ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಬಗ್ಗೆ ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಈಗ ಹೇಳುತ್ತಿರುವ ನೀವೇ ಅಂದು ಮೊದಲ ಹೆಜ್ಜೆ ಇಟ್ಟಿದ್ದರೆ, ಇಷ್ಟು ಹೊತ್ತಿಗೆ ಶೆಡ್ಯೂಲ್‌ಗೆ ಸೇರಿರುತ್ತಿತ್ತು. ಮೊದಲ ಹೆಜ್ಜೆ ಇಡುವುದಕ್ಕೂ ಮನಸ್ಸು, ಹೃದಯ ಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.
ದಾವಣಗೆರೆ (ಫೆ.10): ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಬಗ್ಗೆ ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಈಗ ಹೇಳುತ್ತಿರುವ ನೀವೇ ಅಂದು ಮೊದಲ ಹೆಜ್ಜೆ ಇಟ್ಟಿದ್ದರೆ, ಇಷ್ಟು ಹೊತ್ತಿಗೆ ಶೆಡ್ಯೂಲ್‌ಗೆ ಸೇರಿರುತ್ತಿತ್ತು. ಮೊದಲ ಹೆಜ್ಜೆ ಇಡುವುದಕ್ಕೂ ಮನಸ್ಸು, ಹೃದಯ ಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.
ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಾತ್ರೆ-2023 ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮೊದಲ ಹೆಜ್ಜೆಯನ್ನೇ ಇಡದೆ, ಈಗ ಎರಡನೇ ಹೆಜ್ಜೆ ಬಗ್ಗೆ ಮಾತನಾಡುತ್ತಾರೆ. ನಿಮ್ಮದೇ ಅಧಿಕಾರವಿದ್ದಾಗ, ನಿಮ್ಮ ಕೈಯಲ್ಲೇ ಆ ಶಕ್ತಿ ಇದ್ದಾಗ ಮೊದಲ ಹೆಜ್ಜೆ ಇಡುವ ಮನಸ್ಸು, ಹೃದಯವನ್ನು ಯಾಕೆ ಮಾಡಲಿಲ್ಲ. ಪರಿಶಿಷ್ಟರು ಕಷ್ಟದಲ್ಲಿದ್ದಾರೆ. ಅಂತಹವರಿಗೆ ಮೀಸಲಾತಿ ಹೆಚ್ಚಿಸಬೇಕೆಂಬ ಅರಿವು ಇದ್ದುದರಿಂದಲೇ ಮೀಸಲಾತಿ ಹೆಚ್ಚಿಸಿದ್ದೇವೆ. ಅವೇ ಜನಾಂಗಗಳ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆಂಬ ಅರಿವಿರಬೇಕು. ಶೆಡ್ಯೂಲ್‌ಗೆ ಸೇರಿಸುವ ಕೆಲಸವೂ ಆಗುತ್ತದೆ ಎಂದು ಪರಿಶಿಷ್ಟರಿಗೆ ಭರವಸೆ ನೀಡಿದರು.
ಪ್ರಧಾನಿ ಮೋದಿ ಅವರಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಬಿಎಸ್‌ವೈ ಹೆಸರು ಮರೆತ್ರಾ ಸಿಎಂ ಬೊಮ್ಮಾಯಿ
ಪರಿಶಿಷ್ಟ ಪಂಗಡಕ್ಕೆ ಒಂದು ಪ್ರತ್ಯೇಕ ಇಲಾಖೆ ಬೇಕೆಂಬುದಾಗಿ ಸ್ವಾಮೀಜಿ ಹಿಂದೆ ಜಾತ್ರೆ ವೇಳೆ ಹೇಳಿದ್ದರು. ನಾನು ಸಿಎಂ ಆಗಿ ಮೊದಲ ತೀರ್ಮಾನ ಕೈಗೊಂಡು, ಎಸ್‌ಟಿ ಇಲಾಖೆ ಮಾಡಿದ್ದೇನೆ. ಎಲ್ಲಾ ಕಾರ್ಯಕ್ರಮಗಳು ಅದರಡಿ ಅನುಷ್ಠಾನವಾಗುತ್ತವೆ. ಇಲಾಖೆಗೆ ಅನುದಾನ ಹೆಚ್ಚಿಸಿದ್ದೇವೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿ, ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಸರ್ಕಾರ ಎಸ್ಟಿ ಬುಡಕಟ್ಟು ಜನಾಂಗಕ್ಕೆ ಹೆಚ್ಚು ಅನುದಾನ ನೀಡುತ್ತಿದೆ. ಇಡೀ ದೇಶದ ಇತಿಹಾಸದಲ್ಲೇ ಮೋದಿ ಸರ್ಕಾರ ಮಾತ್ರ ಇದನ್ನು ಮಾಡಿದೆ. ಕಾಡಿನಂಚಿನಲ್ಲಿದ್ದ ಬುಡಕಟ್ಟು ಮಹಿಳೆಗೆ ದೇಶದ ಅತ್ಯುನ್ನತ ಸ್ಥಾನಮಾನ ಸಿಕ್ಕಿದೆ. ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿರುವುದೇ ಇದಕ್ಕೆ ಸಾಕ್ಷಿ. ಅನೇಕ ಶಾಸಕರಿಗೆ ಸಚಿವ, ನಿಗಮ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈಗ ಎಸ್ಟಿಸಮುದಾಯದ ಬಳಿಗಾರ, ಈಟೇರಗೆ ನಿಗಮ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದರು. ಅಲ್ಲದೆ, ವಾಲ್ಮೀಕಿ ಪೀಠಕ್ಕೆ ಸುಮಾರು 70 ಅಡಿಗೂ ಎತ್ತರದ ತೇರನ್ನು ಸಚಿವ ಆನಂದ ಸಿಂಗ್ ಸಮರ್ಪಿಸಿದ್ದಾರೆ ಎಂದು ಹೇಳಿದರು.
ಇಂದಿನಿಂದ ಐತಿಹಾಸಿಕ ಲಕ್ಕುಂಡಿ ಉತ್ಸವ: ಶಿಲ್ಪಕಲೆಯ ತವರು ನೆಲ ಐತಿಹಾಸಿಕ ‘ಲಕ್ಕುಂಡಿ ಉತ್ಸವ’ ಶುಕ್ರವಾರದಿಂದ ಮೂರು ದಿನಗಳ ಕಾಲ ಜರುಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವಕ್ಕೆ ಸಂಜೆ 6.15ಕ್ಕೆ ಚಾಲನೆ ನೀಡಲಿದ್ದು, ಉತ್ಸವದ ಯಶಸ್ಸಿಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಡಿನ ಹೆಸರಾಂತ ಹಾಗೂ ಸ್ಥಳೀಯ ಕಲಾವಿದರಿಂದ 3 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದ ದೇವಸ್ಥಾನಗಳಿಗೆ ವಿದ್ಯುತ್ ಅಲಂಕಾರ ಮಾಡಿದ್ದು, ಲಕ್ಕುಂಡಿ ಗ್ರಾಮದ ಪ್ರತಿ ಬೀದಿಗಳಲ್ಲೂ ರಂಗೋಲಿ, ತಳಿರು ತೋರಣಗಳನ್ನು ಕಟ್ಟಲಾಗಿದೆ.
ಚಿತ್ರದುರ್ಗದ ಮೂರು ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಅಬ್ಬರ: ಬಿಜೆಪಿ ಸರ್ಕಾರದ ವಿರುದ್ದ ಡಿಕೆಶಿ ವಾಗ್ದಾಳಿ
ಉತ್ಸವಕ್ಕೆ ಆಗಮಿಸುವ ಎಲ್ಲರಿಗೂ ಗ್ರಾಮದ ಹಲವು ಕಡೆಗಳಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ಸವಕ್ಕೂ ಮುನ್ನಾ ದಿನವಾದ ಗುರುವಾರ ಸಿರಿಧಾನ್ಯಗಳ ಮಹತ್ವ ಸಾರುವ ಕುರಿತು ಗದಗ ಜಿಲ್ಲಾಡಳಿತ, ಜಿಪಂ, ಕೃಷಿ, ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ಪಾರಂಪರಿಕ ನಡಿಗೆ (ಜಾಥಾ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ನಾಡಿನ ಸಾಂಸ್ಕೃತಿಕ ಉಡುಗೆ ತೊಟ್ಟು ಪಾರಂಪರಿಕ ನಡಿಗೆಗೆ ಮೆರುಗು ತಂದರು.