ಕೊಪ್ಪಳ: ಕುಡಿವ ನೀರಿನ ಘಟಕದಲ್ಲಿ ರಾರಾಜಿಸುತ್ತಿದೆ ಸಿಎಂ, ಸಚಿವರ ಫೋಟೋ..!

By Kannadaprabha News  |  First Published Mar 31, 2024, 9:42 AM IST

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಮೇಲೆ ನೀತಿ ಸಂಹಿತೆ ಜಾರಿಯಾಗಿದೆ. ಇದರಿಂದ ಜನಪ್ರತಿನಿಧಿಗಳ ಭಾವಚಿತ್ರ, ಪಕ್ಷಗಳ ಚಿಹ್ನೆ, ಸರ್ಕಾರದ ಸಾಧನೆಗಳ ಮಾಹಿತಿಯಳ್ಳ ಪ್ಲೆಕ್ಸ್, ನಾಮಫಲಕಗಳನ್ನು ತೆರವುಗೊಳಿಸುವ ಕೆಲಸವನ್ನು ತಾಲೂಕಾಡಳಿತ, ಪಪಂ ಮಾಡಿದೆ. ಆದರೆ, ಕನಕಾಚಲ ದೇವಸ್ಥಾನದಲ್ಲಿನ ವಾಟರ್‌ ಪ್ಲಾಂಟ್‌ನಲ್ಲಿನ ಸಿಎಂ ಹಾಗೂ ಸಚಿವರ ಭಾವಚಿತ್ರಗಳು ಹಾಗೆಯೇ ಉಳಿದುಕೊಂಡಿವೆ.


ಕನಕಗಿರಿ(ಮಾ.31):  ಇಲ್ಲಿನ ಶ್ರೀ ಕನಕಾಚಲ ದೇವಸ್ಥಾನದ ದಾಸೋಹ ಭವನದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿಯವರ ಭಾವಚಿತ್ರಗಳು ನೀತಿ ಸಂಹಿತೆ ಘೋಷಣೆಯಾಗಿ 15 ದಿನಗಳು ಕಳೆದರೂ ರಾರಾಜಿಸುತ್ತಿವೆ. ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಮೇಲೆ ನೀತಿ ಸಂಹಿತೆ ಜಾರಿಯಾಗಿದೆ. ಇದರಿಂದ ಜನಪ್ರತಿನಿಧಿಗಳ ಭಾವಚಿತ್ರ, ಪಕ್ಷಗಳ ಚಿಹ್ನೆ, ಸರ್ಕಾರದ ಸಾಧನೆಗಳ ಮಾಹಿತಿಯಳ್ಳ ಪ್ಲೆಕ್ಸ್, ನಾಮಫಲಕಗಳನ್ನು ತೆರವುಗೊಳಿಸುವ ಕೆಲಸವನ್ನು ತಾಲೂಕಾಡಳಿತ, ಪಪಂ ಮಾಡಿದೆ. ಆದರೆ, ಕನಕಾಚಲ ದೇವಸ್ಥಾನದಲ್ಲಿನ ವಾಟರ್‌ ಪ್ಲಾಂಟ್‌ನಲ್ಲಿನ ಸಿಎಂ ಹಾಗೂ ಸಚಿವರ ಭಾವಚಿತ್ರಗಳು ಹಾಗೆಯೇ ಉಳಿದುಕೊಂಡಿವೆ.

ತಹಸೀಲ್ದಾ‌ರ್ ಕಚೇರಿ, ತಾಪಂ ಕಚೇರಿ ಇದೇ ದೇವಸ್ಥಾನದ ವ್ಯಾಪ್ತಿಯಕಟ್ಟಡದಲ್ಲಿವೆ. ತಾಲೂಕಾಡಳಿತ ಅಧಿಕಾರಿಗಳು ಇಲ್ಲಿಯೇ ಹಲವು ಬಾರಿ ಓಡಾಡಿದ್ದಾರೆ. ಆದರೆ, ಈ ಇಬ್ಬರು ನಾಯಕರಿರುವ ಬಗ್ಗೆ ಗಮನಕ್ಕೆ ಬಂದಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

Latest Videos

undefined

ಅನಂತಕುಮಾರ ಹೆಗಡೆ ತಲೆಯಲ್ಲಿ ಸಗಣಿ ತುಂಬಿದೆ: ಸಚಿವ ಶಿವರಾಜ ತಂಗಡಗಿ

ನೀತಿ ಸಂಹಿತೆ ಘೋಷಣೆಯಾದ ಬಳಿಕ ರಾಜಕೀಯ ನಾಯಕರ, ಸರ್ಕಾರದ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಲ್ಲದೆ ಬಸ್ ನಿಲ್ದಾಣದಲ್ಲಿನ ಭಾವಚಿತ್ರ, ಕಮಾನುಗಳಲ್ಲಿನ ಭಾವಚಿತ್ರಗಳನ್ನು ಪಪಂ ಸಿಬ್ಬಂದಿ ಮುಚ್ಚಿದ್ದರು. ಆದರೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದಲ್ಲಿನ ಈ ಭಾವಚಿತ್ರಗಳು ಚುನಾವಣಾ ಸಂದರ್ಭ ಅದರಲ್ಲೂ ಕನಕರಾಯನ ಜಾತ್ರೆಯಲ್ಲಿ ರಾರಾಜಿಸುತ್ತಿದ್ದು, ತಾಲೂಕಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

click me!