋಧಿಸುತ್ತಿರುವುದು ಯಾಕೆಂಬುದು ನನಗೆ ಅರ್ಥವಾಗುತ್ತಿಲ್ಲ ಎಂದರು. ಅವರು ವಿರೋಧಿಸಿರುವುದನ್ನು ನೋಡಿದರೆ, ಈ ಪ್ರದೇಶ ಸದಾ ಹಿಂದುಳಿದಿರಲಿ ಎಂಬುದೇ ಅವರ ಇಚ್ಛೆಯಾಗಿದೆಯೇ ಎಂದು ಪ್ರಶ್ನಿಸಿದರು. 

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಐದು ಸಾವಿರ ಕೋಟಿ ರು. ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಒದಗಿಸುವುದಾಗಿ ಶನಿವಾರ ಅತ್ಯಂತ ಬದ್ಧತೆಯಿಂದಲೇ ಘೋಷಿಸಿದ್ದೇನೆ. ಕಳೆದ ವರ್ಷ ಮೂರು ಸಾವಿರ ಕೋಟಿ ರು. ಅನುದಾನ ಘೋಷಿಸಿದ್ದೆ. ಅದನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಪ್ರಿಯಾಂಕ್‌ ಖರ್ಗೆ ಅವರು ಇದನ್ನು ಸ್ವಾಗತಿಸಬೇಕಾಗಿತ್ತು. ಆದರೆ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಮುಂದಾದಾಗ ಎಲ್ಲರೂ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಇದರಲ್ಲಿ ರಾಜಕಾರಣದ ಮಾತಾಡುವುದು ಸರಿಯಲ್ಲ ಎಂದು ಇದೇ ವೇಳೆ ಹೇಳಿದರು.

Tap to resize

Latest Videos

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ತಾತ್ವಿಕ ಒಪ್ಪಿಗೆ:ಉ.ಕನ್ನಡದ ಬಹುದಿನಗಳ ಬೇಡಿಕೆ ಈಡೇರಲಿದ್ಯಾ?

ಪ್ರಿಯಾಂಕ ಖರ್ಗೆಗೆ ಕೌರವನ ತಿರುಗೇಟು: ಜೊಲ್ಲು ಸುರಿಸುವುದರಲ್ಲಿ ಕಾಂಗ್ರೆಸ್ಸಿಗರೇ ನಿಸ್ಸೀಮರು. ಹೈ-ಫೈ ಜೀವನ ನಡೆಸಿದ ಅವರಿಗೆ ಜೊಲ್ಲು ಸುರಿಸುವುದು ಚೆನ್ನಾಗಿ ಗೊತ್ತು. ಪಕ್ಷದ ಹಿರಿಯರು ಪ್ರಿಯಾಂಕ ಖರ್ಗೆಗೆ ಸಂಸ್ಕಾರ ಕಲಿಸಲಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಹೈದರಾಬಾದ ಕರ್ನಾಟಕಕ್ಕೆ .5 ಸಾವಿರ ಕೋಟಿ ಅನುದಾನ ಬಂದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಜೊಲ್ಲು ಸುರಿಸುತ್ತಾರೆ ಎಂಬ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ಹೇಳಿಕೆಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಬಿ.ಸಿ.ಪಾಟೀಲ, ಕಾಂಗ್ರೆಸ್‌ ನಾಯಕರಿಗೆ ವಾಸ್ತವದ ಅರಿವಿಲ್ಲ. ರೈತರ ಬಗ್ಗೆ ಕಾಳಜಿಯಂತೂ ಮೊದಲೇ ಇಲ್ಲ. ಹೀಗಾಗಿ, ಮನಸ್ಸಿಗೆ ತೋಚಿದಂತೆ ಎಲುಬಿಲ್ಲದ ನಾಲಿಗೆ ಹರಿಬಿಡುತ್ತಾರೆ. ಈ ಹಿಂದೆಯೇ ಅವರು ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದು, ಇದು ಅವರ ಹಾಗೂ ಕಾಂಗ್ರೆಸ್‌ನ ಸಂಸ್ಕೃತಿ ತಿಳಿಸುತ್ತದೆ ಎಂದರು. 

ಮುಖ್ಯಮಂತ್ರಿ ಬೊಮ್ಮಾಯಿ ಉದ್ರಿ ಭಾಷಣ ಮಾಡುತ್ತಾರೆ ಎಂದು ಕಾಂಗ್ರೆಸ್‌ ಮುಖಂಡರ ಆರೋಪಕ್ಕೆ ಬಿ.ಸಿ. ಪಾಟೀಲ, ಬೊಮ್ಮಾಯಿ ಉದ್ರಿ ಭಾಷಣ ಮಾಡುವಷ್ಟುದಡ್ಡರಲ್ಲ. ಅವರೊಬ್ಬ ಚಾಣಾಕ್ಷ ರಾಜಕಾರಣಿ. ಭಾಷಣ ಮಾಡುವುದೂ ಗೊತ್ತು. ಹಿಡಿದ ಕಾರ್ಯ ಸಾಧಿಸುವುದೂ ಗೊತ್ತು. ಖರ್ಗೆಯಿಂದ ಕಲಿಯುವುದು ಅನಗತ್ಯ ಎಂದರು. ರಾಜ್ಯಕ್ಕೆ ಕೇರಳ ಪ್ರಧಾನ ಮಂತ್ರಿ ಬರುವ ಹಿನ್ನಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳಕ್ಕೆ ಬರಲಿಲ್ಲ. ಮೇಳ ಉದ್ಘಾಟನೆ ಜವಾಬ್ದಾರಿ ನನಗೆ ವಹಿಸಿ, ನನ್ನನ್ನು ಕಳುಹಿಸಿದ ಹಿನ್ನಲೆ ಬಂದು ಮೇಳ ಉದ್ಘಾಟಿಸಿದ್ದಾಗಿಯೂ ಹಾಗೂ ಸಿಎಂ ಮೇಳಕ್ಕೆ ಬಾರದ ಕುರಿತು ಕಾರಣವನ್ನೂ ನೀಡಿದರು.

ಉಜ್ವಲ ಭವಿಷ್ಯಕ್ಕೆ ನಿರಂತರ ಶ್ರಮ, ಗುರಿ ಇರಲಿ: ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಗುರಿ, ನಿರಂತರ ಶ್ರಮ ಹಾಗೂ ಶಿಸ್ತಿನ ಕಡೆ ಗಮನ ಕೇಂದ್ರೀಕರಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಸಲಹೆ ನೀಡಿದರು. ಪಟ್ಟಣದ ಎಸ್‌ವಿ ಪಿಯು ಕಾಲೇಜಿನಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ‘ರಾಜಕೀಯ ವ್ಯಕ್ತಿಗಳು ಚುನಾವಣೆ ಮುಗಿದ ನಂತರ ಗೆದ್ದು 4 ವರ್ಷ ನಾಪತ್ತೆಯಾಗುತ್ತಾರೆ. 

ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್‌: ಸಿಎಂ ಬೊಮ್ಮಾಯಿ ಅಶ್ವಾಸನೆ

ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಇದಕ್ಕೆಲ್ಲ ನೀವೇ ಕಾರಣ. ರಾಜಕೀಯ ನಾಯಕರನ್ನು ಗೆಲ್ಲಿಸಿದ ನಂತರ ಅವರನ್ನು ಹೊಗಳುತ್ತಾ, ಹುಚ್ಚಿನ ಅಭಿಮಾನದಲ್ಲಿ ತೇಲಾಡಿ, ಅವರನ್ನು ದೇವರಾಗಿ ಮಾಡಿಕೊಳ್ಳುತ್ತೀರಿ. ಚುನಾವಣೆ ಬಂದಾಗ ಅವರನ್ನು ಎಲ್ಲ ಕಡೆ ಕರೆದುಕೊಂಡು ಹೋಗಿ ಗುಡಿ-ಮಂದಿರ ಹಾಗೂ ಸಮಸ್ಯೆಗಳ ಬಗ್ಗೆ ಕೇಳುತ್ತೀರಿ. ಗೆದ್ದ ನಂತರ ನೀವು ಏಕೆ ಅವರನ್ನು ಪ್ರಶ್ನಿಸುವುದಿಲ್ಲ. 5 ವರ್ಷಗಳ ನಂತರ ರಿನವಲ್‌ ಮಾಡಲು ಬಂದಾಗಲೂ ನೀವು ಯೋಚಿಸಿ ಆಯ್ಕೆ ಮಾಡುವ ಮೂಲಭೂತ ಮತದಾನದ ಹಕ್ಕನ್ನು ಸರಿಯಾಗಿ ಬಳಸಿಕೊಳ್ಳಿ. ಆಗ ರಾಜಕಾರಣಿಗಳು ಕೆಲಸ ಮಾಡುತ್ತಾರೆ. ಜನರ ಅಂಜಿಕೆ ಅವರಲ್ಲಿ ಮೂಡಿಸಬೇಕು ಎಂದು ಹೇಳಿದರು.

click me!