ಸಿಎಂ ಬದಲಾವಣೆ ಎಲ್ಲಾ ವದಂತಿ, ಕಾಂಗ್ರೆಸ್ ಗೆ ಬುದ್ದಿ ಭ್ರಮಣೆ ಆಗಿದೆ: ಆರ್ ಅಶೋಕ್ ವಾಗ್ದಾಳಿ

By Gowthami KFirst Published Aug 10, 2022, 5:11 PM IST
Highlights

ಕಂದಾಯ ಸಚಿವ ಆರ್ ಅಶೋಕ್ ಕಾಂಗ್ರೆಸ್ ನವರಿಗೆ ಬುದ್ಧಿ ಭ್ರಮಣೆ ಆಗಿರಬೇಕು. ಅಮಿತ್ ಶಾ, ಪ್ರಧಾನಿ ಮೋದಿ ಕಾಂಗ್ರೆಸ್ಸಿಗರಿಗೆ ಹೇಳಿದ್ದಾರೆಯೇ? ಸಿಎಂ ಬದಲಾವಣೆ ವದಂತಿ ಸೃಷ್ಠಿ ಕಾಂಗ್ರೆಸ್ ಬಲಹೀನತೆ ತೋರುತ್ತಿದೆ ಎಂದು ಕಿಡಿಕಾರಿದರು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.10): ಇಂದು ಮೊಳಕಾಲ್ಮೂರಿನಲ್ಲಿ ನಡೆದ ತಾಲ್ಲೂಕು ಆಡಳಿತ ಸೌಧ ಉದ್ಘಾಟನೆ ಕಾರ್ಯಕ್ರಮದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಟ್ವೀಟ್ ಬಗ್ಗೆ ಕಿಡಿಕಾರಿದರು. ಕಾಂಗ್ರೆಸ್ ನವರಿಗೆ ಬುದ್ಧಿ ಭ್ರಮಣೆ ಆಗಿರಬೇಕು. ಅಮಿತ್ ಶಾ, ಪ್ರಧಾನಿ ಮೋದಿ ಕಾಂಗ್ರೆಸ್ಸಿಗರಿಗೆ ಹೇಳಿದ್ದಾರೆಯೇ? ಸಿಎಂ ಬದಲಾವಣೆ ವದಂತಿ ಸೃಷ್ಠಿ ಕಾಂಗ್ರೆಸ್ ಬಲಹೀನತೆ ತೋರುತ್ತಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಪ್ರವಾಹ ಸ್ಥಿತಿಯಿದೆ, ಕಾಂಗ್ರೆಸ್ಸಿಗರು ಎಲ್ಲೂ ಬರುತ್ತಿಲ್ಲ. ಸಿದ್ಧರಾಮೋತ್ಸವ ಬಳಿಕ ಕಾಂಗ್ರೆಸ್ಸಲ್ಲಿ ಒಳ ಜಗಳ ಹೆಚ್ಚಳ ಆಗ್ತಿದೆ. ಸಿದ್ಧರಾಮೋತ್ಸವ ವಿರುದ್ಧ ಬೆಂಗಳೂರಲ್ಲಿ ಡಿಕೆಶಿ ನೇತೃತ್ವದಲ್ಲಿ ಪಾದಯಾತ್ರೆ ಮಾಡಲು ಸಜ್ಜಾಗಿದ್ದಾರೆ. ದಾವಣಗೆರೆಯಲ್ಲಿ ಸಿದ್ಧರಾಮಯ್ಯ, ಜಮೀರ್ ಆಟ ನಡೆಯಿತು. ಈಗ ಬೆಂಗಳೂರಲ್ಲಿ ಡಿಕೆಶಿ, ಬೆಂಬಲಿಗರ ಆಟ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ ಗೊಂದಲ ಕೊಳೆತು ನಾರುತ್ತಿದೆ. ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಬದಲಾವಣೆ ವದಂತಿ ಟ್ವಿಸ್ಟ್ ನೀಡುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ದೇಶದಲ್ಲಿ ಕಾಂಗ್ರೆಸ್ ವಿಪಕ್ಷವಾಗಿರಲು ನಾಲಾಯಕ್ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರ ನೇಮಕ ಮಾಡುವ ಯೋಗ್ಯತೆ ಇಲ್ಲ. 1ವರ್ಷದಿಂದ ಸಾಯ್ತಾ ಇದ್ದಾರೆ, ಅಧ್ಯಕ್ಷರ ಆಯ್ಕೆಗೆ ಯೋಗ್ಯತೆಯಿಲ್ಲ ಎಂದು ಕಿಡಿಕಾರಿದರು.

ಸಿಎಂ ಬಸವರಾಜ ಬೊಮ್ಮಾಯಿ ಸರಳ ಮುಖ್ಯಮಂತ್ರಿ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಿಎಂ ಸಹ ಬೊಮ್ಮಾಯಿ ಎಂದು ನಾವು ಬಹಿರಂಗವಾಗಿ ಹೇಳಿದ್ದೇವೆ. ಕಾಂಗ್ರೆಸ್ ಗೆ ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ ಎಂದು ಸವಾಲಾಕಿದರು. ಸಿಎಂ ಅಭ್ಯರ್ಥಿ ಘೋಷಿಸಿದರೆ ಕಾಂಗ್ರೆಸ್ ಎರಡು ಹೋಳು ಆಗಲಿದೆ. ಸಿದ್ದು ಕಾಂಗ್ರೆಸ್, ಡಿಕೆ ಕಾಂಗ್ರೆಸ್ಸಾಗಿ ಹೋಳಾಗಲಿದೆ ಎಂದು ಭವಿಷ್ಯ ನುಡಿದರು‌.

40% ಭ್ರಷ್ಟಾಚಾರ ಮಿತಿ ಮೀರಿದ್ದು ಹೈಕಮಾಂಡ್ ಗೆ ತಿಳಿದಿರಬೇಕು ಅದ್ಕೆ ಸಿಎಂ ಬದಲಾವಣೆ ಮಾಡಲಾಗ್ತಿದೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ, ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಶೇ60% ಕಮಿಷನ್ ಇತ್ತು. ಆಗ ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯರನ್ನು ಬದಲಿಸಿದರೇನು? ಎಂದು ಪ್ರಶ್ನಿಸಿದರು. ಶೇ10, ಶೇ 40 ಕಮಿಷನ್ ಎಂಬುದು ಎಲ್ಲಾ ಸುಳ್ಳು. ದಾಖಲೆಗಳು ಇದ್ದರೆ ಕಾಂಗ್ರೆಸ್ ನವರು ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು. ಗುತ್ತಿಗೆದಾರರು ಈವರೆಗೆ ದಾಖಲೆ ಬಿಡುಗಡೆ ಮಾಡಿಲ್ಲ. 

ಸಿಎಂ ಬದಲಾವಣೆ ಚರ್ಚೆ: ಊಹಾಪೋಹಳಿಗೆ ಸ್ಪಷ್ಟನೆ ಕೊಟ್ಟ ಕಟೀಲ್

ನಮಗೆ ಮೋದಿ ನಾಯಕತ್ವ ಇದೆ, ನಿಮಗೆ ನಾಯಕತ್ವವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು‌. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಟ್ಟೆಯ ನೊಣ ನೋಡಲು ಬರಬೇಡಿ. ದೇಶದ ಬಗ್ಗೆ, ಭಾರತ ಪ್ರೇಮದ ಬಗ್ಗೆ ಯಾರೂ ಬಿಜೆಪಿಗೆ ಪ್ರಶ್ನೆ ಮಾಡಲಾಗದು. ಸಿದ್ಧರಾಮಯ್ಯ ಜನತಾದಳದಿಂದ ಕಾಂಗ್ರೆಸ್ ಗೆ ಬಂದಿದ್ದಾರೆ‌. ಜನತಾ ದಳದ ಟ್ರೇನಿಂಗ್ ಕ್ಯಾಂಪಿನಿಂದ ಬಂದವರು. ಪಕ್ಷಾಂತರ ಮಾಡಿದವರೇ ಹೆಚ್ಚು ಜೋರಾಗಿ ಮಾತಾಡೋದು. ನಮ್ಮ ಪಕ್ಷದ ಅಧ್ಯಕ್ಷರು ಪಕ್ಕಾ ಇಂಡಿಯನ್, ಬೇರೆ ದೇಶದಿಂದ ಬಂದಿಲ್ಲ. ದೇಶ ಗೌರವ ಇಲ್ಲದವರು ಬೇರೆ ದೇಶದವರನ್ನು ಹಿಡಿದು ತರುತ್ತಾರೆ.

ಸಿಎಂ ಬದಲಾವಣೆ ಚರ್ಚೆ: ಬಿಎಸ್‌ವೈ ಬದಲಾಗೋದು ಗೊತ್ತಿತ್ತು...ಬೊಮ್ಮಾಯಿ ಬಗ್ಗೆ ಸಿದ್ದು ಹೇಳಿದ್ದಿಷ್ಟು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಗೊಂದಲ ಇದೆ. ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರೇ ಗೊಂದಲ ಇದೆ. ಇಬ್ಬರೂ ಏಕಾಭಿನಯ ಪಾತ್ರ ಮಾಡುತ್ತಾರೆ. RSS ಕಚೇರಿ ಮೇಲೆ ತಿರಂಗಾ ತುಂಬಾ ವರ್ಷಗಳಿಂದ ಹಾರಿಸಲಾಗುತ್ತಿದೆ. ಸಿದ್ಧರಾಮಯ್ಯ ಗೊತ್ತಿಲ್ಲದೆ ಈ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಹೇಳಿದರು.

click me!