ಬಿಎಸ್‌ ಸಂತೋಷ್ ಭೇಟಿಯಾದ ಸಿಎಂ: ದಿಲ್ಲಿಯಲ್ಲಿ ಸಂಪುಟ ಸರ್ಕಸ್

By Suvarna NewsFirst Published Aug 2, 2021, 4:05 PM IST
Highlights

* ದೆಹಲಿಯಲ್ಲಿ ಕರ್ನಾಟಕ ಸಚಿವ ಸಂಪುಟ ಸರ್ಕಸ್
* ಸಂಪುಟ ರಚನೆಗೆ ದಿಲ್ಲಿಯಲ್ಲಿ ಬೀಡುಬಿಟ್ಟ ಸಿಎಂ ಬೊಮ್ಮಾಯಿ
* ಹೈಕಮಾಂಡ್ ನಾಯಕರ ಭೇಟಿ

ನವದೆಹಲಿ, (ಅ.02) ಸಚಿವ ಸಂಪುಟ ರಚನೆ ಸಂಬಂಧ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ನಿನ್ನೆ ಭಾನುವಾರ ಮಧ್ಯರಾತ್ರಿವರೆಗೂ ಸಿಎಂ ಬೆಂಗಾವಲು ಪಡೆ ಬಿಟ್ಟು  ಅಜ್ಞಾತ ಸ್ಥಳದಲ್ಲಿದ್ದರು. ಇದು ಹಾಗಾದ್ರೆ ಮಧ್ಯರಾತ್ರಿವರೆಗೂ ಬಸವರಾಜ ಬೊಮ್ಮಾಯಿ ಎಲ್ಲಿಗೆ ಹೋಗಿದ್ರು ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ಇನ್ನು ಇಂದು (ಸೋಮವಾರ) ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ  ಸಿಎಂ ಆಯ್ಕೆಗೆ ವೀಕ್ಷಕರಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್ ಅವರನ್ನ ಭೇಟಿಯಾದರು. ಈ ವೇಳೆ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯೇಂದ್ರಗೆ ಸಿಗುತ್ತಾ ಮಂತ್ರಿಗಿರಿ? ಸಿಎಂ ಪ್ರತಿಕ್ರಿಯಿಸಿದ್ದು ಹೀಗೆ

ಇನ್ನು ಸೋಮವಾರ ಸಂಜೆ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಿ  ನೂತನ ಸಚಿವರ ಪಟ್ಟಿಯನ್ನು ಫೈನಲ್ ಮಾಡಿಕೊಂಡು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. 

ಈಗಾಗಲೇ ಬೊಮ್ಮಾಯಿ ತಮ್ಮ ಒಂದು ಸಚಿವ ಪಟ್ಟಿ ತೆಗೆದುಕೊಂಡು ಹೋಗಿದ್ದು, ಅದಕ್ಕೆ ನಡ್ಡಾ ಅವರು ಗ್ರೀನ್ ಸಿಗ್ನಲ್ ಕೊಡುತ್ತಾರಾ ಅಥವಾ ತಮ್ಮದೇ ಒಂದು ಪಟ್ಟಿಯನ್ನು ನೀಡುತ್ತಾರಾ ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ. 

ಒಟ್ಟಿನಲ್ಲಿ ಸಂಪುಟ ಸರ್ಕಸ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ, ಬುಧವಾರ ಇಲ್ಲ ಗುರುವಾರ ನೂತನ ಸಚಿವ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

click me!